ಗದಗ

ಪಶ್ಚಿಮ ಪದವೀಧರ ಚುನಾವಣೆ: ಗದಗ ಜಿಲ್ಲೆಯಲ್ಲಿ ಶೇ. 62.77 ಮತದಾನ

Published On :

ಗದಗ: ಪಶ್ಚಿಮ ಪದವೀಧರ ಕ್ಷೇತ್ರಕ್ಕೆ ಶುಕ್ರವಾರ ನಡೆದ ಚುನಾವಣೆಯಲ್ಲಿ ಜಿಲ್ಲೆಯ 5 ತಾಲೂಕುಗಳ ವ್ಯಾಪ್ತಿಯಲ್ಲಿ ಒಟ್ಟು ಶೇ. 62.77ರಷ್ಟು ಮತದಾನವಾದ ಬಗ್ಗೆ ವರದಿಯಾಗಿದೆ. ಜಿಲ್ಲೆಯಲ್ಲಿ 26 ಮತಗಟ್ಟೆಗಳಲ್ಲಿ ನೋಂದಾಯಿತ ಪದವೀಧರ ಮತದಾರರು ಶಾಂತಿಯುತ ಮತದಾನ ಮಾಡಿದರು. ಜಿಲ್ಲೆಯಲ್ಲಿ 4027 ಮಹಿಳೆಯರು ಸೇರಿ ಒಟ್ಟು 17,271 ನೋಂದಾಯಿತ ಪದವೀಧರ ಮತದಾರರಿದ್ದು, ಅವರಲ್ಲಿ 10,841 (ಶೇ 62.77) ಪದವೀಧರರು ಮತ ಚಲಾಯಿಸಿದ್ದಾರೆ. ಗದಗ ತಾಲೂಕಿನ 13 ಮತದಾನ ಕೇಂದ್ರಗಳಲ್ಲಿ 2,445 ಮಹಿಳೆಯರು ಸೇರಿ ಒಟ್ಟು 8,731 ನೋಂದಾಯಿತ ಮತದಾರರಿದ್ದು, ಅವರಲ್ಲಿ 5,291 ಮತದಾರರು (ಶೇ 60.60) ಹಕ್ಕು ಚಲಾಯಿಸಿದರು. ಮುಂಡರಗಿ 2 ಮತಗಟ್ಟೆಗಳಲ್ಲಿ 276 ಮಹಿಳೆಯರು ಸೇರಿ ಒಟ್ಟು 1,365 ಮತದಾರರಿದ್ದು, ಅವರಲ್ಲಿ 883 (ಶೇ. 64) ಪದವೀಧರರು ಮತ ಚಲಾಯಿಸಿದ್ದಾರೆ. ನರಗುಂದ ತಾಲೂಕಿನ 2 ಮತಗಟ್ಟೆಗಳಲ್ಲಿ 241 ಮಹಿಳೆಯರು ಸೇರಿ 1,429 ಮತದಾರರಿದ್ದು, ಅವರಲ್ಲಿ 971 (ಶೇ. 67.94) ಜನ ಮತ ಚಲಾಯಿಸಿದ್ದಾರೆ. ರೋಣ ತಾಲೂಕಿನ 5 ಮತಗಟ್ಟೆಗಳಲ್ಲಿನ 578 ಮಹಿಳಾ ಮತದಾರರು ಸೇರಿ ಒಟ್ಟು 3,279 ಮತದಾರರರಿದ್ದು, ಅವರಲ್ಲಿ 2,188 (ಶೇ. 66.72) ಮತ ಚಲಾಯಿಸಿದ್ದಾರೆ. ಶಿರಹಟ್ಟಿ 4 ಮತಗಟ್ಟೆಗಳಲ್ಲಿ 486 ಮಹಿಳೆಯರು ಸೇರಿ ಒಟ್ಟು 2,467 ಮತದಾರರಿದ್ದು, ಅವರಲ್ಲಿ 1,508 (ಶೇ 61.12) ಪದವೀಧರರು ಮತ ಚಲಾಯಿಸಿದ್ದಾರೆ. ಅತಿ ಹೆಚ್ಚು ಮತದಾನ ರೋಣ ತಾಲೂಕಿನ ಬೆಳವಣಕಿ ಮತಗಟ್ಟೆ 48ರಲ್ಲಿ ಆಗಿದ್ದು, 221 ಮತದಾರರಲ್ಲಿ 174 (ಶೇ 78.73) ಪದವೀಧರರು ಮತ ಚಲಾಯಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.