ಗದಗ

ಸಂಕನೂರ ಗುರು ದ್ರೋಹಿ: ಸಹಜಾನಂದ

Published On :

ಗದಗ: 15 ವರ್ಷಗಳಿಂದ ಬಸವರಾಜ ಹೊರಟ್ಟಿ ಜತೆಗೆ ಇದ್ದು ಅವರಿಂದ ಸಾಕಷ್ಟು ಉಪಯೋಗ ಪಡೆದು ಈಗ ಅವರ ಮಗನ ವಿರುದ್ದ ಚುನಾವಣೆಗೆ ಸ್ಪರ್ಧಿಸಿರುವ ಎಸ್.ವಿ. ಸಂಕನೂರ ಒಬ್ಬ ಗುರು ದ್ರೋಹಿ, ವಿಶ್ವಾಸದ್ರೋಹಿಯಾಗಿದ್ದು, ಸಂಕನೂರರಿಗೆ ಪಶ್ಚಿಮ ಪದವೀಧರ ಚುನಾವಣೆಯಲ್ಲಿ ಸೋಲು ಕಟ್ಟಿಟ್ಟ ಬುತ್ತಿ ಎಂದು ಕರ್ನಾಟಕ ಮಾಧ್ಯಮಿಕ ಶಾಲಾ ನೌಕರರ ಸಂಘದ ರಾಜ್ಯ ಘಟಕದ ಉಪಾಧ್ಯಕ್ಷ ಷಹಜಾನಂದ ದಂಧರಗಿ ಹೇಳಿದರು. ಬುಧವಾರ ನಗರದಲ್ಲಿ ವಸಂತ ಹೊರಟ್ಟಿ ಚುನಾವಣಾ ಪ್ರಚಾರದ ಕಾರ್ಯಾಲಯದಲ್ಲಿ ಚುನಾವಣಾ ವೀಕ್ಷಕರಾಗಿ ತಮ್ಮ ತಂಡದೊಂದಿಗೆ ಆಗಮಿಸಿ ಮಾತನಾಡಿದರು. ಸಂಕನೂರ ಈ ಹಿಂದೆ ಸಿಂಡಿಕೇಟ್, ಸಿನೇಟ್ ಸದಸ್ಯರಾಗಿ ಮೆರೆದಿದ್ದು, ಯಾರ ಕೃಪೆಯಿಂದ, ವಿಜ್ಞಾನ ಪರಿಷತ್‌ನ ರಾಜ್ಯ ಘಟಕದ ಉಪಾಧ್ಯಕ್ಷನಾಗಿದ್ದು, ಗದಗ ಜಿಲ್ಲಾ ನೌಕರರ ಸಂಘದ ಅಧ್ಯಕ್ಷನಾಗಿದ್ದು ಯಾರ ಆಶೀರ್ವಾದದಿಂದ ಎಂಬುದು ಬಹುತೇಕ ಮರೆತಂತಿದೆ. ಈ ವ್ಯಕ್ತಿ ಪದವೀಧರರ ಕ್ಷೇತ್ರಕ್ಕೆ ಯೋಗ್ಯನೆ? ಎಂಬುದನ್ನು ಜೂ. 20ರಂದು ನಡೆವ ಚುನಾವಣೆಯಲ್ಲಿ ಮತದಾರರು ನಿರ್ಧರಿಸಲಿದ್ದಾರೆ ಎಂದರು. ಪ್ರಾ. ವೆಂಕಟೇಶ ಕಟ್ಟಿಮನಿ, ಡಾ. ಬಸವರಾಜ ಧಾರವಾಡ, ಎಸ್.ಎಸ್. ಅಂಗಡಿ ಇತರರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.