ಮಕ್ಕಳ ಹಕ್ಕು ಜಾರಿ ಕಡ್ಡಾಯವಾಗಲಿ
ಕನ್ನಡಪ್ರಭ ವಾರ್ತೆ, ಗದಗ, ಜೂ. 22
ಜಗತ್ತಿನಲ್ಲಿರುವ ಎಲ್ಲ ಮಕ್ಕಳು ಸಂತೋಷದಿಂದ, ಯಾವುದೇ ತಾರತಮ್ಯವಿಲ್ಲದೇ ಬದುಕಲು ಎಲ್ಲ ದೇಶಗಳು ವಿಶ್ವಸಂಸ್ಥೆ ಘೋಷಿಸಿದ ಎಲ್ಲ ಹಕ್ಕುಗಳನ್ನು ಕಡ್ಡಾಯವಾಗಿ ಜಾರಿಗೊಳಿಸಬೇಕೆಂದು ಮೇವುಂಡಿ ಸರ್ಕಾರಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಹಾಗೂ ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ಶರಣು ಗೋಗೇರಿ ಅಭಿಪ್ರಾಯಪಟ್ಟರು.
ಅವರು ಶನಿವಾರ ಜಿಲ್ಲಾ ಕಸಾಪ ವತಿಯಿಂದ ತಾಪಂ ಆವರಣದಲ್ಲಿ ಹಮ್ಮಿಕೊಂಡಿದ್ದ ಸಾಹಿತ್ಯ ಸಂಜೆ ಕಾರ್ಯಕ್ರಮದಲ್ಲಿ ವಿಶ್ವ ಮಕ್ಕಳ ಹಕ್ಕುಗಳ ದಿನಾಚರಣೆ ನಿಮಿತ್ತ ಮಕ್ಕಳ ಹಕ್ಕುಗಳು ಮತ್ತು ಮಾನವೀಯ ಮೌಲ್ಯಗಳ ವಿಷಯ ಕುರಿತು ಉಪನ್ಯಾಸ ನೀಡಿದರು. ಜಗತ್ತಿನ ಹಲವಾರು ದೇಶಗಳಲ್ಲಿ 18 ವರ್ಷದೊಳಗಿನ ಮಕ್ಕಳ ಮೇಲೆ ದಬ್ಬಾಳಿಕೆ, ದೌರ್ಜನ್ಯ, ಶೋಷಣೆ, ತಾರತಮ್ಯ ನಡೆಯುತ್ತಿರುವುದನ್ನು ಅವಲೋಕಿಸಿ 1989ರಲ್ಲಿ ವಿಶ್ವ ಮಕ್ಕಳ ಹಕ್ಕುಗಳನ್ನು ಘೋಷಿಸಲಾಯಿತು.
ವಿಶ್ವಸಂಸ್ಥೆಯ ಸಲಹೆ ಮೇರೆಗೆ ಭಾರತ 1992 ಡಿಸೆಂಬರ್ 11ರಂದು ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ರಚಿಸಿ ಜತೆಗೆ 54 ಪರಿಚ್ಛೇದಗಳನ್ನು ಜಾರಿಗೆ ತಂದಿದೆ. ನಾಗರಿಕ ಸಮಾಜ ಮಕ್ಕಳ ಹಕ್ಕುಗಳ ರಕ್ಷಣೆಯಲ್ಲಿ ಸಂವೇದನಾಶೀಲತೆ, ನೈತಿಕತೆ ಹಾಗೂ ಮಾನವೀಯವಾಗಿ ನಡೆದುಕೊಳ್ಳಬೇಕಾಗಿದೆ. ರಾಜ್ಯ ಸರ್ಕಾರ 2005 ರಲ್ಲಿ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಜಾರಿಗೆ ತಂದಿದ್ದು, ಮಕ್ಕಳ ಸರ್ವತೋಮುಖ ಅಭಿವೃದ್ಧಿಗೆ ಪೂರಕವಾಗಿ ಕಾರ್ಯನಿರ್ವಹಿಸುತ್ತಿದೆ. ಮಕ್ಕಳ ಅಪೌಷ್ಟಿಕತೆ ನಿವಾರಣೆಗಾಗಿ ಶಾಲೆಗಳಲ್ಲಿ ಅಕ್ಷರ ದಾಸೋಹ, ಕ್ಷೀರಭಾಗ್ಯ, ಅಂಗನವಾಡಿಗಳಲ್ಲಿ ಪೌಷ್ಟಿಕ ಆಹಾರವನ್ನು ನೀಡುತ್ತಿರುವುದು ಅಭಿನಂದನಾರ್ಹ ಕೆಲಸ ಎಂದರು.
ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕಸಾಪ ಅಧ್ಯಕ್ಷ ಡಾ. ಶಿವಪ್ಪ ಕುರಿ ಮಾತನಾಡಿದರು. ಕೆ.ಎಚ್. ಬೇಲೂರ, ರತ್ನಕ್ಕ ಪಾಟೀಲ, ಡಾ. ಗಣೇಶ ಸುಲ್ತಾನಪುರ, ಹೇಮಂತ ದಳವಾಯಿ, ಕ.ವಿ. ಕುಂದಗೋಳ, ಜಿ.ಎಸ್. ಯತ್ನಟ್ಟಿ, ಕಿಶೋರಬಾಬು ನಾಗರಕಟ್ಟಿ, ಶಶಿಕಾಂತ ಕೊರ್ಲಹಳ್ಳಿ, ಕೆ.ಕೆ. ಹೂಗಾರ, ಸಿ.ಕೆ. ಕೇಸರಿ, ರಾಜು ಸಪ್ಪಡ್ಲ, ಡಾ. ಸುಜಾತಾ ಬರದೂರ, ಎಸ್.ಎಸ್. ತಳ್ಳಿಹಾಳ, ಅ.ದ. ಕಟ್ಟಿಮನಿ, ಎಸ್.ಎಚ್. ಹೊಸಮನಿ, ಬಸವರಾಜ ವಾರಿ, ಜೆ.ಎಚ್. ಕಿಲ್ಲೇದಾರ, ಎಂ.ಎಂ. ಕುಲಕರ್ಣಿ, ವಿ.ಬಿ. ಪಠಾಣಿ, ಎಸ್.ಬಿ. ಕಣಗಿನಹಾಳ, ಎಸ್.ಎಸ್. ನರೇಗಲ್ಲ, ವೀರೇಶ ಭೂತಾನವರ, ನಿಂಗನಗೌಡ ಹಿರೇಸಕ್ಕರಗೌಡ, ಶಂಕ್ರಪ್ಪ ತೊಂಡಿಹಾಳ ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

