ದಲಿತ ಯುವ ಸೇನಾ ಅಧ್ಯಕ್ಷ ವಿಜಯ ಮುಳಗುಂದ ಹೇಳಿಕೆ
ಗದಗ: ಗೌತಮ ಬುದ್ಧ ಸೇವಾ ಸಮಿತಿ ಹಾಗೂ ದಲಿತ ಯುವ ಸೇನಾ ಸಮಿತಿ ಗದಗ ಇವರ ಸಂಯುಕ್ತ ಆಶ್ರಯದಲ್ಲಿ ಮಾ. 8 ಹಾಗೂ 9ರಂದು ರಾಜಿವ್ ಗಾಂಧಿ ನಗರದಲ್ಲಿ ಲಿಂಗೇಶವಾಣಿ ಕನ್ನಡ ಪಾಕ್ಷಿಕ ಪತ್ರಿಕೆ 3ನೇ ವರ್ಷದ ವಾರ್ಷಿಕೋತ್ಸವದ ಅಂಗವಾಗಿ ಜ. ತೋಂಟದ ಡಾ. ಸಿದ್ಧಲಿಂಗ ಶ್ರೀಗಳ ಹೆಸರಿನಲ್ಲಿ ಡಾ. ಸಿದ್ಧಲಿಂಗಶ್ರೀ ಟ್ರೋಫಿ 2014 ರಾಜ್ಯ ಮಟ್ಟದ ಕಬಡ್ಡಿ ಪಂದ್ಯಾವಳಿ ಹಾಗೂ ಸನ್ಮಾನ ಸಮಾರಂಭ ಮತ್ತು ಸಾಂಸ್ಕೃತಿಕ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ದಲಿತ ಯುವ ಸೇನಾ ಅಧ್ಯಕ್ಷ ವಿಜಯ ಮುಳಗುಂದ ಹೇಳಿದರು.
ಈಚೆಗೆ ನಗರದಲ್ಲಿ ಹಮ್ಮಿಕೊಳ್ಳಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾತನಾಡಿದರು. ರಾಜ್ಯದಲ್ಲಿ ಕಬಡ್ಡಿ ಕ್ರೀಡೆ ನಶಿಸುತ್ತಿರುವುದರಿಂದ ಅದರ ಉತ್ತೇಜನಕ್ಕೆ ನಮ್ಮ ಸಮಿತಿ ಡಾ. ಸಿದ್ಧಲಿಂಗ ಶ್ರೀಗಳ ಹೆಸರಿನಲ್ಲಿ ಕ್ರೀಡೆಯನ್ನು ಆಯೋಜಿಸಲಾಗಿದೆ. ಇದಕ್ಕೆ ಸಾರ್ವಜನಿಕರ ಪ್ರೋತ್ಸಾಹ ಅವಶ್ಯವಾಗಿದ್ದು, ಗ್ರಾಮೀಣ ಸೊಗಡಿನ ಕ್ರೀಡೆಗಳನ್ನು ಉಳಿಸಿ ಬೆಳೆಸಲು ನಮ್ಮ ಸಂಘಟನೆ ಮುಂಚೂಣಿಯಲ್ಲಿದೆ. ಆದ್ದರಿಂದ ರಾಜ್ಯಮಟ್ಟದ ಕಬಡ್ಡಿ ಪಂದ್ಯಾವಳಿಯನ್ನು ಅದ್ಧೂರಿಯಾಗಿ ನಡೆಸಲು ತೀರ್ಮಾನಿಸಲಾಗಿದೆ. ಟೂರ್ನಿಯಲ್ಲಿ ರಾಜ್ಯದ ಬಲಿಷ್ಠ 30ಕ್ಕೂ ಹೆಚ್ಚು ತಂಡಗಳು ಭಾಗವಹಿಸುವ ಸಂಭವವಿದೆ.
ಗೌತಮ ಬುದ್ಧ ಸೇವಾ ಸಮಿತಿ ಅಧ್ಯಕ್ಷ ದೇವಪ್ಪ ಲಿಂಗದಾಳ ಮಾತನಾಡಿ, ರಾಜ್ಯ ಮಟ್ಟದ ಕಬಡ್ಡಿ ಪಂದ್ಯಾವಳಿಯಲ್ಲಿ ಪ್ರಥಮ ಬಹುಮಾನ ರು. 10001 ಹಾಗೂ ಟ್ರೋಫಿ, ದ್ವಿತೀಯ ಬಹುಮಾನ ರು. 7001, ಟ್ರೋಫಿ ಮತ್ತು ತೃತೀಯ ಬಹುಮಾನ ರು. 5001 ಹಾಗೂ ಟ್ರೋಫಿ ಉತ್ತಮ ತಂಡಕ್ಕೆ ರು. 3001 ಬಹುಮಾನ ನೀಡಲಾಗುವುದು ಮತ್ತು ತಂಡದ ಆಟಗಾರರಿಗೆ ಊಟ ವಸತಿ ಇರುತ್ತದೆ. ಫೆ. 8ರಂದು ಬೆಳಗ್ಗೆ 10.15ಕ್ಕೆ ಪಂದ್ಯದ ಉದ್ಘಾಟನೆ ನೆರವೇರಲಿದ್ದು, ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರು, ಗದಗ-ಬೆಟಗೇರಿ ಅವಳಿ ನಗರ ಗಣ್ಯವ್ಯಕ್ತಿಗಳು, ಅಧಿಕಾರಿಗಳು ಭಾಗವಹಿಸುತ್ತಾರೆ ಎಂದರು.
ಸುದ್ದಿಗೋಷ್ಠಿಯಲ್ಲಿ ಗೌತಮ ಬುದ್ಧ ಸೇವಾ ಸಮಿತಿ ಕಾರ್ಯದರ್ಶಿ ಬಸವರಾಜ ಈರಣ್ಣವರ, ಬಸವರಾಜ ಬದಾಮಿ, ಭೀಮಪ್ಪ ದೊಡ್ಡಮನಿ, ಸಂಜೀವ ಗಂಗಾವತಿ, ಸಿದ್ದು ಗೌಡರ, ಟಿಪ್ಪುಸಾಬ ನದಾಫ್, ಅಶೋಕ ನರಗುಂದ ಮುಂತಾದವರು ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

