ಗದಗ

ನೆಮ್ಮದಿಯ ಬದುಕಿಗೆ ಮಹಾತ್ಮರ ಸ್ಮರಣೆ ಅಗತ್ಯ: ಶಿವಶಾಂತವೀರ ಶ್ರೀ

Published On :

ಗದಗ: ಲೋಕ ಕಲ್ಯಾಣಕ್ಕಾಗಿ ಅನೇಕ ಮಹಾತ್ಮರು ತಮ್ಮ ಬದುಕನ್ನೇ ತ್ಯಾಗ ಮಾಡಿದ್ದಾರೆ. ಪರರ ಹಿತದಲ್ಲಿ ಆನಂದವನ್ನು ಕಂಡವರು. ಅಂಥವರನ್ನು ಸ್ಮರಿಸುವುದರಿಂದ ಸುಖ-ಶಾಂತಿ ನೆಮ್ಮದಿ ಸಿಗುತ್ತದೆ ಎಂದು ಬಳಗಾನೂರದ ಚಿಕೇನಕೊಪ್ಪದ ಚನ್ನವೀರಶರಣರ ಮಠದ ಶಿವಶಾಂತವೀರ ಶ್ರೀಗಳು ಹೇಳಿದರು. ನಗರದ ಡಾ. ಮುಳಗುಂದ ಕಂಪೌಂಡದಲ್ಲಿನ ಆಯ್ಕೆ ಕೋಚಿಂಗ ಸಭಾಭವನದಲ್ಲಿ ಈಚೆಗೆ ಏರ್ಪಡಿಸಿದ ಮಣಕವಾಡದ ಮೃತ್ಯುಂಜಯ ಶ್ರೀಗಳ ಸ್ಮರಣೆ ಹಾಗೂ ಎಸ್‌ಎಸ್‌ಎಲ್‌ಸಿ ಬಡ ವಿದ್ಯಾರ್ಥಿಗಳಿಗೆ ಏರ್ಪಡಿಸಿದ ಉಚಿತ ನೋಟ ಬುಕ್ ವಿತರಣಾ ಸಮಾರಂಭದ ಸಾನ್ನಿಧ್ಯವಹಿಸಿ ಮಾತನಾಡಿದರು. ಮಹಾತ್ಮರ ಸ್ಮರಣೆಯಲ್ಲಿ ನಡೆಯುವ ಜನೋಪಯೋಗಿ ಕಾರ್ಯಗಳೆಲ್ಲವೂ ಸತ್ಕಾರ್ಯಗಳಾಗಿರುತ್ತವೆ. ಅದರಿಂದ ಪುಣ್ಯ ಪ್ರಾಪ್ತಿಯಾಗುವುದು. ಅದುವೇ ಮುಕ್ತಿಯ ಮಾರ್ಗವಾಗಿದೆ ಎಂದರು. ಅಧ್ಯಕ್ಷತೆ ವಹಿಸಿದ್ದ ಸಾಹಿತಿ ಐ.ಕೆ. ಕಮ್ಮಾರ ಮಾತನಾಡಿ, ಕೇವಲ ಪಠ್ಯದ ಜ್ಞಾನದಿಂದ ನಾವು ಭವಿಷ್ಯ ರೂಪಿಸಿಕೊಳ್ಳಲು ಸಾಧ್ಯವಿಲ್ಲ. ಜತೆಗೆ ಆಧ್ಯಾತ್ಮದ ಹಸಿವು ಇರಬೇಕು. ಆಧ್ಯಾತ್ಮದ ಅರಿವು ಹೊಂದಿದಾತ ಸತ್ಪ್ರಜೆಯಾಗಬಲ್ಲ ಎಂದರು. ಮಕ್ಕಳ ಸಾಹಿತಿ ಡಾ.  ರಾಜೇಂದ್ರ ಗಡಾದ ಮಾತನಾಡಿದರು. ವಿಶೇಷ ಸಾಧನೆಗೈದ ಸಂಸ್ಥೆಯ ಬಸವರಾಜ ಮಿಣಜಗಿ, ಪ್ರೊ. ಅಸ್ಲಮ ಕಮ್ಮಾರ, ಪ್ರೊ. ನವೀನ ಕುಲಕರ್ಣಿ, ಸ್ನೇಹಾ ಬಡಿಗೇರ, ಅಂಬರೇಶ ಸಿಂಧೆ ಅವರನ್ನು ಸನ್ಮಾನಿಸಲಾಯಿತು. ಶಿವಪ್ಪ ಒಡೆಯರ, ಬಿದರಿ, ಅಂದಾನಪ್ಪ ವಿಭೂತಿ, ಮಣಕವಾಡದ ಈರಣ್ಣ, ಚಾಕಲಬ್ಬಿ, ಮರಬದ, ಹಿರೇಹಂದಿಗೋಳದ ಶಿವಶಂಕರಪ್ಪ ಆರಟ್ಟಿ, ಶ್ರೀರಂಗ ಇಲ್ಲೂರ, ಆಲಂ ಕಮ್ಮಾರ, ಅಕ್ರಮ ಕಮ್ಮಾರ, ರಾಜೇಂದ್ರ ಕಲಬುರ್ಗಿ ವೇದಿಕೆಯಲ್ಲಿದ್ದರು. ವಾಗೇಶ್ವರಿ ಹಾಗೂ ಶ್ವೇತಾ ನಿರ್ವಹಿಸಿದರು. ರೇಷ್ಮಾ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.