ಹವಾಮಾನಕ್ಕೆ ಅನುಗುಣವಾಗಿ ಬಿತ್ತನೆಯಿಂದ ಕೀಟ ನಿಯಂತ್ರಣ
ಲಕ್ಷ್ಮೇಶ್ವರ: ಕಾಲಕ್ಕೆ, ಹವಾಮಾನಕ್ಕೆ ಅನುಗುಣವಾಗಿ ಬೀಜಗಳ ಬಿತ್ತನೆಯಿಂದ ಹಲವಾರು ಕೀಟಗಳನ್ನು ನೈಸರ್ಗಿಕವಾಗಿ ತಡೆಗಟ್ಟಬಹುದಾಗಿದೆ ಎಂದು ಪ್ರಭಾರಿ ಸಹಾಯಕ ಕೃಷಿ ನಿರ್ದೇಶಕ ಪ್ರಹ್ಲಾದರಾವ್ ಹೇಳಿದರು.
2013-14ನೇ ಸಾಲಿನ ಸಸ್ಯ ಸಂರಕ್ಷಣೆ ಯೋಜನೆ ಅಡಿಯಲ್ಲಿ ಸುರಕ್ಷಿತ ಕೀಟನಾಶಕಗಳ ಬಳಕೆ ಕುರಿತು ಸಮೀಪದ ದೊಡ್ಡೂರಿನಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಪ್ರಾತ್ಯಕ್ಷಿಕೆ, 1 ದಿನದ ಕಾರ್ಯಾಗಾರದಲ್ಲಿ ಮಾತನಾಡಿದರು.
ಕೀಟನಾಶಕಗಳ ಬಳಕೆಯೊಂದೆ ಬೆಳೆಗಳಿಗೆ ಬರುವ ರೋಗಗಳನ್ನು ತಡೆಗಟ್ಟುವ ಸೂಕ್ತ ವಿಧಾನವಲ್ಲ, ಅದರ ಜತೆಯಲ್ಲಿ ಸೂಕ್ತ ನಿರ್ವಹಣೆ ಕೂಡ ಪ್ರಮುಖ ಪಾತ್ರವಹಿಸುತ್ತದೆ. ಸೂಕ್ತ ಕಾಲಾವಧಿಯಲ್ಲಿ ಹಲವು ಬೀಜಗಳನ್ನು ಬಿತ್ತುವ ಮೂಲಕ ಸಾಕಷ್ಟು ರೋಗಗಳು ಬರದಂತೆ ತಡೆಗಟ್ಟಬಹುದಾಗಿದೆ. ಅಲ್ಲದೇ ಬೀಜಗಳಿಗೆ ಸೂಕ್ತ ಔಷಧೋಪಚಾರ ಮಾಡುವ ಮೂಲಕ ಮುಂದೆ ಬರುವ ರೋಗಗಳನ್ನು ತಡೆಗಟ್ಟಬಹುದಾಗಿದೆ. ರೋಗವು ಸಣ್ಣ ಪ್ರಮಾಣದಲ್ಲಿ ಕಾಣಿಸಿಕೊಂಡಾಗ ಕೃಷಿ ಅಧಿಕಾರಿಗಳಿಂದ ಸೂಕ್ತ ಮಾರ್ಗದರ್ಶನ ಪಡೆದುಕೊಂಡು ಔಷಧಿ ಸಿಂಪರಣೆ ಮಾಡಿದಲ್ಲಿ ಹೆಚ್ಚಿನ ಪ್ರಮಾಣದ ಹಾನಿ ತಪ್ಪಿಸಬಹುದಾಗಿದೆ ಎಂದು ಹೇಳಿದರು.
ಸುರಕ್ಷಿತವಾಗಿ ಕೀಟ ನಾಶಕಗಳನ್ನು ಹೇಗೆ ಬಳಕೆ ಮಾಡಬೇಕು ಎಂಬ ಬಗ್ಗೆ ವಿಡಿಯೋ ಚಿತ್ರೀಕರಣದ ಮೂಲಕ ತಿಳಿವಳಿಕೆ ನೀಡುವ ಕಾರ್ಯವನ್ನು ಕೃಷಿ ಇಲಾಖೆಯ ಮಾಡಿತ್ತು. ಸಭೆಯಲ್ಲಿ ನಿವೃತ್ತ ಕೃಷಿ ಸಹಾಯಕ ಅಧಿಕಾರಿ ಬಿ.ಎಂ. ಕಾಳಗಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಗ್ರಾಪಂ ಅಧ್ಯಕ್ಷ ನಾನಪ್ಪ ಲಮಾಣಿ ಅಧ್ಯಕ್ಷತೆ ವಹಿಸಿದ್ದರು. ಪಟ್ಟಣದ ಸಹಾಯಕ ಕೃಷಿ ಅಧಿಕಾರಿ ಕೆ.ಎ. ನದಾಫ್, ಸೋಮಣ್ಣ ಲಮಾಣಿ, ಪಾಟೀಲ, ಹಳ್ಳಕೇರಿ, ಟೋಪಣ್ಣ ಲಮಾಣಿ, ದೇವಣ್ಣ ತೋಟದ, ದುಂಡಪ್ಪ ಬಾಗಲದ, ಬಸಣ್ಣ ವಾಲ್ಮೀಕಿ, ಪಾಂಡಪ್ಪ ಹುಲಕೋಟಿ, ಈರಣ್ಣ ಚಿಕ್ಕೋಡಿ, ಶಿವಪ್ಪ ರಗಟಿ, ಸಿದ್ದಪ್ಪ ಕುರಿ, ತಿರಕಪ್ಪ ಡೊಳ್ಳಿನ, ಫಕ್ಕೀರೇಶಪ್ಪ ಗಾಣಿಗೇರ ಮುಂತಾದವರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

