ಇಂದು ಬಾಲಕಾರ್ಮಿಕರ ವಿರೋಧಿ ದಿನ
ಕನ್ನಡಪ್ರಭ ವಾರ್ತೆ, ಲಕ್ಷ್ಮೇಶ್ವರ, ಜೂ. 11
ವಿಶ್ವ ಬಾಲಕಾರ್ಮಿಕರ ಪದ್ಧತಿ ವಿರೋಧಿ ದಿನಾಚರಣೆ ಅಂಗವಾಗಿ ಕಾನೂನು ಸಾಕ್ಷರತಾ ಕಾರ್ಯಕ್ರಮವನ್ನು ಪಟ್ಟಣದ ಸರ್ಕಾರಿ ಪ್ರೌಢಶಾಲೆಯಲ್ಲಿ ಜೂ. 12ರಂದು ಬೆಳಗ್ಗೆ 9ಕ್ಕೆ ಆಚರಿಸುವುದಾಗಿ ಶಿರಹಟ್ಟಿ ತಾಲೂಕು ಸೇವಾ ಸಮಿತಿ ಲಕ್ಷ್ಮೇಶ್ವರ ತಿಳಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ಕಾರ್ಯಕ್ರಮದ ಉದ್ಘಾಟನೆಯನ್ನು ಲಕ್ಷ್ಮೇಶ್ವರ ಜೆಎಂಎಫ್ಸಿ ಕೋರ್ಟ್ನ ದಿವಾಣಿ ನ್ಯಾಯಾಧೀಶ ವಿಜಯಕುಮಾರ ಕನ್ನೂರ ನೆರವೇರಿಸಲಿದ್ದಾರೆ. ವಕೀಲರ ಸಂಘದ ಅಧ್ಯಕ್ಷ ವಿ.ಆರ್. ಪಾಟೀಲ ಅಧ್ಯಕ್ಷತೆ ವಹಿಸುವರು.
ಅತಿಥಿಗಳಾಗಿ ಪ್ರಭಾರಿ ತಹಸೀಲ್ದಾರ್ ಜಿ. ಕೊಟ್ರೇಶ, ಎಪಿಪಿ ಜಿ.ಎಸ್. ಪಾಟೀಲ, ಸಿಪಿಐ ಶ್ರೀನಿವಾಸ ಮೇಟಿ, ಸಿಡಿಪಿಒ ಸರಸ್ವತಿ ಹೊನ್ನೇಗೌಡರ, ಪಿಎಸ್ಐ ವಿಕಾಸ ಲಮಾಣಿ, ಪ್ರೌಢಶಾಲೆ ಮುಖ್ಯೋಪಾಧ್ಯಾಯ ಜಿ.ಎ. ಕಾಳೆ, ಉಪಾಧ್ಯಕ್ಷ ಪಿ.ಎಂ. ನಾವಿ, ವಿ.ಎಸ್. ಪಶುಪತಿಹಾಳ, ಬಿ.ಎಸ್. ಬಾಳೆಶ್ವರಮಠ, ಎನ್.ಸಿ. ಪಾಟೀಲ ಆಗಮಿಸಲಿದ್ದಾರೆ.
ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ಎಸ್. ಬುರುಡಿ ಅವರು ಕಡ್ಡಾಯ ಶಿಕ್ಷಣ ಮತ್ತು ಮಕ್ಕಳ ಹಕ್ಕುಗಳ ಕುರಿತು ಉಪನ್ಯಾಸ ನೀಡುವರು. ನ್ಯಾಯವಾದಿ ಮಹೇಶ ಹಾರೋಗೇರಿ ಬಾಲಕಾರ್ಮಿಕರ ಕಾಯ್ದೆ ಮತ್ತು ಮೂಲಭೂತ ಹಕ್ಕುಗಳ ಕುರಿತು ಉಪನ್ಯಾಸ ಮಾಡಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬೀದಿ ನಾಟಕ ತಂಡಗಳಿಗೆ ಅರ್ಜಿ ಆಹ್ವಾನ
ಗದಗ: ಪ್ರಸಕ್ತ ವರ್ಷ ವಾರ್ತಾ ಇಲಾಖೆಯಿಂದ ಹಮ್ಮಿಕೊಂಡಿರುವ ಗ್ರಾಮ ಸಂಪರ್ಕ ಕಾರ್ಯಕ್ರಮಕ್ಕಾಗಿ ಜಿಲ್ಲೆಯಲ್ಲಿರುವ ಬೀದಿ ನಾಟಕ ತಂಡಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಪ್ರತಿ ಬೀದಿ ನಾಟಕ ತಂಡದಲ್ಲಿ ಕನಿಷ್ಠ 10 ಕಲಾವಿದರು ಇರಬೇಕು. ಇದರಲ್ಲಿ ಇಬ್ಬರು ಮಹಿಳಾ ಕಲಾವಿದರು ಕಡ್ಡಾಯವಾಗಿರಬೇಕು. ಬೀದಿ ನಾಟಕ ಜತೆಗೆ ಸಂಗೀತವನ್ನು ಕಲಾವಿದರು ಪ್ರಸ್ತುತಪಡಿಸಬೇಕಾಗುತ್ತದೆ. ಸರ್ಕಾರದ ವಿವಿಧ ಅಭಿವೃದ್ಧಿ ಯೋಜನೆ ಹಾಗೂ ಕಾರ್ಯಕ್ರಮಗಳನ್ನು ಈ ತಂಡಗಳು ತಮ್ಮ ಕಲೆ ಮೂಲಕ ಗ್ರಾಮೀಣ ಪ್ರದೇಶದ ಜನರಿಗೆ ಮುಟ್ಟಿಸಬೇಕಾಗುತ್ತದೆ. ಕಾರಣ ತಂಡಗಳನ್ನು ಆಯ್ಕೆ ಮಾಡುವಾಗ ಸರ್ಕಾರದ ಯೋಜನೆ ಹಾಗೂ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡುವ ತಂಡಗಳಿಗೆ ಪ್ರಾಶಸ್ತ್ಯ ನೀಡಲಾಗುವುದು. ಕಾರ್ಯಕ್ರಮದಲ್ಲಿ ಭಾಗವಹಿಸಲು ಇಚ್ಛಿಸುವ ತಂಡದ ಮುಖ್ಯಸ್ಥರು ಸಹಾಯಕ ನಿರ್ದೇಶಕರು, ವಾರ್ತಾ ಇಲಾಖೆ ಗದಗ ಇವರಿಂದ ನಿಗದಿತ ಅರ್ಜಿ ನಮೂನೆ ಪಡೆದು ಜೂ. 13ರೊಳಗೆ ಅರ್ಜಿ ಭರ್ತಿ ಮಾಡಿ ಸಲ್ಲಿಸಬೇಕು. ತಂಡಗಳಿಂದ ಬಂದ ಅರ್ಜಿಗಳನ್ನು ಪರಿಶೀಲಿಸಿ ಆಯ್ಕೆ ಸಮಿತಿ ಮುಂದೆ ಹಾಜರಾಗಿ ಕಾರ್ಯಕ್ರಮ ನೀಡಬೇಕಾಗುತ್ತದೆ. ಆಯ್ಕೆಗಾಗಿ ಬರುವ ಸಂದರ್ಭ ಕಲಾವಿದರು ತಮ್ಮ ಸ್ವಂತ ಖರ್ಚಿನಲ್ಲಿಯೇ ಬರಬೇಕು. ಹೆಚ್ಚಿನ ವಿವರಗಳಿಗಾಗಿ ಸಹಾಯಕ ನಿರ್ದೇಶಕರು, ವಾರ್ತಾ ಇಲಾಖೆ, ಗದಗ (08372-239452) ಇವರಿಂದ ಮಾಹಿತಿ ಪಡೆಯಬಹುದಾಗಿದೆ.
ರಾಘವಾಂಕ ಪ್ರಯೋಗಶೀಲ ಕವಿ: ರಮೇಶ ನವಲೆ
ಗದಗ: ಕನ್ನಡ ಸಾಹಿತ್ಯದಲ್ಲಿ ಮೊಟ್ಟ ಮೊದಲಿಗೆ ಷಟ್ಪದಿ ರೂಪವನ್ನು ಪಳಗಿಸಿ, ದೀರ್ಘ ಕಥಾ ನಿರೂಪಣೆಯನ್ನು ಸೊಗಸಾಗಿ ಅಳವಡಿಸಿಕೊಂಡಿರುವ ರಾಘವಾಂಕ ಪ್ರಯೋಗಶೀಲ ಮತ್ತು ಸ್ವತಂತ್ರ ಮನೋಧರ್ಮದ ಕವಿ ಎಂದು ಲಕ್ಷ್ಮೇಶ್ವರದ ಪಿಎಸ್ಬಿಡಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ರಮೇಶ ನವಲೆ ಹೇಳಿದರು. ಗದಗ ಜಿಲ್ಲಾ ಕಸಾಪ ಕಾರ್ಯಾಲಯದಲ್ಲಿ ಕಸಾಪ ವತಿಯಿಂದ ಹಮ್ಮಿಕೊಂಡ ಶನಿವಾರ ಸಾಹಿತ್ಯ ಸಂಜೆ ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯಕ್ಕೆ ರಾಘವಾಂಕ ಕವಿಯ ಕೊಡುಗೆ ಕುರಿತು ಉಪನ್ಯಾಸ ನೀಡಿದರು. ಸೋಮನಾಥ ಚಾರಿತ್ರ್ಯವು ವಿಶೇಷವಾಗಿ ಗದಗ ಜಿಲ್ಲೆಯ ಪುಲಿಗೆರೆ ಇಂದಿನ ಲಕ್ಷ್ಮೇಶ್ವರವನ್ನು ಅದ್ಭುತವಾಗಿ ವರ್ಣಿಸಿರುವ ರಾಘವಾಂಕ ಶರಣ ಆದಯ್ಯನ ಪಾತ್ರಕ್ಕೆ ಅಪರೂಪದ ಕಳೆ ನೀಡಿದ್ದಾನೆ ಎಂದರು. ಕಸಾಪ ಜಿಲ್ಲಾಧ್ಯಕ್ಷ ಡಾ. ಶಿವಪ್ಪ ಕುರಿ ಅಧ್ಯಕ್ಷತೆ ವಹಿಸಿದ್ದರು. ನರೇಗಲ್ಲಿನ ಅನ್ನದಾನೇಶ್ವರ ಕಾಲೇಜಿನ ಕನ್ನಡ ಸಹ ಪ್ರಾಧ್ಯಾಪಕ ಸಿ.ಜಿ. ಹುಡೇದಗಡ್ಡಿ ಪ್ರಾಸ್ತಾವಿಕ ಮಾತನಾಡಿದರು. ಪ್ರಾ. ಕೆ.ಎಚ್. ಬೇಲೂರ, ಎಫ್.ಪಿ. ಲಕ್ಷ್ಮೇಶ್ವರಮಠ, ಆರ್.ಈ. ಚಿಕ್ಕಮಠ, ದತ್ತಪ್ರಸನ್ನ ಪಾಟೀಲ, ಈ.ಎಸ್. ಯತ್ನಟ್ಟಿ, ಮಲ್ಲಿಕಾರ್ಜುನ ಪೂಜಾರ, ಬಿ.ಎಸ್. ಹಿಂಡಿ, ಸಿ.ಕೆ. ಕೇಸರಿ, ಕವಿ ಕುಂದಗೋಳ,ರಾಜಶೇಖರಯ್ಯ ಕಾಲವಾಡಮಠ, ಜಿ.ಬಿ. ಬಂಡಿಹಾಳ, ವಾಸುದೇವ ಹೂಲಿ, ಮರುಳಸಿದ್ದಪ್ಪ ದೊಡಮನಿ
ಮತದಾರರ ಪಟ್ಟಿ ಪರಿಶೀಲಿಸಿ
ಗದಗ: ಕರ್ನಾಟಕ ಪಶ್ಚಿಮ ಪದವೀಧರರ ಕ್ಷೇತ್ರದ ಚುನಾವಣೆ-2014ರ ಕುರಿತು ಮತದಾರರ ಪಟ್ಟಿಗಳನ್ನು ಸಂಬಂಧಿಸಿದ ತಹಸೀಲ್ದಾರ್ ಕಾರ್ಯಾಲಯ ಹಾಗೂ ಜಿಲ್ಲಾಧಿಕಾರಿಗಳ ಕಾರ್ಯಾಲಯದ ಚುನಾವಣೆ ಶಾಖೆಯಲ್ಲಿ ಪರಿಶೀಲನೆಗಾಗಿ ಕಚೇರಿ ವೇಳೆ ಇಡಲಾಗಿರುತ್ತದೆ. ಅಲ್ಲದೇ ಢಿಢಿಢಿ.್ಜಛಜಛ್ಜ.ಟ್ಝ್ಛಿ.್ಝಟಿ ವೆಬ್ಸೈಟ್ ದಲ್ಲೂ ಪ್ರಕಟಿಸಲಾಗಿದೆ. ಸಂಬಂಧಿಸಿದವರು ತಮ್ಮ ಹೆಸರುಗಳು ಮತದಾರರ ಪಟ್ಟಿಯಲ್ಲಿ ಇರುವ ಬಗ್ಗೆ ಪರಿಶೀಲಿಸಿಕೊಳ್ಳಬಹುದು. ಮತದಾರರ ಪಟ್ಟಿಯ ಬಗ್ಗೆ ಅಥವಾ ಕರ್ನಾಟಕ ಪಶ್ಚಿಮ ಪದವೀಧರರ ಮತಕ್ಷೇತ್ರ ಚುನಾವಣೆ-2014ರ ಕುರಿತು ವಿಚಾರಣೆಗೆ ಜಿಲ್ಲಾಧಿಕಾರಿ ಕಾರ್ಯಾಲಯ ದೂ: 08372-220180ಗೆ ಕರೆ ಮಾಡಿ ವಿಚಾರಿಸಬಹುದಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಎನ್.ಎಸ್. ಪ್ರಸನ್ನಕುಮಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವಿಶ್ವ ಬಾಲಕಾರ್ಮಿಕ ವಿರೋಧಿ ದಿನಾಚರಣೆ ಇಂದು
ಗದಗ: ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಗದಗ, ಜಿಲ್ಲಾಡಳಿತ, ಜಿಲ್ಲಾ ನ್ಯಾಯವಾದಿಗಳ ಸಂಘ, ಆರಕ್ಷಕ ಇಲಾಖೆ, ಕಾರ್ಮಿಕ ಇಲಾಖೆ, ಜಿಲ್ಲಾ ಬಾಲಕಾರ್ಮಿಕ ಯೋಜನಾ ಸಂಸ್ಥೆ, ಸಾರ್ವಜನಿಕ ಶಿಕ್ಷಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಲಯನ್ಸ್ ಶಿಕ್ಷಣ ಸಂಸ್ಥೆ ಗದಗ ಆಶ್ರಯದಲ್ಲಿ ಜೂ. 12ರಂದು ಬೆಳಗ್ಗೆ 9.15ಕ್ಕೆ ನಗರದ ಮುಂಡರಗಿ ರಸ್ತೆಯಲ್ಲಿರುವ ಲಯನ್ಸ್ ಶಿಕ್ಷಣ ಸಂಸ್ಥೆಯಲ್ಲಿ ವಿಶ್ವ ಬಾಲಕಾರ್ಮಿಕ ಪದ್ಧತಿ ವಿರೋಧಿ ದಿನಾಚರಣೆ ಹಮ್ಮಿಕೊಳ್ಳಲಾಗಿದೆ.
ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಅಧ್ಯಕ್ಷ ಎಸ್.ಎಸ್. ಮುರಗೋಡ ಉದ್ಘಾಟಿಸುವರು. ಲಯನ್ಸ್ ಶಿಕ್ಷಣ ಸಂಸ್ಥೆ ಚೇರ್ಮನ್ ಜೆ.ಡಿ. ಉತ್ತರಕರ ಅಧ್ಯಕ್ಷತೆ ವಹಿಸುವರು. ಅತಿಥಿಗಳಾಗಿ ಜಿಲ್ಲಾಧಿಕಾರಿ ಎನ್.ಎಸ್. ಪ್ರಸನ್ನಕುಮಾರ, ಕುಲಕರ್ಣಿ ಅಂಬಾದಾಸ್, ಹೊಸಮನಿ ಪುಂಡಲಿಕ, ಎಸ್ಪಿ ಕೆ.ಟಿ. ಬಾಲಕೃಷ್ಣ, ಸಿಇಒ ವೀರಣ್ಣ ತುರಮರಿ, ವಿ.ಬಿ. ಹುಬ್ಬಳ್ಳಿ, ಬಿ.ವಿ. ರಾಜೇಂದ್ರಪ್ರಸಾದ್, ಎಚ್.ಎಸ್. ಪರಮೇಶ್ವರಪ್ಪ, ಎಂ.ಬಾಲಕೃಷ್ಣ, ಐ.ಬಿ. ಬೆನಕೊಪ್ಪ, ಎಚ್.ಎಸ್. ದಳವಾಯಿ ಇತರರು ಆಗಮಿಸುವರು. ಕಾರ್ಮಿಕ ನಿರೀಕ್ಷಕ ಎಂ.ಎಂ. ಯತ್ನಟ್ಟಿ ಅವರು ಬಾಲಕಾರ್ಮಿಕ (ನಿಷೇಧ ಮತ್ತು ನಿಯಂತ್ರಣ) ಕಾಯ್ದೆ 1986 ಹಾಗೂ ಪುಷ್ಪಾ ಪಾಟೀಲ ಅವರು ಭಾರತೀಯ ಸಂವಿಧಾನದ ಮೂಲಭೂತ ಕರ್ತವ್ಯಗಳ ಕುರಿತು ಉಪನ್ಯಾಸ ನೀಡುವರು ಎಂದು ಪ್ರಕಟಣೆ ತಿಳಿಸಿದೆ.
ಸೋಲಿನಲ್ಲೂ ಗೆಲವಿದೆ: ವಿಜಯ ಡಂಬಳ
ಗದಗ: ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಸೋಲು, ಗೆಲುವು ಒಂದೇ ನಾಣ್ಯದ ಎರಡು ಮುಖಗಳು ಗೆದ್ದರೆ ಉತ್ಸಾಹ, ಸೋತರೆ ನಿರಾಸಕ್ತಿ ಆದ್ದರಿಂದ ಸೋಲಿನಲ್ಲಿಯೂ ಗೆಲುವಿನ ರುಚಿಯನ್ನು ಕಾಣಬೇಕು ಎಂದು ಡಿವೈಎಸ್ಪಿ ವಿಜಯ ಡಂಬಳ ಹೇಳಿದರು.
ಅವರು ಈಚೆಗೆ ನಗರದ ಮಹೇಂದ್ರಕರ ವೃತ್ತದ ಹತ್ತಿರದ ಎಂ.ಎಸ್. ಹುಲ್ಲೂರ ಫೌಂಡೇಶನ್ ಟ್ರಸ್ಟ್ನ ನ್ಯೂ ಎಕ್ಸಲೆಂಟ್ ಸೆಂಟರ್ನಲ್ಲಿ ಈಗಾಗಲೇ ದೈಹಿಕ ಪರೀಕ್ಷೆಯಲ್ಲಿ ಅರ್ಹತೆ ಪಡೆದಿದ್ದು, ಮುಂದಿನ ಸಿಇಟಿ ಪರೀಕ್ಷೆಯ ಹಂತದಲ್ಲಿರುವ ಹೊಸ ಪೊಲೀಸ್ ಸಿಇಟಿ ತರಬೇತಿ ತಂಡದ ಉದ್ಘಾಟನಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು. ನವಕರ್ನಾಟಕ ಜನಪರ ಅಭಿವೃದ್ಧಿ ವೇದಿಕೆ ರಾಜ್ಯಾಧ್ಯಕ್ಷ ಪಿ. ಸುಬ್ರಮಣ್ಯಂರೆಡ್ಡಿ, ಹುಯಿಲಗೋಳ ನಾರಾಯಣರಾವ ಕಲಾ ಮತ್ತು ಸಾಂಸ್ಕೃತಿಕ ರಾಜ್ಯ ಸಮಿತಿಯ ಅಧ್ಯಕ್ಷ ಸಿಜಿಬಿ ಹಿರೇಮಠ, ಉಪಾಧ್ಯಕ್ಷ ಎನ್.ಕೆ. ಕೊರ್ಲಹಳ್ಳಿ ಹಾಗೂ ಅಧ್ಯಕ್ಷತೆ ವಹಿಸಿದ್ದ ಕೋಚಿಂಗ್ ಸೆಂಟರ್ ಸಂಸ್ಥಾಪಕ ಅಧ್ಯಕ್ಷ ಎಂ.ಎಸ್. ಹುಲ್ಲೂರ ಮಾತನಾಡಿದರು. ಅಶೋಕ, ಮಂಜುನಾಥ ಪಲ್ಲೇದ, ದೀಪಾ ಪಟ್ಟಣ, ಶೋಭಾ, ಮತ್ತು ಪೊಲೀಸ್ ಸಿಇಟಿ ಸ್ಪರ್ಧಾರ್ಥಿಗಳು ಭಾಗವಹಿಸಿದ್ದರು. ಮೇಘಾ ಅಬ್ಬಿಗೇರಿ, ಸಂಗಡಿಗರು ಪ್ರಾರ್ಥಿಸಿದರು. ಶಿಕ್ಷಕ ರಂಗನಾಥ ದಾಸರ ನಿರ್ವಹಿಸಿದರು. ಶಿಕ್ಷಕ ಉಮರಖಾನ್ ಡಾಲಾಯತ ಸ್ವಾಗತಿಸಿ, ವಂದಿಸಿದರು.
ಎಲ್ಲರ ಹಿತಕ್ಕೆ ಸಂಕನೂರ ಗೆಲ್ಲಿಸಿ: ಪಾಟೀಲ
ಗದಗ: ಜೂ. 20ರಂದು ಮತದಾನ ನಡೆವ ಪಶ್ಚಿಮ ಪದವೀಧರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪ್ರಾ.ಎಸ್.ವಿ. ಸಂಕನೂರ ಅವರನ್ನು ಪದವೀಧರ ನೌಕರರು, ನಿರುದ್ಯೋಗಿಗಳು, ಶಿಕ್ಷಕರು, ಪ್ರಾಧ್ಯಾಪಕರು, ವಕೀಲರೆಲ್ಲರ ಹಿತರಕ್ಷಣೆಗಾಗಿ ಆರಿಸಿ ತರುವ ಸಂಕಲ್ಪ ಮಾಡಬೇಕೆಂದು ಮಾಜಿ ಸಚಿವ ಸಿ.ಸಿ. ಪಾಟೀಲ ಕರೆ ನೀಡಿದರು. ಅವರು ಜಿಲ್ಲೆಯ ನರಗುಂದ ಪಟ್ಟಣದಲ್ಲಿ ಪ್ರಾ. ಸಂಕನೂರ ಬೆಂಬಲಾರ್ಥ ಈಚೆಗೆ ಜರುಗಿದ ನಡೆದ ಸಭೆಯನ್ನುದ್ದೇಶಿಸಿ ಮಾತನಾಡಿದರು. ಅಭ್ಯರ್ಥಿ ಎಸ್.ವಿ. ಸಂಕನೂರ ಮುಂತಾದವರು ಮಾತನಾಡಿದರು. ಪಕ್ಷದ ಅನೇಕ ಹಿರಿಯ ಪದಾಧಿಕಾರಿಗಳು, ಪದವೀಧರ ಕ್ಷೇತ್ರದ ಪ್ರಮುಖ ಮತದಾರರು ಮಾತನಾಡಿ ಪ್ರಾ. ಸಂಕನೂರ ಅವರಿಗೆ ಈ ಸಲದ ಚುನಾವಣೆಯಲ್ಲಿ ಖಂಡಿತ ಗೆಲುವಿನ ಬೆಂಬಲ ನೀಡುವ ವಾಗ್ದಾನ ಮಾಡಿದರು. ನಂತರ ನರಗುಂದ ತಾಲೂಕಿನ ವಿವಿಧ ಶಾಲಾ-ಕಾಲೇಜು ಶಿಕ್ಷಣ ಸಂಸ್ಥೆ, ಬ್ಯಾಂಕುಗಳು ಹಾಗೂ ವಿವಿಧ ಶಿಕ್ಷಕ ಸಂಘಟನೆಗಳಿಗೆ ತೆರಳಿ ಮತ ಯಾಚಿಸಲಾಯಿತು.
ಶಿಕ್ಷಕನ ಮಗನಾಗಿ ಬೆಳೆದೆ, ರಾಜಕಾರಣಿ ಮಗನಾಗಿ ಅಲ್ಲ: ವಸಂತ ಹೊರಟ್ಟಿ
ಮುಂಡರಗಿ: ತಂದೆ ಬಸವರಾಜ ಹೊರಟ್ಟಿಯವರು 34 ವರ್ಷಗಳಿಂದ ರಾಜಕಾರಣ ಮಾಡುತ್ತ ಬಂದಿದ್ದು, ನಾನೆಂದೂ ಅವರೊಂದಿಗೆ ವೇದಿಕೆ ಹಂಚಿಕೊಂಡು ರಾಜಕೀಯ ಮಾಡಿಲ್ಲ. ಅವರಂತೆ ರಾಜಕಾರಣಿಯಾಗಬೇಕು ಎಂದು ಬಯಸಿದವನೂ ಅಲ್ಲ. ಶಿಕ್ಷಕನ ಮಗನಾಗಿ ಬೆಳೆದಿದ್ದೇನೆ. ರಾಜಕಾರಣಿ ಮಗನಾಗಿ ಅಲ್ಲ ಎಂದು ಪಶ್ಚಿಮ ಪದವೀಧರ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ವಸಂತ ಹೊರಟ್ಟಿ ಹೇಳಿದರು.ಬುಧವಾರ ಮುಂಡರಗಿ ಪಟ್ಟಣಕ್ಕೆ ಆಗಮಿಸಿ ಡಾ. ಅನ್ನದಾನೀಶ್ವರ ಶ್ರೀಗಳ ಆಶೀರ್ವಾದ ಪಡೆದು ನಂತರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಕೆಲವರು ಜೆಡಿಎಸ್ ಕುಟುಂಬ ರಾಜಕಾರಣ ಮಾಡುತ್ತಿದೆ ಎಂದು ಆರೋಪಿಸುವುದು ಶುದ್ಧ ಸುಳ್ಳು. ಪದವೀಧರರ ಸಮಸ್ಯೆಗಳ ನಿವಾರಣೆಗೆ ನಾನು ರೂಪಿಸಿಕೊಂಡ ಕಾರ್ಯಕ್ರಮ, ಚಿಂತನೆ, ಯೋಚನೆ, ಯೋಜನೆಗಳನ್ನು ಕಾರ್ಯಗತಗೊಳಿಸುವ ಉದ್ದೇಶದಿಂದಲೇ ಪದವೀಧರ ಕ್ಷೇತ್ರ ಅಭ್ಯರ್ಥಿಯಾಗಿದ್ದೇನೆ ಎಂದರು. ಬಸವರಾಜ ಧಾರವಾಡ, ಎಸ್.ಎಂ. ಕೊಟಗಿ ಮಾತನಾಡಿದರು. ವೆಂಕಟೇಶ ಕಟ್ಟಿಮನಿ, ಲಕ್ಷ್ಮಿದೇವಿ ಕಟ್ಟಿಮನಿ, ಎಸ್.ಬಿ. ಇಟಗಿ, ಎಂ.ಕೆ. ಗುಂಡಿಕೇರಿ ಇತರರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

