ಸಿಬ್ಬಂದಿ ಕಡಿತ ಕೈಬಿಡಿ: ಮನವಿ
ಗದಗ: ಕೃಷಿ, ಜಲಾನಯನ ವಿಭಾಗಗಳ ಒಗ್ಗೂಡಿಸುವ ಪ್ರಕ್ರಿಯೆಯಲ್ಲಿ ರಾಜ್ಯಾದ್ಯಂತ 4200 ಹುದ್ದೆ ಕಡಿತಕ್ಕೆ ಮುಂದಾದ ಕೃಷಿ ಇಲಾಖೆ ಕ್ರಮ ಖಂಡಿಸಿ ಜಿಲ್ಲಾ ಸರ್ಕಾರಿ ನೌಕರರ ಸಂಘ, ರಾಜ್ಯ ಕೃಷಿ ಇಲಾಖೆ ಹಲವು ಸಂಘಟನೆಗಳು, ರಾಜ್ಯ ಕೃಷಿ ಪದವೀಧರ ಅಧಿಕಾರಿಗಳ ಸಂಘ ಜಂಟಿಯಾಗಿ ಮಂಗಳವಾರ ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೃಷಿ ಸಚಿವರಿಗೆ ಮನವಿ ನೀಡಿದವು.
ಕೃಷಿ ಇಲಾಖೆಯು ರಾಜ್ಯ, ಕೇಂದ್ರ ಸರ್ಕಾರಗಳ ಕೃಷಿ ವಿಸ್ತರಣೆ ಕಾರ್ಯಕ್ರಮಗಳೊಂದಿಗೆ ಗುಣಮಟ್ಟದ ಪರಿಕರ ವಿತರಣೆ, ಸುಧಾರಿತ ಯಂತ್ರೋಪಕರಣಗಳ ಒದಗಿಸುವಿಕೆ, ಜಲಾನಯನ ನಿರ್ವಹಣೆ ಸೇರಿದಂತೆ 50 ಯೋಜನೆಗಳ ಅನುಷ್ಠಾನ ಜವಾಬ್ದಾರಿ ನಿರ್ವಹಿಸುತ್ತಿರುವ ಇಲಾಖೆ ಸಿಬ್ಬಂದಿ ಕೊರತೆ ಎದುರಿಸುತ್ತದೆ. ಇಲಾಖೆಗೆ 11870 ಹುದ್ದೆಗಳ ಮಂಜುರಾತಿ ಇದ್ದರೂ 6300 ಹುದ್ದೆ ಮಾತ್ರ ಭರ್ತಿಯಾಗಿವೆ. 5500 ಹುದ್ದೆಗಳು ಖಾಲಿಯಿವೆ. ಇಂಥ ಸ್ಥಿತಿಯಲ್ಲಿ ಅವುಗಳನ್ನು ಭರ್ತಿ ಮಾಡದೆ 4200 ಹುದ್ದೆಗಳನ್ನು ಕಡಿತಕ್ಕಾಗಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದು ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿವೆ. ಜಂಟಿ ಕೃಷಿ ನಿರ್ದೇಶಕ ಸಿ.ಬಿ. ಬಾಲರೆಡ್ಡಿ, ಜಲಾಯನ ಅಧಿಕಾರಿ ಶಿವನಗೌಡ ಪಾಟೀಲ, ಅಧಿಕಾರಿಗಳಾದ ಸದಾಶಿವ ಬಾಪುರೆ, ಗಂಗಾದೇವಿ ಪಾಟೀಲ, ಹೇಮಲತಾ ಪಾಟೀಲ, ಕಸ್ತೂರಿ ಪಾಟೀಲ, ಆರ್.ಎ. ಅಣ್ಣಿಗೇರಿ, ಎಸ್.ಎಸ್. ಪಟ್ಟಣಶೆಟ್ಟಿ, ಎಸ್.ಆರ್. ಸಂಕನಗೌಡರ, ಪ್ರಹ್ಲಾದ, ಎಸ್.ಬಿ. ಪಾಟೀಲ, ಎಸ್.ಎಚ್. ಪಾಟೀಲ, ಎಸ್.ವಿ. ನೆಗಳೂರ, ಎಸ್.ಎಲ್. ಪೂಜಾರಿ, ವಿ.ವಿ. ಮೇಗೇರಿ, ಬಿ.ಎಸ್. ಜೋಗಿ, ವೈ.ಕೆ. ಬಂಗಾರಿ, ಎಸ್.ಎಸ್. ಜಾಲವಾಡಗಿ, ಪಿ.ಎಸ್. ಚೋಳಿನ, ವೈ.ಬಿ. ಗೋರುಜಿ, ಬಿ.ಎಸ್. ಕಮತರ, ಎಸ್.ವಿ. ಇಲಕಲ್, ಎಂ.ಎಸ್. ಪಾಟೀಲ ಮುನ್ನೂರಕ್ಕೂ ಹೆಚ್ಚು ಜನರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

