ಗದಗ

ಗದಗ ಜಿಲ್ಲೆಗೆ ರೈಲ್ವೆ ಬಜೆಟ್‌ನಲ್ಲಿ ಅನ್ಯಾಯ: ಗಣೇಶಸಿಂಗ್ ಬ್ಯಾಳಿ ಅಸಮಾಧಾನ

Published On :

ಗದಗ: ಕೇಂದ್ರ ರೈಲ್ವೆ ಸಚಿವ ಡಿ.ವಿ. ಸದಾನಂದಗೌಡರು ಮಂಡಿಸಿದ ರೈಲ್ವೆ ಬಜೆಟ್‌ನಲ್ಲಿ ಉತ್ತರ ಕರ್ನಾಟಕಕ್ಕೆ ಅದರಲ್ಲೂ ವಿಶೇಷವಾಗಿ ಗದಗ ಜಿಲ್ಲೆಗೆ ಅನ್ಯಾಯವಾಗಿದೆ ಎಂದು ಬೆಟಗೇರಿ ರೈಲ್ವೆ ಹೋರಾಟ ಸಮಿತಿ ಅಧ್ಯಕ್ಷ ಗಣೇಶಸಿಂಗ್ ಬ್ಯಾಳಿ ಹೇಳಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ಬಜೆಟ್‌ನಲ್ಲಿ ಗದಗ-ಪಂಢರಾಪುರ ಹೊಸ ರೈಲಿಗೆ ಒಪ್ಪಿಗೆ ನೀಡಿದ್ದಾರೆ. ಆದರೆ ಅದು ಗದಗ-ಸೋಲಾಪುರದಿಂದ ಪಂಢರಾಪುರಕ್ಕೆ ಸಂಚರಿಸುವಂತೆ ಮುಂದುವರಿಸಿದ್ದಾರೆಯೇ  ಅಥವಾ ಹೊಸ ರೈಲು ಮಾಡಿದ್ದಾರೆಯೇ ಎಂಬುದು ತಿಳಿದಿರುವುದಿಲ್ಲ. ಆದಾಗ್ಯೂ ಪಂಢರಾಪುರವರೆಗೆ ರೈಲು ಓಡಿಸುತ್ತಿರುವುದು ಸ್ವಾಗತಾರ್ಹ. ಹುಬ್ಬಳ್ಳಿ-ಬಿಜಾಪುರ-ಮುಂಬೈ ವೀಕ್‌ಲಿ ಎಕ್ಸ್‌ಪ್ರೆಸ್ ಗಾಡಿಯನ್ನು ಪ್ರತಿನಿತ್ಯ ಓಡಿಸಬೇಕು. ಗದಗ-ಹರಪ್ಪನಹಳ್ಳಿ ಹೊಸಮಾರ್ಗ ನೀಡಿರುವುದು ಸ್ವಾಗತ. ಅದರ ಜತೆಗೆ ಗದಗ-ಯಲವಿಗಿ ಮಾರ್ಗ ಆಗಬೇಕು.
ನಮಗೆ ಮುಖ್ಯವಾಗಿ ಬೇಕಾಗಿರುವ ಪುಣೆ-ಗುಂತಕಲ್ ಜೋಡು ಮಾರ್ಗ, ಅದರೊಂದಿಗೆ ಎಲೆಕ್ಟ್ರಿಕ್ ಟ್ರೇನ್ ಆರಂಭಿಸುವುದು. ಗುಂತಕಲ್-ಸೋಲಾಪುರ ಇಂಟರ್‌ಸಿಟಿ ಟ್ರೇನ್ ಆರಂಭಿಸದೇ ಇರುವುದು ಅನ್ಯಾಯ. ಕೊಲ್ಲಾಪುರ-ತಿರುಪತಿ ಗಾಡಿಯನ್ನು ಚೆನ್ನೈವರೆಗೆ ಓಡಿಸದೇ ಇರುವುದು ಅನ್ಯಾಯವಾಗಿದೆ. ಯಶವಂತಪುರ-ಶಿರಡಿ ಭಕ್ತರ ಸಂಖ್ಯೆಗನುಗುಣವಾಗಿ ಕನಿಷ್ಠ ವಾರಕ್ಕೆ 3 ಬಾರಿಯಾದರೂ ಆಗಬೇಕಾಗಿತ್ತು. ಗದಗದಿಂದ ನೇರವಾಗಿ ಕಾಶಿ ಪ್ರಯಾಣಿಕರಿಗೆ ಹಾಗೂ ದೆಹಲಿಗೆ ಹೋಗುವವರಿಗೆ ಅವಕಾಶ ಕಲ್ಪಿಸಿರುವುದಿಲ್ಲ. ಗದಗ ಜಿಲ್ಲೆಗೆ ನಾವು ನಿರೀಕ್ಷಿಸಿದಂತೆ ಸೌಲಭ್ಯಗಳು ದೊರೆತಿಲ್ಲ. ಈಗಲಾದರೂ ವಿಶೇಷವಾಗಿ ಪರಿಗಣಿಸಿ ನಮಗೆಲ್ಲ ಅವಕಾಶ ಕಲ್ಪಿಸಿ ಕೊಡಬೇಕೆಂದು ಒತ್ತಾಯಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.