ಗದಗ

ರಾಜ್ಯ ರೈಲು ಯೋಜನೆಗಳ ಕುರಿತು ಸಚಿವ ಸದಾನಂದಗೌಡರಿಗೆ ಮನವರಿಕೆ

Published On :

ಕನ್ನಡಪ್ರಭ ವಾರ್ತೆ, ಗದಗ, ಜು. 5
ನವದೆಹಲಿಯ ಕರ್ನಾಟಕ ಭವನದಲ್ಲಿ ಶನಿವಾರ ರೇಲ್ವೆ ಸಚಿವ ಸದಾನಂದಗೌಡರಿಗೆ ರಾಜ್ಯ ರೇಲ್ವೆ ಅಭಿವೃದ್ಧಿ ಹೋರಾಟ ಸಮಿತಿ ವತಿಯಿಂದ ಕುತುಬುದ್ದಿನ್ ಖಾಜಿ, ಬಸವಣ್ಣೆಯ್ಯ ಹಿರೇಮಠ ನೇತೃತ್ವದಲ್ಲಿ ಭೇಟಿಯಾಗಿ ರೇಲ್ವೆ ಅಭಿವೃದ್ಧಿ ಕುರಿತು ಸಚಿವರಿಗೆ ಮನವರಿಕೆ ಮಾಡಿಕೊಡಲಾಯಿತು.  ಈ ಸಂದರ್ಭದಲ್ಲಿ ನೂತನ ರೇಲ್ವೆ ಮಾರ್ಗಗಳಿಗೆ ಭೂಮಿ ನೀಡಿದ ರೈತ ಕುಟುಂಬದ ಒಬ್ಬರಿಗೆ ರೇಲ್ವೆ ಇಲಾಖೆಯಲ್ಲಿ ಡಿ ದರ್ಜೆಯ ಉದ್ಯೋಗ ಕಲ್ಪಿಸುವುದು, ಗದಗ-ಹಾವೇರಿ, ಗದಗ-ವಾಡಿ, ಮುನಿರಾಬಾದ-ಮೆಹಬೂಬ ನಗರ, ದಾವಣಗೆರೆ-ತುಮಕೂರು, ಹರಿಹರ-ಶಿವಮೊಗ್ಗ ನೂತನ ರೇಲ್ವೆ ಮಾರ್ಗಗಳನ್ನು ಶೀಘ್ರ ಪೂರ್ಣಗೊಳಿಸಬೇಕು. ಉಕ ಅಭಿವೃದ್ಧಿ ದೃಷ್ಟಿಯಿಂದ ಕುಡಚಿ-ಬಾಗಲಕೋಟೆ ಹೊಸ ರೇಲ್ವೆ ಮಾರ್ಗಗಳನ್ನು ರಾಯಚೂರವರೆಗೆ, ಹಾವೇರಿ-ಗದಗ ನೂತನ ರೇಲ್ವೆ ಮಾರ್ಗವನ್ನು ಗಜೇಂದ್ರಗಡ-ಕುಷ್ಟಗಿವರೆಗೆ ವಿಸ್ತರಿಸುವುದು.
ಗದಗ-ಮುಂಡರಗಿ-ಹರಿಹರ, ಆಲಮಟ್ಟಿ-ಯಾದಗಿರಿ, ಬಿಜಾಪುರ-ಶಹಬಾದ್, ಧಾರವಾಡ-ಬೆಳಗಾವಿ, ಬಾಗಲಕೋಟೆ-ಬೆಳಗಾವಿ, ಬಿಜಾಪುರ-ಶೇಡಬಾಳ, ಬದಾಮಿ-ಗಜೇಂದ್ರಗಡ ನೂತನ ರೇಲ್ವೆ ಮಾರ್ಗಗಳನ್ನು ಅನುಷ್ಠಾನ ತರಬೇಕು. ಹುಬ್ಬಳ್ಳಿ-ಮುಂಬಯಿ ಗದಗ ಬಾಗಲಕೋಟೆ ಮಾರ್ಗವಾಗಿ ಮಂಜೂರಾದ ರೈಲನ್ನು ಪ್ರತಿ ದಿನ ಓಡಿಸುವುದು. ಹುಬ್ಬಳ್ಳಿ- ನವದೆಹಲಿ ನೂತನ ರೈಲ್‌ನ್ನು ಗದಗ ಸೋಲಾಪುರ ಮಾರ್ಗವಾಗಿ, ಸೋಲಾಪುರ-ಮಂಗಳೂರು ರೈಲ್‌ನ್ನು ಗದಗ-ಹುಬ್ಬಳ್ಳಿ ಮಾರ್ಗವಾಗಿ, ಸೋಲಾಪುರ ತಿರುಪತಿ ರೈಲ್‌ನ್ನು ಗದಗ-ಕೊಪ್ಪಳ-ಗುಂತಕಲ ಮಾರ್ಗವಾಗಿ ಪ್ರತಿದಿನ ಸಂಚರಿಸುವಂತೆ ಓಡಿಸಬೇಕು.
ಗದಗ-ಹುಟಗಿ ಜೋಡಿ ಮಾರ್ಗ ಮಂಜೂರಾಗಿದ್ದು, ಶೀಘ್ರ ಕಾಮಗಾರಿ ಪ್ರಾರಂಭಿಸುವುದು ಹಾಗೂ ಕರ್ನಾಟಕದಿಂದ ಅಂತಾರಾಜ್ಯಕ್ಕೆ ಚಲಿಸುವ ರೈಲೊಂದಕ್ಕೆ ವಿಶ್ವಸಂತ ಪದ್ಮವಿಭೂಷಣ ಡಾ. ಪಂಡಿತ ಪುಟ್ಟರಾಜ ಕವಿಗವಾಯಿಗಳ ಹೆಸರು ಇಡಲು ಮನವರಿಕೆ ಮಾಡಿಕೊಡಲಾಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.