ಬಸವೇಶ್ವರ ಭಾವಚಿತ್ರ ಮೆರವಣಿಗೆ
ಕನ್ನಡಪ್ರಭ ವಾರ್ತೆ, ಮುಂಡರಗಿ, ಜು. 25
ಆಷಾಢ ಮಾಸದ ಅಂಗವಾಗಿ ಪಟ್ಟಣದ ತೋಂಟದಾರ್ಯ ಮಠದಲ್ಲಿ ಹಮ್ಮಿಕೊಂಡಿದ್ದ ಶರಣರ ತತ್ವದರ್ಶನ ಪ್ರವಚನವು ಶುಕ್ರವಾರ ಮಹಾಮಂಗಲವಾಯಿತು. ಮಹಾ ಮಂಗಲದ ಅಂಗವಾಗಿ ನಡೆದ ಬಸವೇಶ್ವರ ಭಾವಚಿತ್ರ ಹಾಗೂ ವಚನದ ಕಟ್ಟುಗಳ ಮೆರವಣಿಗೆಗೆ ಮಾಜಿ ಸಚಿವ ಎಸ್.ಎಸ್. ಪಾಟೀಲ ಚಾಲನೆನೀಡಿದರು.
ಶ್ರೀಮಠದಿಂದ ಹೊರಟ ಮೆರವಣಿಗೆ ಪಟ್ಟಣದ ಕಡ್ಲಿಪೇಟೆ, ಬ್ರಾಹ್ಮಣರ ಓಣಿ, ಬಜಾರ, ಗಾಂಧಿವೃತ್ತ, ಜಾಗ್ರತ ವೃತ್ತದ ಮಾರ್ಗವಾಗಿ ಕೋಟೆ ಭಾಗದಲ್ಲಿ ಸಂಚರಿಸಿ ನಂತರ ತೋಂಟದಾರ್ಯ ಮಠಕ್ಕೆ ಬಂದು ತಲುಪಿತು.
ಮೆರವಣಿಗೆಯಲ್ಲಿ ನಮ್ಮ ಜನಪದ ಕಲೆಯನ್ನು ಬಿಂಬಿಸುವ ಗೊಂಬೆಗಳ ಕುಣಿತ, ಬೆಂಕಿಯ ಜೊತೆಗೆ ನೃತ್ಯ, ಡೊಳ್ಳಿನ ಮೇಳ, ವೀರಗಾಸೆ ಕುಣಿತ, ಮ್ಯೂಸಿಕಲ್ ಪಾರ್ಟಿ ಸೇರಿದಂತೆ 8ಕ್ಕೂ ಹೆಚ್ಚು ವಿವಿಧ ಮಜಲುಗಳ ಕಲಾತಂಡಗಳು ಪಾಲ್ಗೊಂಡಿದ್ದವು. ಮೆರವಣಿಗೆಯಲ್ಲಿ ಸಾವಿರಾರು ಭಕ್ತರು ಪಾಲ್ಗೊಂಡಿದ್ದರು.
ಈ ಸಂದರ್ಭದಲ್ಲಿ ಪ್ರವಚನಕಾರ ಮಹಾಂತ ದೇವರು, ಪ್ರವಚನ ಕಮಿಟಿ ಅಧ್ಯಕ್ಷ ಡಿ.ಡಿ. ಮೋರನಾಳ, ಉಪಾಧ್ಯಕ್ಷರಾದ ಲಿಂಗರಾಜಗೌಡ ಪಾಟೀಲ, ಅಮೀನ್ಸಾಬ್ ದಂಡಿನ್, ಕಾರ್ಯದರ್ಶಿ ಅಶೋಕ ಹುಬ್ಬಳ್ಳಿ, ಖಜಾಂಚಿ ಕೊಟ್ರಯ್ಯ ಅಮರಗೋಳ ಹಿರೇಮಠ, ಗಿರೀಶಗೌಡ ಪಾಟೀಲ, ಹೇಮಂತಗೌಡ ಪಾಟೀಲ, ಧ್ರುವಕುಮಾರ ಹೊಸಮನಿ, ಸೊಲಬಣ್ಣ ಜೋಬಾಳಿ, ಕೊಟ್ರೇಶ ಅಂಗಡಿ, ಈಶಣ್ಣ ಬೆಟಗೇರಿ, ಶೇಖರ ಜುಟ್ಲಣ್ಣವರ, ಮಂಜುನಾಥ ಇಟಗಿ, ಶ್ರೀನಿವಾಸ ಅಬ್ಬೀಗೇರಿ, ಪವನ್ಚೋಪ್ರಾ, ಶಿವಕುಮಾರ ಬೆಟಗೇರಿ, ದೇವಪ್ಪ ರಾಮೇನಳ್ಳಿ, ದೇವಪ್ಪ ಬಾರಕೇರ, ನೀಲಕಂಠಪ್ಪ ಪತ್ತಾರ, ಬಿ.ವಿ. ಮುದ್ದಿ, ಎ.ಆರ್. ಬಂಡೆನ್ನವರ, ವಿಜಯಕುಮಾರ ಬಣಕಾರ, ಸೋಮನಗೌಡ ಗೌಡ್ರ, ಚಂದ್ರಶೇಖ ಬಡಿಗೇರ, ವೀರೇಶ ಸಜ್ಜನರ, ರಾಘವೇಂದ್ರ ಕುರಿಯವರ, ರಾಮು ಭಜಂತ್ರಿ ಪಾಲ್ಗೊಂಡಿದ್ದರು. ನಂತರ ಶ್ರೀಮಠದಲ್ಲಿ ಸಾವಿರಾರು ಭಕ್ತರಿಗೆ ಅನ್ನ ಸಂತರ್ಪಣೆ ಕಾರ್ಯಕ್ರಮ ಜರುಗಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

