ಅವಧಿ ಮೀರಿದ ಗೊಬ್ಬರ: ರೈತರ ಆಕ್ರೋಶ
ಗದಗ: ಜಿಲ್ಲೆಯಲ್ಲಿ ಗುರುವಾರದಿಂದ ಮಳೆ ಪ್ರಾರಂಭವಾಗುತ್ತಿದ್ದಂತೆ ರಸಗೊಬ್ಬರದ ಬೇಡಿಕೆ ಕಂಡು ಬರುತ್ತಿದ್ದು, ಅಗತ್ಯ ರಸಗೊಬ್ಬರ ಪಡೆಯಲು ಗದಗ ನಗರದಲ್ಲಿರುವ ಒಕ್ಕಲುತನ ಹುಟ್ಟುವಳಿ ಮಾರಾಟ ಸಂಘಕ್ಕೆ ರೈತರು ಆಗಮಿಸಿದ ವೇಳೆ 2012ರಲ್ಲಿ ತಯಾರಾದ ಗೊಬ್ಬರ ಮಾರಾಟ ಮಾಡುತ್ತಿದ್ದಾರೆ ಎಂದು ಆರೋಪಿಸಿ ಶನಿವಾರ ಮಧ್ಯಾಹ್ನ ಕೆಲ ಕಾಲ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.
ಗದಗ ತಾಲೂಕಿನ ವಿವಿಧ ಗ್ರಾಮಗಳಿಂದ ಆಗಮಿಸಿದ್ದ ರೈತರು ಗೊಬ್ಬರ ಖರೀದಿಗೆ ಬಂದ ವೇಳೆಯಲ್ಲಿ ಡಿಎಪಿ, 10-26 ಹೀಗೆ ವಿವಿಧ ನಮೂನೆಯ ರಸಗೊಬ್ಬರಗಳಿದ್ದು, ಅವುಗಳೆಲ್ಲ 2012ರಲ್ಲಿ ಸಿದ್ಧವಾಗಿದ್ದವು ಎಂದು ಚೀಲಗಳ ಮೇಲೆ ನಮೂದಾಗಿದ್ದನ್ನು ಗಮನಿಸಿದ ರೈತರು, ನಮಗೆ ಪ್ರಸಕ್ತ ಸಾಲಿನ ಗೊಬ್ಬರ ನೀಡುವಂತೆ ವಿನಂತಿಸಿದ್ದಾರೆ. ಆದರೆ, ಮಾರಾಟ ಮಂಡಳಿಯಲ್ಲಿ ಕೆಲಸ ಮಾಡುವ ಸಿಬ್ಬಂದಿ ರೈತರೊಂದಿಗೆ ಸರಿಯಾಗಿ ವರ್ತಿಸದೇ ಇರುವ ಹಿನ್ನೆಲೆಯಲ್ಲಿ ರೈತರು ಮತ್ತಷ್ಟು ಜೋರಾಗಿ ಪ್ರತಿಭಟನೆ ನಡೆಸಿದ್ದಾರೆ.
ಸಿಬ್ಬಂದಿ ತಮ್ಮನಗೌಡ್ರ ಎನ್ನುವರು ರೈತರೊಂದಿಗೆ ತೀರಾ ಅಹಸ್ಯವಾಗಿ ಮಾತನಾಡಿದ ಹಿನ್ನೆಲೆಯಲ್ಲಿ ಕಚೇರಿಗೆ ನುಗ್ಗಿದ ರೈತರು ಸಿಬ್ಬಂದಿಯೊಬ್ಬರಿಗೆ ಕಪಾಳಮೋಕ್ಷ ಮಾಡಿದ್ದಾರೆ. ಇದರಿಂದ ಸ್ಥಳದಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಯಿತು. ಸ್ಥಳಕ್ಕೆ ಆಗಮಿಸಿದ ಮಾರಾಟ ಮಂಡಳಿ ನಿರ್ದೇಶಕ ವಸಂತ ಮೇಟಿ ರೈತರ ಮನವೊಲಿಸುವಲ್ಲಿ ಹರಸಾಹಸಪಡಬೇಕಾಯಿತು. ಅವರ ಮಧ್ಯಸ್ಥಿಕೆ ಸಂದರ್ಭದಲ್ಲೂ ರೈತರು, ಮಾರಾಟ ಮಂಡಳಿ ಸಿಬ್ಬಂದಿ ನಡುವೆ ಮಾತಿನ ಚಕಮಕಿ ನಡೆದಿದ್ದು, ನೀವು ಅವಧಿ ಮೀರಿದ ಗೊಬ್ಬರ ಮಾರಾಟ ಮಾಡುತ್ತಿದ್ದೀರಿ ಎಂದು ರೈತರು ಆರೋಪಿಸಿ, ನಾವು ಹಣ ಕೊಟ್ಟು ಗೊಬ್ಬರ ಖರೀದಿಸುತ್ತೇವೆ, ನಮಗೆ ಇದೇ ವರ್ಷದಲ್ಲಿಯೇ ತಯಾರಾದ ಗೊಬ್ಬರ ನೀಡಿ ಎಂದು ಆಕ್ರೋಶ ವ್ಯಕ್ತಪಡಿಸಿದರು. ಬಳಿಕ ಹೊಸ ಸ್ಟಾಕ್ ಬಂದಿರುವುದನ್ನೇ ನೀಡಲು ಪ್ರಾರಂಭಿಸಿದ ನಂತರ ಗೊಂದಲ ಇತ್ಯರ್ಥವಾಯಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

