ಗದಗ

ಆಲಂಕಾರಿಕ ಭಾಷೆಯಿಂದ ಕೃತಿ ಸಾಹಿತ್ಯವಾಗದು: ಚುಸಾಪ ಅಧ್ಯಕ್ಷ ಬಡಿಗೇರ

Published On :

ಗದಗ: ಕೇವಲ ಆಲಂಕಾರಿಕ ಭಾಷೆಯಿಂದ ಕೃತಿ ಸಾಹಿತ್ಯವಾಗುವುದಿಲ್ಲ. ಕಥೆ ಕಟ್ಟುವ ಕಲೆ ಇಲ್ಲದಿದ್ದರೆ ಕೃತಿ ಹೂರಣವಿಲ್ಲದ ಹೋಳಿಗೆಯಂತಾಗುತ್ತದೆ. ಯುವಕವಿಗಳು ಕಥೆ-ಕವನಗಳನ್ನು ರಚಿಸುವಾಗ ವಿಷಯ ವಸ್ತುವಿನತ್ತ ಗಮನ ನೀಡಬೇಕು ಎಂದು ಗದಗ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷ ಡಿ.ವಿ. ಬಡಿಗೇರ ಹೇಳಿದರು.  ಅವರು ಭಾನುವಾರ ಗದಗ ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆಯ ಸಭಾಂಗಣದಲ್ಲಿ ಗದಗ ಜಿಲ್ಲಾ ಹವ್ಯಾಸಿ ಬರಹಗಾರರ ವೇದಿಕೆ ಆಶ್ರಯದಲ್ಲಿ ಶಿರಹಟ್ಟಿಯ ಭಾಗ್ಯಲಕ್ಷ್ಮೀ ಕುಬೇರ ವಿರಚಿತ ತ್ರಿವೇಣಿ ಕಥೆ-ನಾಟಕ ಕವನ ಸಂಕಲನ ಲೋಕಾರ್ಪಣೆ ನೆರವೇರಿಸಿ ಮಾತನಾಡಿದರು. ಸಾಹಿತ್ಯ ಸೃಜನಶೀಲ, ಕಲಾತ್ಮಕ ಭಾವನೆಗಳ ಅಭಿವ್ಯಕ್ತಿಯ ಸಂದೇಶವಾಗಬೇಕೆ ಹೊರತು ಉಪದೇಶಗಳ ಕಂತೆಯಾಗಬಾರದು ಎಂದರು.  ಅತಿಥಿಗಳಾಗಿ ಆಗಮಿಸಿದ್ದ ಮಂಜುನಾಥ ಅಬ್ಬಿಗೇರಿ ಮಾತನಾಡಿದರು. ಅತಿಥಿಗಳಾಗಿ ಪಾಲ್ಗೊಂಡ ಪದವಿಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಬಿ.ಎಸ್. ಗೌಡರ ಮಾತನಾಡಿದರು. ವಿದ್ಯಾದಾನ ಸಮಿತಿಯ ಕಾರ್ಯದರ್ಶಿ ಶ್ರೀನಿವಾಸ ಹುಯಿಲಗೋಳ, ಪ್ರಾ. ಕೆ.ಎಚ್. ಬೇಲೂರ, ವಿ.ಆರ್. ಮಾಳೆಕೊಪ್ಪಮಠ, ವಿಷ್ಣು ಬಡಿಗೇರ ಹಾಗೂ ಲೇಖಕಿ ಭಾಗ್ಯಲಕ್ಷ್ಮೀ ಕುಬೇರ ಮಾತನಾಡಿದರು. ಪ್ರಾ. ಎಸ್.ಸಿ. ಹೆದ್ದೂರಿ, ರಮಾಕಾಂತ ದೊಡ್ಡಮನಿ, ವಾಸುದೇವ ಕುಬೇರ, ಆರ್.ಎನ್. ಕುಲಕರ್ಣಿ, ಅಂದಾನಪ್ಪ ವಿಭೂತಿ, ಗಿರೀಶ ಟೊಣಪಿ, ವಿಶಾಲಾಕ್ಷಿ ದೇಶಪಾಂಡೆ, ಡಾ. ಬಿ.ಎಸ್. ರಾಠೋಡ, ಬಸವರಾಜ ಮಾಲಗಿತ್ತಿ, ಬಿ.ಎನ್. ತಾರಾ, ಎಫ್.ಪಿ. ಲಕ್ಷ್ಮೇಶ್ವರಮಠ, ವಿನುತಕುಮಾರ ಜಗತಾಪ, ಮೋಹನ ಸಾಳುಂಕೆ ಇದ್ದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.