ಗದಗ

ಬೇಡಿಕೆ ಈಡೇರಿಕೆಗೆ ತಾಪಂಗೆ ಮುತ್ತಿಗೆ

Published On :

ಕನ್ನಡಪ್ರಭ ವಾರ್ತೆ, ರೋಣ, ಜು. 1
ಕನಿಷ್ಠ ಕೂಲಿ ಮತ್ತು ಭಾರತ ರಾಷ್ಟ್ರೀಯ ಕಾರ್ಮಿಕ ಸಮ್ಮೇಳನ (ಐಎಲ್‌ಸಿ) ಶಿಪಾರಸು ಜಾರಿ ಸೇರಿದಂತೆ ವಿವಿದ ಬೇಡಿಕೆಗಳಿಗೆ ಆಗ್ರಹಿಸಿ ಸಿಐಟಿಯು ತಾಲೂಕು ಪ್ರಾಂತ ಘಟಕ ನೇತೃತ್ವದಲ್ಲಿ ಅಕ್ಷರ ದಾಸೋಹ ನೌಕರರು ಮಂಗಳವಾರ ತಾಪಂಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದರು.
ಪ್ರತಿಭಟನಾ ಮೆರವಣಿಗೆ ಪಟ್ಟಣದ ಸಿದ್ದಾರೂಢ ಮಠದಿಂದ ಪ್ರಾರಂಭಗೊಂಡು ಸೂಡಿ ರಸ್ತೆ, ಮುಲ್ಲಾನಬಾವಿ ವೃತ್ತದ ಮೂಲಕ ಪ್ರಮುಖ ರಸ್ತೆಯಲ್ಲಿ ಸಂಚರಿಸಿ, ಬಳಿಕ ತಾಲೂಕು ಪಂಚಾಯಿತಿಗೆ ತೆರಳಿ ವಿವಿಧ ಬೇಡಿಕೆಗಳನ್ನು ಈಡೆರಿಸುವಂತೆ ಆಗ್ರಹಿಸಲಾಯಿತು. ಸಿಐಟಿಯು ತಾಲೂಕು ಮುಖಂಡ ಬಾಲು ರಾಠೋಡ ಮಾತನಾಡಿ, ರಾಜ್ಯ ಸರ್ಕಾರಿ ಅಕ್ಷರ ದಾಸೋಹ ನೌಕರರ ಬೇಡಿಕೆಗಳಿಗೆ ಸ್ಪಂದಿಸುತಿಲ್ಲ. ದಿನವೊಂದಕ್ಕೆ ಕೇವಲ ರು. 38ಗಳಂತೆ ತಿಂಗಳಿಗೆ ರು. 1,100 ಮಾತ್ರ ನೀಡುತ್ತಿದೆ. ಬೆಳಗ್ಗೆಯಿಂದ ಸಂಜೆವರೆಗೆ ದುಡಿದರೂ ಕೇವಲ ರು. 38 ಪಡೆಯಬೇಕಾಗಿದೆ. ಪ್ರಸಕ್ತ ಕುಟುಂಬ ನಿರ್ವಹಣೆ ತ್ರಾಸದಾಯಕವಾಗಿದೆ ಎಂದರು.
ಕೇಂದ್ರ ಸರ್ಕಾರ ಘೋಷಿಸಿರುವಂತೆ ತಕ್ಷಣ ರು. 1,000ಗಳನ್ನು ಜಾರಿಗೊಳಿಸಬೇಕು. ರಾಜ್ಯ ಸರ್ಕಾರ ಹೆಚ್ಚಿಸಿರುವ ರು. 500ವನ್ನು 2013 ಡಿಸೆಂಬರ್‌ನಿಂದ ಜಾರಿ ಮಾಡಬೇಕು. ಅಕ್ಷರ ದಾಸೋಹ ನೌಕರರಿಗೆ ಹರಿಯಾಣ ಮತ್ತು ಕೇರಳ ಮಾದರಿಯಲ್ಲಿ ತಿಂಗಳಿಗೆಕನಿಷ್ಠ ರು. 2,500 ವೇತನ ನೀಡಬೇಕು ಎಂದು ಆಗ್ರಹಿಸಿದರು.
ಅಕ್ಷರ ದಾಸೋಹ ನೌಕರರ ಸಂಘದ ತಾಲೂಕು ಅಧ್ಯಕ್ಷೆ ಮಲ್ಲಮ್ಮ ಹುಲ್ಲನ್ನವರ ಮತ್ತು ಕಾರ್ಯದರ್ಶಿ ಲತಾ ಬಡಿಗೇರ ಮಾತನಾಡಿದರು.
ವಿವಿಧ ಬೇಡಿಕೆಯ ಮನವಿಯನ್ನು ತಾಪಂ ಇಒ ಅನುಪಸ್ಥಿತಿಯಲ್ಲಿ ತಾಪಂ ಸಹಾಯಕ ನಿರ್ದೇಶಕ ಆರ್.ಎಸ್. ಬಿರಾದಾರ ಸ್ವೀಕರಿಸಿ ಮಾತನಾಡಿ, ಕೂಡಲೇ ಮನವಿಯನ್ನು ಹಿರಿಯ ಅಧಿಕಾರಿಗಳ ಮೂಲಕ ಮುಖ್ಯಮಂತ್ರಿಗೆ ಕಳುಹಿಸಲಾಗುವುದು ಎಂದರು.
ಪ್ರತಿಭಟನೆಯಲ್ಲಿ ಬಿ.ಎಸ್. ಸಜ್ಜನರ, ಫಯಾಜ್ ತೋಟದ, ಸುನಂದಾ ಘಂಟಿ, ಅಕ್ಕಮ್ಮ ಕನ್ನೂರ, ಲೀಲಾ ಪತ್ತಾರ, ಉಮಾ ಹಿರೇಮಠ, ಎಸ್.ಎಸ್. ಕಳಕಾಪುರ, ಪ್ರೇಮಾ ಹುನಗುಂಡಿ, ಸುಧಾ ನವಲಗುಂದ, ಶೇಖವ್ವ ದಾಸರ, ಶೈಲಾ ಚಲವಾದಿ, ಅಕ್ಕಮ್ಮ ಹುಗಾರ, ಗಿರಿಜಮ್ಮ ಚಿಗೊಳ್ಳಿ, ಶಂಕ್ರವ್ವ ತಾಳಿಕೋಟಿ, ಚನ್ನಮ್ಮ ಬಿಳೆಕಲ್ಲ, ದ್ರಾಕ್ಷಾಯಿಣಿ ಕಲ್ಲನಗೌಡ್ರ, ಕಸ್ತೂರೆವ್ವ ತಳವಾರ ಇತರರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.