ಗದಗ

ವಸಂತ ಗೆಲುವು ನಿಶ್ಚಿತ: ಹೊರಟ್ಟಿ

Published On :

ಕಾರವಾರ: ಪಶ್ಚಿಮ ಪದವೀಧರ ಮತಕ್ಷೇತ್ರದಲ್ಲಿ ಜೆಡಿಎಸ್ನ ವಸಂತ ಹೊರಟ್ಟಿ ಅವರಿಗೆ ವ್ಯಾಪಕ ಬೆಂಬಲ ವ್ಯಕ್ತವಾಗಿದೆ. ಪ್ರಜ್ಞಾವಂತ ಮತದಾರರು ಜನಪರ ಕಾಳಜಿಯುಳ್ಳ ವಸಂತ ಹೊರಟ್ಟಿಯವರನ್ನು ಹೆಚ್ಚಿನ ಮತಗಳ ಅಂತರದಿಂದ ಗೆಲ್ಲಿಸಲಿದ್ದಾರೆ ಎಂದು ಮಾಜಿ ಸಚಿವ ಬಸವರಾಜ ಹೊರಟ್ಟಿ ವಿಶ್ವಾಸ ವ್ಯಕ್ತ ಪಡಿಸಿದರು.
ಅವರು ಬುಧವಾರ ನಗರದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ರಾಜ್ಯ ಹಾಗೂ ರಾಷ್ಟ್ರ ರಾಜಕಾರಣಕ್ಕೆ ಸಂಬಂಧವಿಲ್ಲದ ಚುನಾವಣೆ ಇದಾಗಿದೆ. ಮತದಾರರು ವಸಂತ ಹೊರಟ್ಟಿ ಅವರನ್ನು ಗೆಲ್ಲಿಸಲಿದ್ದಾರೆ. ಈಗಾಗಲೇ 62 ಸಾವಿರ ಮತದಾರರನ್ನು ವೈಯಕ್ತಿಕ ಭೇಟಿ ಮಾಡಿ ಅವರಿಂದ ಮತಯಾಚನೆ ಮಾಡಲಾಗಿದೆ. ಮತದಾರರು ಕೂಡ ವಸಂತ ಹೊರಟ್ಟಿ ಬಗ್ಗೆ ಉತ್ತಮ ನಿಲುವನ್ನು ಹೊಂದಿದ್ದಾರೆ ಎಂದು ಹೇಳಿದರು.
ವಸಂತ ಹೊರಟ್ಟಿ ರಾಜಕೀಯ ಕುಟುಂಬದಿಂದ ಬಂದವರಾದರೂ ಯಾವದೇ ಕಳಂಕ ಹೊಂದಿಲ್ಲ. ಪಶ್ಚಿಮ ಪದವೀಧರ ಮತಕ್ಷೇತ್ರಕ್ಕೆ ಯೋಗ್ಯ ಅಭ್ಯರ್ಥಿಯಾಗಿದ್ದಾರೆ. ವಸಂತ ಹೊರಟ್ಟಿ ಗೆಲುವು ನಿಶ್ಚಿತ ಎಂದರು. ಯುವಕರಿಗೆ ಪ್ರಾಧಾನ್ಯತೆ ನೀಡಿ ಜೆಡಿಎಸ್ ವಸಂತ್ ಅವರಿಗೆ ಟಿಕೆಟ್ ನೀಡಿದೆ ಎಂದರು.
ಚುನಾವಣಾ ಕಣದಲ್ಲಿ 16 ಅಭ್ಯರ್ಥಿಗಳಿದ್ದು ಅವರಲ್ಲಿ ವಸಂತ ಹೊರಟ್ಟಿ ಆಯ್ಕೆ ಯೋಗ್ಯವಾದದ್ದು ಎಂದು ಅಭಿಪ್ರಾಯ ವ್ಯಕ್ತ ಪಡಿಸಿದರು. ಜೆಡಿಎಸ್ ಕುಟುಂಬ ರಾಜಕಾರಣಕ್ಕೆ ಸಂಬಂಧಿಸಿದಂತೆ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ತಮ್ಮ ಮಗ ಎಂದು ವಸಂತ ಹೊರಟ್ಟಿಯವರಿಗೆ ಪಕ್ಷ ಟಿಕೆಟ್ ನೀಡಿಲ್ಲ. ಅವರ ಯೋಗ್ಯತೆ, ಜನಪರ ಕಾಳಜಿ ಹಾಗೂ ಮತದಾರರ ಅಂತರಾಳ ಅಭ್ಯಸಿಸಿ ಟಿಕೆಟ್ ನೀಡಿದೆ. ಇದನ್ನು ಕುಟುಂಬ ರಾಜಕಾರಣ ಎಂಬ ಭಾವನೆಯಿಂದ ನೋಡುವುದು ಬೇಡ ಎಂದರು.
ಶಿಕ್ಷಣ ಹಾಗೂ ಕ್ರೀಡಾ ಕ್ಷೇತ್ರಗಳಲ್ಲದೆ, ಸಮಾಜ ಮುಖಿಯಾಗಿ ಸಾಮಾಜಿಕ ಸ್ವಾಸ್ಥ್ಯ, ಬಡಜನರ ಏಳ್ಗೆ, ಅಭಿವೃದ್ಧಿ, ಪರಿಸರ ಕಾಳಜಿ, ನೈರ್ಮಲ್ಯ, ಆರೋಗ್ಯ ಹೀಗೆ ಅನೇಕ ಕ್ಷೇತ್ರಗಳಲ್ಲಿ ಭಾಗಿಯಾಗುವ ಮೂಲಕ ವಸಂತ ಹೊರಟ್ಟಿ ಜನತೆಗೆ ಸ್ಪಂದಿಸುತ್ತಿದ್ದಾರೆ. ಶೈಕ್ಷಣಿಕ ಹಾಗೂ ಕ್ರೀಡಾ ಕ್ಷೇತ್ರಗಳಲ್ಲಿ ಆ ದೇಶಗಳು ಮಾಡಿರುವ ಪ್ರಗತಿಯನ್ನು ಅಭ್ಯಸಿಸಿದ್ದಾರೆ ಎಂದು ವಿವರಿಸಿದರು. ಅವರು ಯುವಕರಾಗಿದ್ದು, ಶೈಕ್ಷಣಿಕ ಕ್ಷೇತ್ರದಲ್ಲಿ ಇನ್ನಷ್ಟು ಸಾಧನೆ ಮಾಡುವ ಹಂಬಲದಿಂದ ಚುನಾವಣಾ ಕಣಕ್ಕಿಳಿದಿದ್ದಾರೆ. ಪಶ್ಚಿಮ ಪದವೀಧರ ಕ್ಷೇತ್ರದ ಮತದಾರರು ಅವರನ್ನು ಬೆಂಬಲಿಸಲಿದ್ದಾರೆ ಎಂಬ ವಿಶ್ವಾಸ ತಮಗಿದೆ ಎಂದು ಬಸವರಾಜ ಹೊರಟ್ಟಿ ತಿಳಿಸಿದರು.
ನ್ಯಾಯವಾದಿ ಬಿ.ಡಿ. ಹಿರೇಮಠ, ಪ್ರಕಾಶ ನಾಯ್ಕ, ಸಂಜು ನಾಯ್ಕ ಮತ್ತಿತರರು ಇದ್ದರು.
ವಸಂತ ಹೊರಟ್ಟಿ ರಾಜಕೀಯ ಕುಟುಂಬದಿಂದ ಬಂದವರಾದರೂ ಯಾವದೇ ಕಳಂಕ ಹೊಂದಿಲ್ಲ. ಪಶ್ಚಿಮ ಪದವೀಧರ ಮತಕ್ಷೇತ್ರಕ್ಕೆ ಯೋಗ್ಯ ಅಭ್ಯರ್ಥಿಯಾಗಿದ್ದಾರೆ. ವಸಂತ ಹೊರಟ್ಟಿ ಗೆಲುವು ನಿಶ್ಚಿತ. ಯುವಕರಿಗೆ ಪ್ರಾಧಾನ್ಯ ನೀಡಿ ಜೆಡಿಎಸ್ ವಸಂತ್ ಅವರಿಗೆ ಟಿಕೆಟ್ ನೀಡಿದೆ.
- ಬಸವರಾಜ ಹೊರಟ್ಟಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.