ಗದಗ

ಕನ್ನಡಿಗರ ರಕ್ಷಣೆ ಸರ್ಕಾರ ಮುಂದಾಗಲಿ: ಕರವೇ

Published On :

ಗಜೇಂದ್ರಗಡ:  ಗೋವಾ ಬೈನಾ ಬೀಚ್‌ನಲ್ಲಿ ನೆಲೆಸಿರುವ ಕನ್ನಡಿಗರ ಮನೆಗಳನ್ನು ತೆರವುಗೊಳಿಸಿರುವ ಅಲ್ಲಿನ ಸರ್ಕಾರದ ಕ್ರಮ ಖಂಡಿಸಿ ಕರ್ನಾಟಕ ರಕ್ಷಣಾ ವೇದಿಕೆ (ನಾರಾಯಣಗೌಡ ಬಣ) ಕಾರ್ಯಕರ್ತರು ಬುಧವಾರ ವಿಶೇಷ ತಹಸೀಲ್ದಾರ್‌ಗೆ ಮನವಿ ಸಲ್ಲಿಸಿದರು.
 ಈ ಸಂದರ್ಭದಲ್ಲಿ ಸಂಘಟನೆಯ ನಗರ ಘಟಕ ಅಧ್ಯಕ್ಷ ರಜಾಕ್ ಡಾಲಾಯತ್ ಮಾತನಾಡಿ, ದುಡಿಮೆಯನ್ನೆ ನಂಬಿ ಬದುಕುತ್ತಿರುವ ಕನ್ನಡದ ಬಡ ಕುಟುಂಬಗಳ ಸುರಕ್ಷತೆಗೆ ಸರ್ಕಾರ ಮುಂದಾಗಬೇಕಾಗಿದೆ.
ಅಸುರಕ್ಷತೆಯ ನೆಪದಿಂದ ಗೋವಾ ಸರ್ಕಾರ ಕನ್ನಡಿಗರ ಮನೆಗಳನ್ನು ಧ್ವಂಸ ಮಾಡಿರುವುದು ಖಂಡನೀಯ.  ಗೋವಾ ಸರ್ಕಾರದಿಂದ ಅನ್ಯಾಯಕ್ಕೆ ಒಳಗಾದ ನಿರ್ಗತಿಕ ಕನ್ನಡಿಗರಿಗೆ ನೆರವಾಗಲು ಕೇಂದ್ರ ಸರ್ಕಾರ ಮುಂದಾಗಬೇಕು. ಬೀದಿಯಲ್ಲಿರುವ ಕನ್ನಡಿಗರಿಗೆ ಸೂರು ಕಲ್ಪಿಸಬೇಕೆಂದು ಆಗ್ರಹಿಸಿದರು.
ಮಂಜು ಅಜಮೀರ ಮಾತನಾಡಿ, ಗೋವಾದಲ್ಲಿರುವ ಕನ್ನಡಿಗರ ಮೇಲೆ ಸದಾ ಒಂದಿಲ್ಲೊಂದು ನೆಪವೊಡ್ಡಿ ತೊಂದರೆ ಕೊಡುತ್ತಿರುವ ಅಲ್ಲಿನ ಸರ್ಕಾರ ಭಾರತೀಯ ಒಕ್ಕೂಟದ ವ್ಯವಸ್ಥೆಯಲ್ಲಿ ಇದೆಯೇ, ಇಲ್ಲವೋ ಎಂದು ಸಂಶಯ ಬರುತ್ತದೆ. ಕನ್ನಡಿಗರ ಬಗೆಗೆ ತಾಳುತ್ತಿರುವ ನಿಲುವಿನ ಬಗ್ಗೆ ಕೇಂದ್ರ ಸರ್ಕಾರ ತನಿಖೆ ನಡೆಸಿ ಕ್ರಮಕ್ಕೆ ಮುಂದಾಗಬೇಕೆಂದು ಒತ್ತಾಯಿಸಿದರು. ಇದೇ ವೇಳೆ ವಿಶೇಷ ತಹಸೀಲ್ದಾರ್ ಪಿ.ಬಿ. ಮೇಲಿನಮನಿಯವರಿಗೆ ಕರವೇ ಕಾರ್ಯಕರ್ತರು ಮನವಿ ಸಲ್ಲಿಸಿದರು. ಹುಸೇನ ಡಾಲಾಯತ್, ಹುಸೇನ ಕವಲೂರ, ಮೈಬು ಚಿನ್ನೂರ, ಶಫೀಕ್ ಡಾಲಾಯತ್, ಆನಂದ ಮಾದರ, ಸಂಗಪ್ಪ ಚಲವಾದಿ, ಕುಮಾರ ರಾಠೋಡ, ಮೌಲಾಸಾಬ ಹವಾಲ್ದಾರ್, ಖಾಜಾ ಡಾಲಾಯತ್, ಅನ್ವರ ಬೇವಿನಮರದ, ಹುಸೇನಸಾಬ ಹವಾಲ್ದಾರ್, ದಾವಲ ಡಾಲಾಯತ್, ಗುರು ರಾಠೋಡ, ಶಹಬಾಜ ಗೊಲಗೇರಿ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.