ಗದಗ

ಪುರಸಭೆಯಿಂದ ಪೈಪ್‌ಲೈನ್ ದುರಸ್ತಿ

Published On :

ರೋಣ: ಪಟ್ಟಣದ 16ನೇ ವಾರ್ಡ್‌ನ ಶಿವಾನಂದ ಬಡಾವಣೆಯಲ್ಲಿ ಕಳೆದ 3 ತಿಂಗಳಿಂದ ಪೈಪ್‌ಲೈನ್ ಒಡೆದು ಅನಾವಶ್ಯಕವಾಗಿ ನೀರು ಪೋಲಾಗುತ್ತಿರುವ ಕುರಿತು ಕನ್ನಡಪ್ರಭ ಜು. 28 (ಸೋಮವಾರ)ರಂದು ಪೈಪ್‌ಲೈನ್ ಒಡೆದು ನೀರು ಪೋಲು ಪುರಸಭೆ ನಿರ್ಲಕ್ಷ್ಯ ಎಂಬ ವರದಿ ಪ್ರಕಟಿಸಿತ್ತು.
ವರದಿಗೆ ಸ್ಪಂದಿಸಿದ ಪುರಸಭೆ ಮುಖ್ಯಾಧಿಕಾರಿ ರವಿ ಬಾಗಲಕೋಟೆ ಮತ್ತು ನೀರು ಸರಬರಾಜು ಮೇಲ್ವೀಚಾರಕ ಶಂಕ್ರಪ್ಪ ದೊಡ್ಡಣ್ಣವರ ಬುಧವಾರ ಪೈಪ್‌ಲೈನ್ ದುರಸ್ತಿ ಕಾರ್ಯಕ್ಕೆ ಮುಂದಾದರು.
ಪಟ್ಟಣಕ್ಕೆ ಪೂರೈಕೆಯಾಗುತ್ತಿರುವ ನೀರಿನ ಪೈಪ್‌ಲೈನ್‌ಗಳು ಎಲ್ಲೆಲ್ಲಿ ಒಡೆದಿವೆ ಎಂಬುದರ ಕುರಿತು ಮಾಹಿತಿ ಪಡೆದು, ಅವುಗಳನ್ನು ವಿಳಂಬ ಮಾಡದೇ ತಕ್ಷಣ ದುರಸ್ತಿ ಮಾಡಲಾಗುವುದು. ಯಾವುದೇ ಕಾರಣಕ್ಕೂ ಅನಾವಶ್ಯಕವಾಗಿ ನೀರು ಪೋಲಾಗದಂತೆ ಮತ್ತು ಜನತೆಗೆ ನೀರಿನ ತೊಂದರೆಯಾಗದಂತೆ ಮುಂಜಾಗ್ರತೆಯ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದು. ಸಾರ್ವಜನಿಕರು ಅಗತ್ಯಕ್ಕೆ ಅನುಗುಣವಾಗಿ ನೀರು ಬಳಕೆ ಮಾಡಬೇಕು.
ಹೆಚ್ಚುವರಿ ನೀರನ್ನು ಅನಾವಶ್ಯಕವಾಗಿ ಗಟಾರುಗಳಿಗೆ ಹರಿದು ಬಿಡುವುದಾಗಲಿ ಅಥವಾ ಅನಾವಶ್ಯಕವಾಗಿ ನೆಲಕ್ಕೆ ಹೊಡೆಯುವುದಾಗಲಿ ಮಾಡದೇ ನೀರು ರಕ್ಷಣೆಯಲ್ಲಿ ತೊಡಗಬೇಕು ಎಂದು ಪುರಸಭೆ ಮುಖ್ಯಾಧಿಕಾರಿ ರವಿ ಬಾಗಲಕೋಟೆ ಕನ್ನಡಪ್ರಭಕ್ಕೆ ತಿಳಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.