ಗದಗ

ಜಾತ್ರೆ ಸಾಮಾಜಿಕ, ವೈಚಾರಿಕ ಪ್ರಜ್ಞೆ ಮೂಡಿಸಲಿ

Published On :

ಗದಗ: ಜಾತ್ರೆಗಳು ಜನತೆಯಲ್ಲಿ ಸಾಮಾಜಿಕ ಮತ್ತು ವೈಚಾರಿಕ ಪ್ರಜ್ಞೆ ಮೂಡಿಸಬೇಕು. ಈ ನಿಟ್ಟಿನಲ್ಲಿ ಗದುಗಿನ ಗಂಗಾಪುರಪೇಟೆ ಜಾತ್ರೆ ಮಾದರಿ ಜಾತ್ರೆಯಾಗಿದೆ. ಸಾಮಾಜಿಕ, ವೈಚಾರಿಕ ಮತ್ತು ಸಾಂಸ್ಕೃತಿಕ ಪ್ರಜ್ಞೆ ವೃದ್ಧಿಸುವಲ್ಲಿ ಯಶಸ್ವಿಯಾಗಿದೆ ಎಂದು ಗದಗ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಅಭಿಪ್ರಾಯ ಪಟ್ಟರು.
ಗುರುವಾರ ರಾತ್ರಿ ಗದಗ ಗಂಗಾಪುರಪೇಟೆಯ ದುರ್ಗಾದೇವಿ ಜಾತ್ರಾ ಮಹೋತ್ಸವ ನಮ್ಮೂರ ದೇವಿಯ ಜಾತ್ರೆ ಕಾರ್ಯಕ್ರಮ ಮಾಲಿಕೆಯಲ್ಲಿ ಹಮ್ಮಿಕೊಂಡಿದ್ದ ಧರ್ಮ ಜಾಗೃತಿ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಪಾಲ್ಗೊಂಡು ಅವರು ಮಾತನಾಡಿದರು.
ಗಂಗಾಪುರಪೇಟೆ ಜಾತ್ರೆ ಎಂದರೆ ಎಲ್ಲ ಜಾತ್ರೆಗಳಂತೆ ಅಲ್ಲ ಮೂಢನಂಬಿಕೆ, ಕಂದಾಚಾರ, ಮೌಢ್ಯತೆ ದೂರೀಕರಿಸಿ ವೈಚಾರಿಕತೆ ಮೂಡಿಸುವ ಮೂಲಕ ಜನತೆಯಲ್ಲಿ ಜಾಗೃತಿ ಮೂಡಿಸುವ ರೀತಿಯಲ್ಲಿ ಕಾರ್ಯಕ್ರಮಗಳನ್ನು ವೈವಿಧ್ಯಮಯವಾಗಿ ರೂಪಿಸಲಾಗುತ್ತಿದೆ.
ಕಣ್ಮರೆಯಾಗುತ್ತಿರುವ ಜನಪದ ಪರಂಪರೆ ವಿಷಯವಾಗಿ ಉಪನ್ಯಾಸ ನೀಡಿದ ಶಿರಹಟ್ಟಿ ತಾಲೂಕು ಕಸಾಪ ಅಧ್ಯಕ್ಷ ಕೆ.ಎ. ಬಳಿಗೇರ ಅವರು ಇಂದಿನ ಆಧುನಿಕ ಭರಾಟೆಯಲ್ಲಿ ಜನಪದ ಸಾಹಿತ್ಯ ಕಣ್ಮರೆಯಾಗುತ್ತಿರುವುದು ವಿಷಾದದ ಸಂಗತಿ. ಆದಾಗ್ಯೂ ಗ್ರಾಮೀಣ ಪ್ರದೇಶದಲ್ಲಿ ಈ ಗ್ರಾಮೀಣ ಸೊಗಡಿನ ಜನಪದ ಕಲೆ ಉಳಿದಿದೆ. ಅದನ್ನು ವೃದ್ಧಿಸುವ ಕಾರ್ಯ ಇಂದು ಎಲ್ಲರಿಂದ ಆಗಬೇಕಿದೆ ಎಂದರು.
ಗದಗ-ಬೆಟಗೇರಿ ನಗರಸಭೆ ಉಪಾಧ್ಯಕ್ಷ ಕೃಷ್ಣಾ ಪರಾಪುರ, ಗದಗ ಶಹರ ಪೊಲೀಸ್ ಠಾಣೆ ಪಿಎಸ್‌ಐ ಕೃಷ್ಣವೇಣಿ ಗುರ್ಲಹೊಸೂರು ಮಾತನಾಡಿದರು. ಸಾನ್ನಿಧ್ಯ ವಹಿಸಿದ್ದ ನರಗುಂದ ತಾಲೂಕಿನ ಭೈರನಹಟ್ಟಿಯ ದೊರೆಸ್ವಾಮಿ ವಿರಕ್ತಮಠದ ಶಾಂತಲಿಂಗ ಶ್ರೀಗಳು ಆಶೀರ್ವಚನ ನೀಡಿದರು. ಅಧ್ಯಕ್ಷತೆ ವಹಿಸಿದ್ದ ಜಾತ್ರಾ ಮಹೋತ್ಸವ ಸಮಿತಿ ಅಧ್ಯಕ್ಷ ವೀರಜಿಬಾಯಿ ಪಟೇಲ ಪ್ರಾಸ್ತಾವಿಕ ಮಾತನಾಡಿದರು. ಬಸವರಾಜ ಬೆಳದಡಿ, ಸಿದ್ದಣ್ಣ ಪಲ್ಲೇದ, ಎಸ್.ಎಸ್. ಚವ್ಹಾಣ, ಹನಮಂತಪ್ಪ ಕಕ್ಕೇರಿ, ವೆಂಕಪ್ಪ ರೆಡ್ಡಿ, ಮೋಹನ ಇಮ್ರಾಪುರ, ಆನಂದ ಬೆಳದಡಿ, ಹನಮಂತಪ್ಪ ಮುಂಡರಗಿ, ಶ್ರೀನಿವಾಸ ವಲ್ಲೂರ, ಬಸವರಾಜ ಇಕ್ಕಲಗುತ್ತಿ, ಷಣ್ಮುಖಪ್ಪ ತೋಟದ, ರವಿ ಮಾನೇದ, ಮಹಾದೇವಪ್ಪ ಜಡಿ, ಬಸಪ್ಪ ಮುದಕಟ್ಟಿ, ರಾಜು ಬುರಬುರೆ, ಎಂ.ಎಸ್. ಪಾಟೀಲ, ಎಫ್.ಎಂ. ಮುದೇಗೊಣ್ಣವರ, ಕೃಷ್ಣಾ ಕೋಪರ್ಡೆ, ನಾರಾಯಣ ಬದಿ, ಬಸಪ್ಪ ಶಿರೂರ, ನಾಗರಾಜ ಕಲಾಲ, ಬಸವರಾಜ ಅಣ್ಣಿಗೇರಿ, ಜಗದೀಶ ಕಣವಿ, ಯಮನಪ್ಪ ಗೊಂದಿ, ವಸಂತ ಸಿದ್ದಮ್ಮನಹಳ್ಳಿ, ಹುಲಿಗೆಪ್ಪ ಜಡಿ, ಶೇಖಪ್ಪ ಹುಳ್ಳಿ, ಪಾಂಡುಸಾ ಇರಕಲ್, ಬಿ.ಎ. ಕಮಾನಗಾರ, ರಮೇಶ ತೋಟದ, ದೇವಪ್ಪ ಮುದಕಟ್ಟಿ, ಪ್ರಕಾಶ ಬೆಟಗೇರಿ, ಜೆ.ಬಿ. ಉಮಚಗಿ ಇದ್ದರು.
ಗುರುನಾಥ ಸುತಾರ, ಸಂಗಡಿಗರಿಂದ ಸಂಗೀತ ಜರುಗಿತು. ಜಾತ್ರಾ ಸಮಿತಿ ಕಾರ್ಯದರ್ಶಿ ಶೇಖಣ್ಣ ಕವಳಿಕಾಯಿ ನಿರೂಪಿಸಿ, ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.