ಗದಗ

ಕಾರ್ಮಿಕರ ಏಳ್ಗೆಗೆ ಚಿಂತನೆ ಅಗತ್ಯ: ಮಹಾವರಕರ

Published On :

ರೋಣ: ಅಪಾಯಕರ ಸ್ಥಳಗಳಲ್ಲಿ ದುಡಿಯುವ ಅಸಂಘಟಿತ ಕಾರ್ಮಿಕರಿಗೆ ಸರಿಯಾದ ರಕ್ಷಣೆ ಅಗತ್ಯವಿದ್ದು, ಆ ದಿಶೆಯಲ್ಲಿ ಚಿಂಥನ-ಮಂಥನ ಅತಿ ಅವಶ್ಯವಾಗಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರಾದ ಜಿ.ಡಿ. ಮಹಾವರಕರ ಹೇಳಿದರು.
ಅವರು ಶನಿವಾರ ಪಟ್ಟಣದ ನ್ಯಾಯಾಲಯದ ಆವರಣದಲ್ಲಿ ತಾಲೂಕು ಕಾನೂನು ಸೇವೆಗಳ ಸಮಿತಿ, ನ್ಯಾಯವಾದಿಗಳ ಸಂಘ, ಸಹಾಯಕ ಸರ್ಕಾರಿ ಅಭಿಯೋಜಕರ ಇಲಾಖೆ ಮತ್ತು ತಾಲೂಕು ಕಾರ್ಮಿಕ ಇಲಾಖೆ ಇವರು ಸಂಯುಕ್ತಾಶ್ರಯದಲ್ಲಿ ಜರುಗಿದ ಕಟ್ಟಡ ಕಾರ್ಮಿಕರಿಗಾಗಿ ಕಾನೂನು ಅರಿವು ಮತ್ತು ನೆರವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಉದ್ಯಮ, ಕೃಷಿ, ಸಾರಿಗೆ, ರೇಲ್ವೆ, ಫ್ಯಾಕ್ಟರಿ, ಕಟ್ಟಡ ನಿರ್ಮಾಣ, ರಸ್ತೆ, ಸೇತುವೆ ನಿರ್ಮಾಣ, ವಿಮಾನ ನಿಲ್ದಾಣ, ತೈಲ, ಅಣು ಸ್ಥಾವರ, ದೂರದರ್ಶನ, ಆಕಾಶವಾಣಿ, ವಿದ್ಯುತ್ ಉತ್ಪಾದನೆ, ಕಾಲುವೆಗಳು, ಜಲಾಶಯ, ಟವರ್ಸ್ ಸೇರಿದಂತೆ ಪ್ರತಿ ರಂಗದ ಅಭಿವೃದ್ಧಿಗೆ ಕಾರ್ಮಿಕ ಶ್ರಮ ಮತ್ತು ಪಾತ್ರ ಅತ್ಯಂತ ಪ್ರಮುಖವಾಗಿದೆ. ಜೀವದ ಹಂಗು ತೊರೆದು ಯಾವದೇ ರಕ್ಷಣೆಯಿಲ್ಲದ ಹಗಲಿರುಳು ದುಡಿಯುತ್ತಿರುವ ಕಾರ್ಮಿಕರ ಸ್ಥಿತಿ ಇಂದು ಶೋಚನೀಯವಾಗಿದೆ. ಕಾರ್ಮಿಕ ಹಿತ ರಕ್ಷಣೆಗಾಗಿ ರಚಿತವಾದ ಹಕ್ಕು ಮತ್ತು ಕರ್ತವ್ಯಗಳು ಕಾರ್ಮಿಕರಿಂದ ದೂರ ಉಳಿದಿವೆ. ಆದ್ದರಿಂದ ಸಂಬಂಧಪಟ್ಟ ಅಧಿಕಾರಿಗಳು ಅಸಂಘಟಿತ ಕಾರ್ಮಿಕರಿಗೆ ಸರ್ಕಾರದ ಸೌಲಭ್ಯಗಳ ಕುರಿತು ತಿಳಿವಳಿಕೆ ಮೂಡಿಸುವಲ್ಲಿ ಮುಂದಾಗಬೇಕು. ಅಲ್ಲದೆ ಕಾರ್ಮಿಕರು ತಮಗಿರುವ ಕಾನೂನುಗಳ ಬಗ್ಗೆ ತಿಳಿವಳಿಕೆ ಹೊಂದಬೇಕು ಎಂದರು.
ಕಾರ್ಮಿಕ ಇಲಾಖೆ ನಿರೀಕ್ಷಕ ಸಿದ್ದನಗೌಡ ಪಾಟೀಲ, ವಕೀಲರ ಸಂಘದ ಉಪಾಧ್ಯಕ್ಷ ಎಸ್.ಎನ್. ತಿಮ್ಮನಗೌಡ್ರ ಅಧ್ಯಕ್ಷತೆ ವಹಿಸಿದ್ದರು. ಕೌಟುಂಬಿಕ ದೌರ್ಜನ್ಯದಿಂದ ಮಹಿಳೆಯರ ಸಂರಕ್ಷಣೆ ಕಾಯ್ದೆ 2005 ಕುರಿತು ನ್ಯಾಯವಾದಿ ಬಿ.ಎಸ್. ಕುಲಕರ್ಣಿ ಉಪನ್ಯಾಸ ನೀಡಿದರು. ಕಿರಿಯ ಸಿವಿಲ್ ನ್ಯಾಯಾಧೀಶ ನಂಜೇಗೌಡ ಎಂ.ಸಿ., ನಾರಾಯಣ ಆರಿ, ಎಫ್.ಎಚ್. ಕಾಡದೇವರಮಠ, ರಾಜೇಂದ್ರ ಉದ್ದಾರ, ವಿರೂಪಾಕ್ಷ ಬಡಿಗೇರ, ವಿಷ್ಣು ಕಮ್ಮಾರ, ಕಾಶಿಂಸಾಬ್ ಮುಗಳಿ, ಹುಸೇನಸಾಬ್ ಚೋಪದಾರ, ಪ್ರಭುಗೌಡ ಕಲ್ಲನಗೌಡ್ರ, ಎಂ.ಎಸ್. ಮುತ್ಯಾಳ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.