ಪರಿಸರ ಸಂರಕ್ಷಣೆ ನಮ್ಮ ಮುಖ್ಯ ಗುರಿಯಾಗಬೇಕು: ವಿದ್ಯಾಧರನ್
ಗದಗ: ಪರಿಸರ ಸಂರಕ್ಷಣೆ ಮತ್ತು ಅದರ ಕಾಳಜಿ ನಮ್ಮ ಮುಖ್ಯ ಗುರಿಯಾಗಬೇಕು ಎಂದು ಪೊಲೀಸ್ ಅಧಿಕಾರಿ ವಿದ್ಯಾಧರನ್ ಹೇಳಿದರು. ಅವರು ಈಚೆಗೆ ನಗರದ ಬಾಲವಿನಾಯಕ ವಿದ್ಯಾನಿಕೇತನ ಶಾಲೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ವನಮಹೋತ್ಸವ ಕಾರ್ಯಕ್ರಮದಲ್ಲಿ ಗಿಡನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಶಾಲೆಯ ವಿದ್ಯಾರ್ಥಿನಿ ರಾಜೇಶ್ವರಿ ವನಮಹೋತ್ಸವದ ಮಹತ್ವದ ಬಗ್ಗೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಆಡಳಿತ ಮಂಡಳಿಯ ಸದಸ್ಯೆ ವಸಂತಕುಮಾರಿ ಅಧ್ಯಕ್ಷತೆ ವಹಿಸಿದ್ದರು. ಪ್ರಾ. ವಿ.ಎಂ. ಅಡ್ನೂರ, ಉಪಪ್ರಾಚಾರ್ಯ ಪಿ.ಎಸ್. ಮಾಳೇಕರ, ಶಾಲಾ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ರಾಜೇಶ್ವರಿ ಹಾಗೂ ಯೋಗಿತಾ ಪ್ರಾರ್ಥಿಸಿದರು, ಖುಷಿ ಕಲಾಲ ಸ್ವಾಗತಿಸಿದರು. ಶಿಕ್ಷಕ ವಿನಾಯಕ ಆರ್. ನಿರೂಪಿಸಿದರು.
ಉದ್ಯಮಶೀಲತಾ ತರಬೇತಿ
ಗದಗ: ಸಿಡಾಕ್ ಧಾರವಾಡ, ಜಿಲ್ಲಾ ಕೈಗಾರಿಕಾ ಕೇಂದ್ರ ಗದಗ, ಭಾರತ ಸರ್ಕಾರದ ಎಂ.ಎಸ್.ಎಂ.ಇ. ಮಂತ್ರಾಲಯ ಹಾಗೂ ನಿಮ್ಸ್ಮೇ ಹೈದರಾಬಾದ್ ಸಂಯುಕ್ತವಾಗಿ ಜಿಲ್ಲೆಯ ವಿದ್ಯಾವಂತ ನಿರುದ್ಯೋಗಿಗಳಿಗಾಗಿ 18 ದಿನಗಳ ಉಚಿತ ಲೆದರ್ ಪ್ರೊಡಕ್ಟ್ ಕುರಿತು ಕೌಶಲ್ಯ ಉದ್ಯಮಶೀಲತಾ ತರಬೇತಿಯನ್ನು ಆಗಸ್ಟ್ ತಿಂಗಳಿನಲ್ಲಿ ಗದಗದಲ್ಲಿ ಹಮ್ಮಿಕೊಳ್ಳಲಾಗುವುದು. ಕನಿಷ್ಠ ಎಸ್ಸೆಸ್ಸೆಲ್ಸಿ ಪಾಸಾದ ಹಾಗೂ 18-35 ರೊಳಗಿನ ವಯೋವುತಿಯಲ್ಲಿರುವ ಅಭ್ಯರ್ಥಿಗಳು ಒಂದು ಬಿಳಿ ಹಾಳೆಯಲ್ಲಿ ಅರ್ಜಿಯನ್ನು ಜಿಲ್ಲಾ ಉಪ ನಿರ್ದೇಶಕರು, ಸಿಡಾಕ್, ಕೇರ್ಆಫ್, ಜಂಟಿ ನಿರ್ದೇಶಕರು, ಜಿಲ್ಲಾ ಕೈಗಾರಿಕಾ ಕೇಂದ್ರ, 2ನೇ ಮಹಡಿ, ರೂ. ನಂ. 221, ಜಿಲ್ಲಾ ಆಡಳಿತ ಭವನ ಗದಗ ಇವರಿಗೆ ಜು. 26ರೊಳಗಾಗಿ ಸಲ್ಲಿಸಲು ಕೋರಲಾಗಿದೆ ಹಾಗೂ ಹೆಚ್ಚಿನ ಮಾಹಿತಿಗಾಗಿ ಸಿ.ಎಚ್. ಅಂಗಡಿ, ಜಿಲ್ಲಾ ಉಪ ನಿರ್ದೇಶಕರು, ಸಿಡಾಕ್. (ಮೊ 9880347072) ಇಲ್ಲಿಗೆ ಸಂಪರ್ಕಿಸಲು ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಟಿ.ಎಸ್. ಮಲ್ಲಿಕಾರ್ಜುನ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅಧಿಕಾರ ಸ್ವೀಕಾರ
ಗದಗ: ಗದಗ ಕಚೇರಿಯ ಜಿಲ್ಲಾ ಖಾದಿ ಗ್ರಾಮೋದ್ಯೋಗ ಅಧಿಕಾರಿಯಾಗಿ ಎನ್.ಜಿ. ಹುನಗುಂದ ಅವರು ಈಚೆಗೆ ಪ್ರಭಾರ ವಹಿಸಿಕೊಂಡಿರುತ್ತಾರೆ. ಎಲ್ಲ ಸರ್ಕಾರಿ, ಅರೆ ಸರ್ಕಾರಿ ಪತ್ರಗಳನ್ನು ಎನ್.ಜಿ. ಹುನಗುಂದ, ಜಿಲ್ಲಾ ಖಾದಿ ಗ್ರಾಮೋದ್ಯೋಗ ಅಧಿಕಾರಿ, ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ, ಜಿಲ್ಲಾ ಕಚೇರಿ, ಕೊಠಡಿ ಸಂಖ್ಯೆ 224, ಜಿಲ್ಲಾಡಳಿತ ಭವನ, ಗದಗ-582103, ದೂ. 08372-220505, ಮೊ. 9480825626 ಈ ವಿಳಾಸಕ್ಕೆ ಕಳಿಸಲು ಎಂದುಪ್ರಕಟಣೆ ತಿಳಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

