ಗದಗ

ವಿವಿಧ ಬೇಡಿಕೆ ಈಡೇರಿಸಲು ಆಗ್ರಹ

Published On :

ಕನ್ನಡಪ್ರಭ ವಾರ್ತೆ, ಗದಗ, ಜೂ. 2
ಗದಗ-ಬೆಟಗೇರಿ ಅವಳಿ ನಗರ ಅಭಿವೃದ್ಧಿಗೆ ಬೇಕಾಗಿರುವ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಭಾನುವಾರ ನಗರಕ್ಕೆ ಆಗಮಿಸಿದ ಸಂಸದ ಶಿವಕುಮಾರ ಉದಾಸಿಗೆ ಶಿವಬಸವ ಜನಕಲ್ಯಾಣ ಸಂಸ್ಥೆಯಿಂದ ಮನವಿ ಸಲ್ಲಿಸಲಾಯಿತು.
ಗದಗ ಭಾಗದಲ್ಲಿ ನಿರುದ್ಯೋಗ ಸಮಸ್ಯೆ ನಿವಾರಣೆಗೆ ಕೂಲಿಕಾರರು ಹೊರ ರಾಜ್ಯಗಳಿಗೆ ಕೂಲಿ ಅರಸಿ ಹೋಗುತ್ತಿರುವುದು ತಪ್ಪಿಸಲು ಪರಿಸರ ಸ್ನೇಹಿ ಬೃಹತ್ ಕೈಗಾರಿಕೋದ್ಯಮ ಸ್ಥಾಪನೆ, ಗದಗ ರೈಲು ನಿಲ್ದಾಣ ಮೇಲ್ದರ್ಜೆಗೇರಿಸಿ ಪ್ರಯಾಣಿಕರ ಅನುಕೂಲಕ್ಕೆ ತಕ್ಕಂತೆ ಹೆಚ್ಚಿನ ಪ್ಯಾಸೆಂಜರ್ ರೈಲು ಸೇವೆ ಒದಗಿಸುವುದು.
ಹಾವೇರಿ-ಗದಗ ನೂತನ ರೈಲು ಮಾರ್ಗ ಪ್ರಾರಂಭಿಸುವುದು, ಗದಗ-ಕುಷ್ಟಗಿ, ಗದಗ-ಮುಂಡರಗಿ-ಹರಿಹರ ನೂತನ ರೈಲು ಮಾರ್ಗಗಳಿಗೆ ಆದ್ಯತೆ ನೀಡುವುದು, ಕಳಸಾ-ಬಂಡೂರಿ ನಾಲಾ ಜೋಡಣೆಯನ್ನು ಮಹದಾಯಿ ನ್ಯಾಯಾಧೀಕರಣದಿಂದ ಮುಕ್ತಗೊಳಿಸುವುದು.
ಐತಿಹಾಸಿಕ ಆಧ್ಯಾತ್ಮಿಕ ಕ್ಷೇತ್ರಗಳುಳ್ಳ ಈ ಭಾಗದಲ್ಲಿ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವುದರೊಂದಿಗೆ ರೈತರು ಬೆಳೆಯುವ ಮೆಣಸಿನಕಾಯಿ, ಈರುಳ್ಳಿ ಫಸಲುಗಳನ್ನು ದಾಸ್ತಾನು ಮಾಡಲು ಬೃಹತ್ ಶೈತ್ಯಾಗಾರಗಳನ್ನು ನಿರ್ಮಿಸುವುದು. ಅಪಾರ ಔಷಧಿ ಸಸ್ಯ ಸಂಪತ್ತುಳ್ಳ ಕಪ್ಪತಗಿರಿ ಸಂರಕ್ಷಣೆಗೆ ಕೇಂದ್ರ ಸರ್ಕಾರದಿಂದ ವಿಶೇಷ ಪ್ಯಾಕೇಜ್ ಒದಗಿಸುವುವಂತೆ ಮನವಿ ಸಲ್ಲಿಸಲಾಯಿತು.
ಶಿವಬಸವ ಜನಕಲ್ಯಾಣ ಸಂಸ್ಥೆಯ ಬಸವಣ್ಣೆಯ್ಯ ಹಿರೇಮಠ, ಕಾರ್ಮಿಕ ಮುಖಂಡ ವೆಂಕಟೇಶ ದಾಸರ, ಎಸ್.ಕೆ. ಅಯ್ಯನಗೌಡ್ರ, ನಗರಸಭೆ ಸದಸ್ಯ ಮಂಜುನಾಥ ಮುಳಗುಂದ, ರಮೇಶ ದಾಸರ, ವೆಂಕಟೇಶ ಬೇಲೂರ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.