ಗದಗ: ಮಾಹಿತಿ ಸಲ್ಲಿಸಲು ಪಡಿತರ ಚೀಟಿದಾರರಿಗೆ ಆಹಾರ ಇಲಾಖೆ ಸೂಚನೆ
ಕನ್ನಡಪ್ರಭ ವಾರ್ತೆ, ಗದಗ, ಜೂ. 11
ಸಾರ್ವಜನಿಕ ವಿತರಣಾ ವ್ಯವಸ್ಥೆಯಲ್ಲಿ ದತ್ತಾಂಶ ಉನ್ನತೀಕರಿಸಲು ಮಾಹಿತಿ ನೀಡುವಂತೆ ಆಹಾರ ಇಲಾಖೆಯು ಪಡಿತರ ಚೀಟಿದಾರರಿಗೆ ತಿಳಿಸಿದೆ.
ಪಡಿತರದಾರರು ಸರಿಯಾದ ಮೊಬೈಲ್ ಸಂಖ್ಯೆ ನೀಡಬೇಕು. ನಂತರ ಅದೇ ಮೊಬೈಲ್ನಿಂದ ಕುಟುಂಬದ ಮುಖ್ಯಸ್ಥರ ಹಾಗೂ ಕಾರ್ಡ್ನಲ್ಲಿರುವ ಇತರ ಎಲ್ಲ ವಯಸ್ಕ ಸದಸ್ಯರ ಇಪಿಐಸಿ ಮತ್ತು ಯುಐಡಿ ಸಂಖ್ಯೆ ನೀಡಬೇಕು. ಇವುಗಳಿರುವ ಅರ್ಜಿಗಳನ್ನು ಆದ್ಯತೆ ಮೇಲೆ ವಿಲೇವಾರಿಗೊಳಿಸಲಾಗುತ್ತದೆ.
2010ಕ್ಕಿಂತ ಪೂರ್ವ ವಿತರಿಸಿದ ಪಡಿತರ ಚೀಟಿಗಳನ್ನು ನವೀಕರಿಸಿಕೊಳ್ಳದಿರುವವರು ಜೂ. 30ರೊಳಗಾಗಿ ಇಪಿಐಸಿ ಹಾಗೂ ಯುಐಡಿ ಸಂಖ್ಯೆ ನೀಡಬೇಕು.
ಮೊಬೈಲ್ ವ್ಯವಸ್ಥೆ: ಮೇಲ್ಕಂಡ ಮಾಹಿತಿಯನ್ನು ಆಹಾರ ಕಚೇರಿಗೆ ಮೊಬೈಲ್ ಮೂಲಕ ನೀಡಲು ಹಾಗೂ ಅಲೆದಾಟ ತಪ್ಪಿಸಲು ಎಸ್ಎಂಎಸ್ ವ್ಯವಸ್ಥೆ ರೂಪಿಸಲಾಗಿದೆ. ಚಾಲ್ತಿಯಲ್ಲಿರುವ ಪಡಿತರ ಚೀಟಿದಾರರು ಮೊದಲು ತಮ್ಮ ಸರಿಯಾದ ಮೊಬೈಲ್ ಸಂಖ್ಯೆಯಿಂದ ಖಈಂಕಇ ಎಂದು ಟೈಪ್ ಮಾಡಿ ಒಂದು ಸ್ಪೇಸ್ ಬಿಟ್ಟು ತಮ್ಮ ರೇಶನ್ ಕಾರ್ಡ್ ಸಂಖ್ಯೆ ನಮೂದಿಸಿ ಹಾಗೂ ಹೊಸದಾಗಿ ಅರ್ಜಿ ಸಲ್ಲಿಸಿದ ಅರ್ಜಿದಾರರು ಖಈಂಕಇ ಎಂದು ಟೈಪ್ ಮಾಡಿ ಒಂದು ಸ್ಪೇಸ್ ಬಿಟ್ಟು ತಮ್ಮ ಸರಿಯಾದ ಅರ್ಜಿ ಸಂಖ್ಯೆ ನಮೂದಿಸಿ 9212357123 ಸಂಖ್ಯೆಗೆ ಎಸ್ಎಂಎಸ್ ಕಳಿಸಬೇಕು. ಮೊಬೈಲ್ ಸಂಖ್ಯೆ ನೀಡಿದ ನಂತರ ಅದೇ ಮೊಬೈಲ್ನಿಂದ ಖಈಊಕಿಐಈ ಎಂದು ಟೈಪ್ ಮಾಡಿ ಒಂದು ಸ್ಪೇಸ್ ಬಿಟ್ಟು ತಮ್ಮ ಸರಿಯಾದ ಊಕಿಐ ಈ ಸಂಖ್ಯೆ ನಮೂದಿಸಿ 9212357123 ಸಂಖ್ಯೆಗೆ ಕಳಿಸಬೇಕು. ನಂತರ ಕುಟುಂಬದ ಎಲ್ಲ ಸದಸ್ಯರ ಊಕಿಐಈ ಸಂಖ್ಯೆಯನ್ನು ಒಂದೊಂದಾಗಿ ಇದೇ ವಿಧಾನದಲ್ಲಿ ಕಳಿಸಬೇಕು.
ಯುಐಡಿ ಸಂಖ್ಯೆಯನ್ನು ಮೇಲ್ಕಂಡಂತೆ ಕಳಿಸಬೇಕು. ಮಾಹಿತಿಗಳನ್ನು ರೇಶನ್ ಕಾರ್ಡ್ ಚುನಾವಣಾ ಆಯೋಗ ಮತ್ತು ಆಧಾರ ದತ್ತಾಂಶದೊಂದಿಗೆ ತಾಳೆ ನೋಡಿ ನೈಜತೆ ದೃಢೀಕರಿಸಲಾಗುವುದು. ಮೇಲ್ಕಂಡ ಮಾಹಿತಿ ನೀಡದಿರುವ ಪಡಿತರ ಚೀಟಿದಾರರ ಪಡಿತರ ಚೀಟಿಗಳನ್ನು ಸಂಶಯಾಸ್ಪದವಿದ್ದಲ್ಲಿ ಅಂತಹ ಪಡಿತರ ಚೀಟಿಗಳನ್ನು ಹೆಚ್ಚಿನ ತನಿಖೆಗಾಗಿ ಕಾಯ್ದರಿಸಲಾಗುವುದು. ಮೊಬೈಲ್ ಫೋನ್ ಹೊಂದದಿರುವವರು ಹತ್ತಿರದ ಅರ್ಜಿ ಕೇಂದ್ರಗಳಾದ ಫೋಟೋ ಬಯೋಕೇಂದ್ರ, ಗ್ರಾಪಂ ಕಚೇರಿ, ತಾಲೂಕು ಕಚೇರಿ, ಅಟಲ್ ಜನಸ್ನೇಹಿ ಕೇಂದ್ರಗಳಲ್ಲಿ ಊಕಿಐಈ ಮತ್ತು ಯುಐಡಿ ಸಂಖ್ಯೆ ನೊಂದಾಯಿಸಬಹುದು.
ತಪ್ಪು ಮಾಹಿತಿ ನೀಡುವುದು ಅಗತ್ಯ ವಸ್ತುಗಳ ಕಾಯ್ದೆಯಡಿ ಹಾಗೂ ಅಪರಾಧ ಪ್ರಕ್ರಿಯೆ ಸಂಹಿತೆಯಡಿ ಶಿಕ್ಷಾರ್ಹ ಅಪರಾಧವಾಗಿದೆ. ಹೆಚ್ಚಿನ ಮಾಹಿತಿಗಾಗಿ ಸಂಬಂಧಪಟ್ಟ ಸಹಾಯಕ ನಿರ್ದೇಶಕರ ಕಚೇರಿ, ತಹಸೀಲ್ದಾರ್ ಕಚೇರಿ, ಸಂಬಂಧಪಟ್ಟ ಆಹಾರ ಶಿರಸ್ತೇದಾರ, ಆಹಾರ ನಿರೀಕ್ಷಕರು ಅಥವಾ ಉಪ ನಿರ್ದೇಶಕರನ್ನು ಸಂಪರ್ಕಿಸಬಹುದಾಗಿದ್ದು, ದೂರುಗಳಿದ್ದಲ್ಲಿ ಆಯುಕ್ತರ ಕಚೇರಿಯ ಉಚಿತ ದೂರವಾಣಿ ಸಂಖ್ಯೆ 1967ಗೆ ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

