ಗದಗ

ನಮ್ಮ ದೇಶ ಸರ್ವ ಕಲೆಗಳ ಸಂಗಮ

Published On :

ಮುಳಗುಂದ: ವಿವಿಧತೆಯಲ್ಲಿ ಏಕತೆ ಕಾಣುವ ನಮ್ಮ ದೇಶ ಸರ್ವ ಕಲೆಗಳ ಸಂಗಮವಾಗಿದೆ. ಇಲ್ಲಿರುವ ಯುವಶಕ್ತಿ ಚೇತನಯುಕ್ತವಾಗಿರಬೇಕು ಎಂದು ಭಾರತ ಸ್ವಾಭಿಮಾನ ಟ್ರಸ್ಟ್‌ನ ರಾಯಚೂರು ಜಿಲ್ಲಾ ಯುವ ಸಂಚಾಲಕ ಎಂ. ಭಾಸ್ಕರ ಹೇಳಿದರು.
ಪಟ್ಟಣದ ಸರ್ಕಾರಿ ಪದವಿ ಮಹಾವಿದ್ಯಾಲಯದಲ್ಲಿ ಆಂತರಿಕ ಗುಣಮಟ್ಟ ಭರವಸೆ ಕೋಶದ ಅಡಿಯಲ್ಲಿ ಈಚೆಗೆ ಜರುಗಿದ ಯೋಗ ಶಿಬಿರದಲ್ಲಿ ಮಾತನಾಡಿದರು. ಹುಟ್ಟಿದಾಗ ಉಸಿರು ಇರುತ್ತದೆ, ಹೆಸರಿರಲ್ಲ. ಸತ್ತಾಗ ಹೆಸರಿರುತ್ತದೆ, ಉಸಿರಿರಲ್ಲ. ಉಸಿರು ಹೆಸರುಗಳ ಮಧ್ಯೆ ಬಂದು ಹೋಗುವುದೇ ಯೋಗ. ಯೋಗ ಎಂದರೆ ಕೂಡುವಿಕೆ ಎಂದರ್ಥ. ಮನಸ್ಸು ಮತ್ತು ಸಮನ್ವಯತೆ ಇದ್ದಾಗ ಯೋಗ ಬರುತ್ತದೆ ಎಂದರು. ಕಾಲೇಜಿನ ದೈಹಿಕ ನಿರ್ದೇಶಕ ಆರ್.ಡಿ. ಬೆನಕನಹಳ್ಳಿ ಮಾತನಾಡಿದರು. ಗದಗ ಜಿಲ್ಲಾಧ್ಯಕ್ಷ ರುದ್ರಣ್ಣ ಗುಳಗುಳಿ, ಪ್ರಾಚಾರ್ಯ ಡಾ. ಬಿ. ಸುರೇಶ, ಲಿಂಗಾನಂದಾಶ್ರಮದ ಲಿಂಗಾನಂದ ಶ್ರೀಗಳು, ಬಸವಪ್ರಭು ಶ್ರೀಗಳು, ಪ್ರಕಾಶ ಮದ್ದೀನ, ಈರಣ್ಣ ತಡಸದ, ಅಶೋಕ ಪವಾರ, ಎಚ್.ಎನ್. ಬಡಿಗೇರ ಇದ್ದರು. ಉಪನ್ಯಾಸಕ ಎನ್.ಸಿ. ಮುಳಗುಂದ ಸ್ವಾಗತಿಸಿದರು. ಈರಗಾರ ನಿರೂಪಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.