ಲೋಕಾಯುಕ್ತರಿಂದ ಅಹವಾಲು ಸ್ವೀಕಾರ
ನರಗುಂದ: ಪಟ್ಟಣದ ಹಳೇ ತಹಸೀಲ್ದಾರ್ ಕಾರ್ಯಾಲಯದಲ್ಲಿ ಗುರುವಾರ ಗದಗ ಲೋಕಾಯುಕ್ತ ಕಚೇರಿಯ ಎಎಸ್ಐ ಎನ್.ಎಂ. ಚೂರಿ ಅವರು ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿದರು. ಈ ಸಂದರ್ಭದಲ್ಲಿ ವಾಸನ ಗ್ರಾಮದ ಮಂಜುನಾಥಗೌಡ ತುಳಸಿಗೇರಿ, ತಮ್ಮ ಜಮೀನದಲ್ಲಿ ಏತ ನೀರಾವರಿ ಪೈಪ್ಲೈನ್ ಹಾಕಿದ್ದು ನಮಗೆ ಯಾವುದೇ ನೋಟಿಸ್ ನೀಡದೇ ಕಾಮಗಾರಿ ಮಾಡಿರುವ ಕುರಿತು ದೂರು ಸಲ್ಲಿಸಿದರು. ಕೊಣ್ಣೂರ ಗ್ರಾಮದ ಶಂಕ್ರಪ್ಪ ಪಟ್ಟಣಶಟ್ಟಿ, ನರಗುಂದದ ಮಹಾದೇವಪ್ಪ ಸುರೇಬಾನವರು ತಮ್ಮ ಜಮೀನುಗಳ ಸರ್ವೇ ಮಾಡಲು ಅರ್ಜಿ ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಮನವಿಯಲ್ಲಿ ಆಗ್ರಹಿಸಿದರು. ಲೋಕಾಯುಕ್ತ ಸಿಬ್ಬಂದಿ ಗೀತಾ ಬಿರಸಲ್, ಆನಂದ ಬನಪ್ಪನವರ, ಶಿರಸ್ತೇದಾರ ಪಿ.ಎಸ್. ಉಳ್ಳಾಗಡ್ಡಿ ಇದ್ದರು.
ಮೇಲ್ವಿಚಾರಕನಿಂದ ಕಿರುಕುಳ: ವಸತಿ ನಿಲಯ ವಿದ್ಯಾರ್ಥಿಗಳ ಪ್ರತಿಭಟನೆ
ಗಜೇಂದ್ರಗಡ: ಸ್ಥಳೀಯ ವಾಣಿ ಪೇಟೆ ಬಳಿಯ ಬಿಸಿಎಂ ಹಾಸ್ಟೆಲ್ನಲ್ಲಿ ಮೇಲ್ವಿಚಾರಕ ನಿತ್ಯ ಕುಡಿದು ಬಂದು ವಿದ್ಯಾರ್ಥಿಗಳಿಗೆ ಅವಾಚ್ಯ ಶಬ್ದಗಳಿಂದ ನಿಂದಿಸುವುದಲ್ಲದೆ, ಸರಿಯಾಗಿ ಊಟ, ಉಪಾಹಾರ ನೀಡುವುದಿಲ್ಲ. ಜೊತೆಗೆ ಕಿರುಕುಳ ನೀಡುತ್ತಿದ್ದಾರೆ ಎಂದು ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ ನೇತೃತ್ವದಲ್ಲಿ ವಿದ್ಯಾರ್ಥಿಗಳು ಶನಿವಾರ ಪ್ರತಿಭಟನೆ ನಡೆಸಿದರು.
50 ವಿದ್ಯಾರ್ಥಿಗಳಿರುವ ಈ ವಸತಿ ನಿಲಯದಲ್ಲಿ ಮಕ್ಕಳಿಗೆ ಸುಲಭ ಶೌಚಾಲಯ ಜೊತೆ ಮೂಲ ಸೌಲಭ್ಯಗಳ ಕೊರತೆ ಇದೆ. ಸರ್ಕಾರ ನೀಡಿರುವ ಅನುದಾನ ಸಮರ್ಪಕವಾಗಿ ಬಳಸುವಲ್ಲಿ ಹಾಸ್ಟೆಲ್ ಮೇಲ್ವಿಚಾರಕ ಆರ್.ಬಿ ಟೆಟಂಬಿ ವಿಫಲರಾಗಿದ್ದಾರೆ ಎಂದು ವಿದ್ಯಾರ್ಥಿಗಳು ತಿಳಿಸಿದರು. ವಿದ್ಯಾರ್ಥಿಗಳ ಪ್ರತಿಭಟನೆ ಕುರಿತು ನಿಲಯ ಮೇಲ್ವಿಚಾರಕ ಆರ್.ಬಿ. ಟೆಟಂಬಿಯವರನ್ನು ವಿಚಾರಿಸಿದಾಗ, ಸಮರ್ಪಕ ಉತ್ತರ ನೀಡದೆ ವಿಚಲಿತರಾದ ಅವರು ಸರ್, ಏನೋ ತಪ್ಪಾಗಿದೆ ಕ್ಷಮಿಸಿ ಎಂದು ಸಂಘಟಕರು ಹಾಗೂ ವಿದ್ಯಾರ್ಥಿಗಳಲ್ಲಿ ಮನವಿ ಮಾಡಿದರು. ಇದೇ ವೇಳೆ ಪ್ರತಿಭಟನೆ ವಿಷಯ ತಿಳಿದ ತಾಲೂಕು ವಿಸ್ತರಣಾಧಿಕಾರಿ ಎಸ್.ಎಸ್. ಇಟೇಕರ ಆಗಮಿಸಿ ವಿದ್ಯಾರ್ಥಿಗಳ ಅಳಲು ಆಲಿಸಿದರು. ಈ ಕ್ಷಣದಿಂದಲೇ ಮೇಲ್ವಿಚಾರಕನನ್ನು ಬೇರೆಡೆ ವರ್ಗಾಯಿಸಿ ಸಿ.ಬಿ. ಕಲಕೇರಿಯವರನ್ನು ನೇಮಿಸಿದರು. ಈ ವೇಳೆ ತಾಲೂಕು ವಿಸ್ತರಣಾಧಿಕಾರಿ ಎಸ್.ಎಸ್. ಇಟೇಕರ ಸುದ್ದಿಗಾರರೊಂದಿಗೆ ಮಾತನಾಡಿ, ಮೇಲ್ವಿಚಾರಕ ಆರ್.ಬಿ. ಟೆಟಂಬಿ ಬಗೆಗೆ ಹಲವಾರು ದೂರುಗಳು ಬಂದಿದ್ದವು. ಈ ಹಿನ್ನೆಲೆಯಲ್ಲಿ ಅವರನ್ನು ಬೇರೆಡೆ ವರ್ಗಾಯಿಸಲಾಗಿದೆ. ಜತೆಗೆ ವಿದ್ಯಾರ್ಥಿಗಳಿಗೆ ಮೂಲ ಸೌಲಭ್ಯ ನೀಡಲಾಗುವುದು ಎಂದು ನೀಡಿದ ಭರವಸೆ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಪ್ರತಿಭಟನೆ ಹಿಂಪಡೆದರು. ಕರವೇಯ ತಾಲೂಕಾಧ್ಯಕ್ಷ ನಿಂಗಪ್ಪ ಹೊನ್ನಾಪುರ, ಉಪಾಧ್ಯಕ್ಷ ಮುರ್ತುಜಾ ಒಂಟಿ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

