ಭಾರತೀಯ ಪರಂಪರೆ ಪವಿತ್ರ, ಮಹತ್ವದ್ದು
ಕನ್ನಡಪ್ರಭ ವಾರ್ತೆ, ಲಕ್ಷ್ಮೇಶ್ವರ, ಮಾ. 2
ಭಾರತೀಯರ ಧಾರ್ಮಿಕ ಹಾಗೂ ಸಂಸ್ಕೃತಿ ಪರಂಪರೆ ವಿಶಿಷ್ಟವಾಗಿದೆ. ಭಾರತವು ಧಾರ್ಮಿಕ ಸ್ಥಳಗಳ ತವರೂರಾಗಿದ್ದು, ಇಲ್ಲಿನ ಧಾರ್ಮಿಕ ಪರಂಪರೆಗೆ ವಿದೇಶಗಳ ಜನರು ಮಾರುಹೋಗಿದ್ದಾರೆ ಎಂದು ಮುಕ್ತಿಮಂದಿರದ ವಿಮಲ ರೇಣುಕ ವೀರಮುಕ್ತಿಮುನಿ ಶ್ರೀಗಳು ಹೇಳಿದರು.
ಅವರು ಭಾನುವಾರ ಪಟ್ಟಣದ ಬೇವಿನಮರದವರ ಓಣಿಯಲ್ಲಿ ಹಮ್ಮಿಕೊಂಡಿದ್ದ ಶಕ್ತಿಮಂದಿರ ದೇವಾಲಯ ಹಾಗೂ ಮಹಾದ್ವಾರದ ಲೋಕಾರ್ಪಣಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸಮಾಜದಲ್ಲಿ ಶಾಂತಿ, ಸಹಬಾಳ್ವೆ, ನೆಮ್ಮದಿಯ ವಾತಾವರಣ ಮೂಡಿಸುವಲ್ಲಿ ದೇವಾಲಯಗಳ ಪಾತ್ರ ದೊಡ್ಡದಾಗಿದೆ. ವಿದೇಶಗಳ ಜನರು ಭಾರತೀಯ ಧಾರ್ಮಿಕ ಸಂಸ್ಕೃತಿಗೆ ಮಾರುಹೋಗಿ ಹಿಂದೂ ಧರ್ಮದ ತತ್ವಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಜೀವನದ ಸಾರ್ಥಕತೆ ಕಂಡುಕೊಂಡಿದ್ದ ಉದಾಹರಣೆಗಳು ಸಾಕಷ್ಟಿವೆ. ಶಕ್ತಿಮಂದಿರದ ಪುನರುಜ್ಜೀವನ ಕಾರ್ಯವನ್ನು ಮಾಡುವ ಮೂಲಕ ಭಾರತೀಯ ಪರಂಪರೆ ಎತ್ತಿ ಹಿಡಿಯುವ ಕಾರ್ಯ ಸ್ತುತ್ಯಾರ್ಹವಾಗಿದೆ ಎಂದರು.
ಬಾಲೆಹೊಸೂರಿನ ಕುಮಾರ ದಿಂಗಾಲೇಶ್ವರ ಶ್ರೀಗಳು ಮಾತನಾಡಿ, ನಮ್ಮಲ್ಲಿನ ಬೇಡವಾದ ದುರ್ಗುಣಗಳಾದ ಕಾಮ, ಕ್ರೋಧ, ಮದ, ಮತ್ಸರ, ವೈರ, ಸ್ವಹಿತ, ಪರಪೀಡನೆ ಇವೇ ಮೊದಲಾದ ಗುಣಗಳನ್ನು ತೆಗೆದು ಹಾಕುವ ಮೂಲಕ ಮಾನವರು ದೇವತ್ವ ಸಾಧಿಸಬಹುದಾಗಿದೆ ಎಂದರು.
ಇದೇ ಸಂದರ್ಭದಲ್ಲಿ ಹೂವಿನಶಿಗ್ಲಿಯ ವಿರಕ್ತಮಠದ ಚನ್ನವೀರ ಶ್ರೀಗಳು ಹಾಗೂ ಗಂಜಿಗಟ್ಟಿ ಮಠದ ಚರಮೂರ್ತಿ ಶಿವಲಿಂಗ ಶ್ರೀಗಳು ಉಪಸ್ಥಿತರಿದ್ದು, ತಮ್ಮ ಉಪದೇಶಾಮೃತ ಸಂದೇಶ ನೀಡಿದರು. ಮಾಜಿ ಶಾಸಕ ರಾಮಣ್ಣ ಲಮಾಣಿ, ಚಂಬಣ್ಣ ಬಾಳಿಕಾಯಿ, ನಾರಾಯಣಪ್ಪ ಬೇವಿನಮರದ, ರುದ್ರಯ್ಯ ಪುರಾಣಿಕಮಠ, ಶಂಕ್ರಪ್ಪ ಮ್ಯಾಗೇರಿ, ಬಾಬಣ್ಣ ಕೊಟಗಿ, ಸೋಮಣ್ಣ ಮುಳಗುಂದ ಮುಂತಾದವರು ಹಾಜರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

