ಸಂಘಟಿತ ಕಾರ್ಯದಿಂದ ದೇಶ ಅಭಿವೃದ್ಧಿ: ಗವಿಸಿದ್ಧಯ್ಯ ಹಳ್ಳಿಕೇರಿಮಠ
ಗದಗ: ಸಂಘಟಿತ ಕಾರ್ಯದಿಂದ ದೇಶದ ಅಭಿವೃದ್ಧಿ ಸಾಧ್ಯ ಎಂದು ಇತಿಹಾಸ ಪುನರುತ್ಥಾನ ಸಮಿತಿಯ ಮುಖ್ಯಸ್ಥ ಗವಿಸಿದ್ಧಯ್ಯ ಹಳ್ಳಿಕೇರಿಮಠ ಹೇಳಿದರು.
ನಗರದ ಮಾರುತಿ ದೇವಸ್ಥಾನದ ಸಭಾಭವನದಲ್ಲಿ ನಗರಸಭೆಯ ಸ್ವರ್ಣ ಜಯಂತಿ ಶಹರಿ ರೋಜಗಾರ ಯೋಜನೆ ಘಟಕ ಹಾಗೂ ದೃಷ್ಟಿ ಫೌಂಡೇಶನ್ ಆಶ್ರಯದಲ್ಲಿ ಈಚೆಗೆ ಹಮ್ಮಿಕೊಳ್ಳಲಾದ ವೃತ್ತಿಕೌಶಲ್ಯ ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿ, ಸಮಾಜದಲ್ಲಿ ದುರ್ಬಲರು, ಆರ್ಥಿಕ ಹಿನ್ನಡೆಯುಳ್ಳವರಿಗೆ ಸಹಾಯ ಸಹಕಾರ ನೀಡಿ ಅನುಕೂಲತೆ ಒದಗಿಸುವುದು, ಪ್ರತಿಭಾವಂತ ಮಕ್ಕಳ ಶಿಕ್ಷಣಕ್ಕೆ ಪ್ರೋತ್ಸಾಹ ನೀಡುವುದು. ಇವೆಲ್ಲ ಸಂಘಟನೆ ಮೂಲಕ ಸಾಧ್ಯ. ಸಮಾಜದ ಜನರ ಸೇವೆ ಮಾಡುವುದರೊಂದಿಗೆ ನಂಬಿಕೆಗಳನ್ನು ಉಳಿಸಿಕೊಳ್ಳಬೇಕು. ಅಂದಾಗ ಮಾತ್ರ ಸಂಘಟನೆಗಳ ಉದ್ದೇಶ ಜೀವಂತಿಕೆ ಸಾರ್ಥಕವಾಗುತ್ತದೆ ಎಂದರು. ಕಾರ್ಯಕ್ರಮ ಉದ್ಘಾಟಿಸಿದ ಜಿಲ್ಲಾ ನಗರಾಭಿವೃದ್ಧಿ ಯೋಜನಾ ಕೋಶದ ಅಮರೇಶ, ದೃಷ್ಟಿ ಫೌಂಡೇಶನ್ನ ಉಪಾಧ್ಯಕ್ಷ ಮಂಜುನಾಥ ಮುಟಗಾರ ಮಾತನಾಡಿದರು. ನಗರಸಭೆ ಸದಸ್ಯೆ ಪನ್ನಾಬಾಯಿ ಬಾಗಡೆ ಅಧ್ಯಕ್ಷತೆ ವಹಿಸಿದ್ದರು. ಸುಖಿ ಫೌಂಡೇಶನ್ ಕಾರ್ಯದರ್ಶಿ ಮಹೇಶ ಪಟ್ಟಣಶೆಟ್ಟರ್ ಇದ್ದರು. ರೂಪಾ ಮುಟಗಾರ, ಸಂಘಡಿಗರು ಪ್ರಾರ್ಥಿಸಿದರು. ಕನಕರಾಯ ನಿರೂಪಿಸಿದರು. ರಾಧಾ ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

