ಗದಗ

ಸಂಸತ್ ರಚನೆ

Published On :

ಹೊಳೆಆಲೂರು: ಸ್ಥಳೀಯ ಗಾಡಗೋಳಿ ರಸ್ತೆಯಲ್ಲಿರುವ ಯಚ್ಚರೇಶ್ವರ ಪದವಿಪೂರ್ವ ಮಹಾವಿದ್ಯಾಲಯದ ಸಭಾಭವನದಲ್ಲಿ ಈಚೆಗೆ ಮಾದರಿ ಸಂಸತ್ ರಚಿಸಲಾಯಿತು. ಸಾರ್ವತ್ರಿಕ ಚುನಾವಣೆ ಮಾದರಿಯಲ್ಲೇ ಬೂತ್‌ಗಳನ್ನು ನಿರ್ಮಿಸಿ ಪ್ರತಿ ವರ್ಗಗಳಿಗೂ ಪ್ರತ್ಯೇಕ ಚುನಾವಣೆಯನ್ನು ಮತದಾನ ಪೆಟ್ಟಿಗೆಗಳ ಮಾದರಿ ಇಟ್ಟು, ಸ್ಪರ್ಧಾ ಅಭ್ಯರ್ಥಿ ವಿದ್ಯಾರ್ಥಿಗಳ ಹೆಸರುಗಳನ್ನು ಮತಪತ್ರಗಳ ಮಾದರಿಯಲ್ಲಿ ಬರೆದು ಮತದಾನ ನಡೆಸಲಾಯಿತು. ನಂತರ ಎರಡು ಸುತ್ತಿನ ಮತ ಎಣಿಕೆಗಳನ್ನು ನಡೆಸಿ ವರ್ಗದ ಪ್ರತಿನಿಧಿ ಆಯ್ಕೆ ಮಾಡಲಾಯಿತು. ಚುನಾವಣಾಧಿಕಾರಿಗಳಾಗಿ ಪ್ರೊ. ವಿಶ್ವನಾಥ ಪಾಟೀಲ ಕಾರ್ಯನಿರ್ವಹಿಸಿದರು. 8ನೇ ವರ್ಗದಿಂದ ಪಿಯು ದ್ವಿತೀಯ ವರ್ಗದವರೆಗೆ 7 ಭೂತಗಳಲ್ಲಿ ಮತದಾನ ನಡೆಸಲಾಯಿತು. ಪ್ರಾ. ಎಸ್.ಪಿ. ನದಾಫ್, ಚಹ್ವಾಣ, ತಿಪಶೆಟ್ಟರ್, ಮುಶಿಗೇರಿ, ಆಡಿನ, ಎಲಿಗಾರ, ಕಿತ್ತಲಿ, ಚನ್ನಪ್ಪಗೌಡ್ರ ಚುನಾವಣಾಧಿಕಾರಿಗಳಾಗಿ ಕಾರ್ಯನಿರ್ವಹಿಸಿದರು. ಸಂಸ್ಥೆ ಅಧ್ಯಕ್ಷ ಎ.ಎನ್. ಬಡಿಗೇರ, ಸದಸ್ಯ ಬಿ.ಆರ್. ಬಡಿಗೇರ, ಎಂ.ಎನ್. ಪಾಯಪ್ಪಗೌಡರ ಚುನಾವಣಾ ವೀಕ್ಷಕರಾಗಿ ಮತದಾನ ಕೇಂದ್ರಗಳಿಗೆ ಭೇಟಿ ನೀಡಿ ಪ್ರಕ್ರಿಯೆ ಪರಿಶೀಲಿಸಿದರು.
--

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.