ಗದಗ

ಸಿದ್ಧಲಿಂಗ ಶ್ರೀಗಳಿಂದ ವಚನ ಚಳವಳಿಗೆ ಪುನಶ್ಚೇತನ: ತೋಂಟದಾರ್ಯ ಸ್ವಾಮೀಜಿ

Published On :

ಗದಗ: 12ನೇ ಶತಮಾನದಲ್ಲಿ ಬಸವಾದಿ ಶರಣರಿಂದ ಚಾಲನೆಗೊಂಡ ವಚನ ಚಳವಳಿಯನ್ನು ಮುನ್ನೂರು ವರ್ಷಗಳ ನಂತರ ಮುಂದುವರಿಸಿಕೊಂಡು ಬಂದ ಎಡೆಯೂರು ತೋಂಟದ ಸಿದ್ಧಲಿಂಗ ಯತಿಗಳ ಜೀವನ ಸಾಧನೆ ಅಮೋಘವಾದುದು ಎಂದು ತೋಂಟದ ಡಾ. ಸಿದ್ಧಲಿಂಗ ಮಹಾಸ್ವಾಮಿಗಳು ಹೇಳಿದರು. ಈಚೆಗೆ ತೋಂಟದಾರ್ಯ ಮಠದಲ್ಲಿ ಲಿಂಗಾಯತ ಪ್ರಗತಿಶೀಲ ಸಂಘದಾಶ್ರಯದಲ್ಲಿ ನಡೆದ 2,180ನೇ ಶಿವಾನುಭವದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು. ಪುರಾಣ ಗ್ರಂಥದ ಪ್ರಕಾಶಕ ಡಾ. ಸಿದ್ದಲಿಂಗಯ್ಯ ರಾಚಯ್ಯ ಹಿರೇಮಠ ಸೇರಿದಂತೆ ಶಿವಾನುಭವ ಭಕ್ತಿ ಸೇವೆ ವಹಿಸಿದ್ದ ಎಡೆಯೂರಿನ ಸಿದ್ಧಲಿಂಗೇಶ್ವರ ದಾಸೋಹ ಸೇವಾ ಸಮಿತಿ ಅಧ್ಯಕ್ಷ ವಿಶ್ವನಾಥ ಬುಳ್ಳಾ, ಕಾರ್ಯದರ್ಶಿ ಅಪ್ಪಣ್ಣ ಗದಗ ಹಾಗೂ ಸುಳ್ಯದ ದೇಸಾಯಿ ಕುಟುಂಬದ ಗಿರಿಜಾ ಮಾಲೀ ಪಾಟೀಲ, ರಾಜೇಶ್ವರಿ ಮಾಲೀ ಪಾಟೀಲ ಮುಂತಾದವರಿಗೆ ಪೂಜ್ಯರು ಆಶೀರ್ವದಿಸಿದರು.
ಬೆಟಗೇರಿಯ ಅನಸೂಯಾ ರಾಜಶೇಖರ್ ಶೀಲವಂತರ ಇವರಿಂದ ವಚನ ಸಂಗೀತ ಜರುಗಿತು. ಸೌಮ್ಯಾ ಕುಬಸದ, ಲಕ್ಷ್ಮೀ ಕುಬಸದ ಇವರಿಂದ ಧರ್ಮ ಗ್ರಂಥ ಪಠಣ, ಧರ್ಮ ಚಿಂತನ ನಡೆಯಿತು. ಸಿದ್ಧೇಶ್ವರ ಮಹಾಪುರಾಣ ಬಿಡುಗಡೆ ಸಂದರ್ಭ ಹಿರಿಯ ಶರಣ ಸಾಧಕ ಎಂ.ಎ. ಹಂಚಿನಾಳ ಇವರಿಂದ ವಚನ ಗಾಯನದ ಹಿನ್ನೆಲೆ ಸಂಗೀತ ಜನತೆಗೆ ಭಕ್ತಿಯ ರಸದೌತಣ ನೀಡಿತು.
ಸಮಿತಿ ಅಧ್ಯಕ್ಷ ಎಸ್.ಎನ್. ಆದಿ ಸ್ವಾಗತಿಸಿದರು. ಲಿಂಗಾಯತ ಪ್ರಗತಿಶೀಲ ಸಂಘದ ಕಾರ್ಯದರ್ಶಿ ಕೆ.ಪಿ. ಗುಳಗೌಡ್ರ ನಿರೂಪಿಸಿದರು. ಸಂಘದ ಅಧ್ಯಕ್ಷ ಪ್ರಭುದೇವ ಎಸ್. ಹಿರೇಮಠ, ಉಪಾಧ್ಯಕ್ಷ ಶೇಖಣ್ಣ ಕಳಸಾಪುರಶೆಟ್ರ, ರತ್ನಕ್ಕ ಪಾಟೀಲ, ವೀರಣ್ಣ ಜ್ಯೋತಿ, ಚಂದ್ರಶೇಖರ್ ಅರಳಿ ಇತರರಿದ್ದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.