ನಾಳೆ ಜೆಟಿ ಕಾಲೇಜಿನಲ್ಲಿ ಜಿಲ್ಲಾ ಮಟ್ಟದ ಉದ್ಯೋಗ ಮೇಳ
ಗದಗ: ಗದಗ ಜಿಲ್ಲಾ ಮಟ್ಟದ ಬೃಹತ್ ಉದ್ಯೋಗ ಮೇಳವನ್ನು ಕೆಎಲ್ಇ ಸಂಸ್ಥೆಯ ಜೆಟಿ ಮಹಾವಿದ್ಯಾಲಯದಲ್ಲಿ ಮಾ. 5ರಂದು ಬೆಳಗ್ಗೆ 9.30ಕ್ಕೆ ಹಮ್ಮಿಕೊಳ್ಳಲಾಗಿದೆ ಎಂದು ಜೆಟಿ ಮಹಾವಿದ್ಯಾಲಯದ ಪ್ರಾಚಾರ್ಯ ಎಸ್.ಎಸ್. ಯಂಕಂಚಿ ಹೇಳಿದರು.
ಅವರು ಸೋಮವಾರ ಜೆಟಿ ಮಹಾವಿದ್ಯಾಲಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, 1958ರಲ್ಲಿ ಗದಗ ನಗರದಲ್ಲಿ ಪ್ರಾರಂಭವಾದ ಕೆಎಲ್ಇ ಸಂಸ್ಥೆಯು ವಿದ್ಯಾರ್ಥಿಗಳಿಗೆ ಗುಣಾತ್ಮಕ ಶಿಕ್ಷಣದೊಂದಿಗೆ ಹಲವು ಕೌಶಲ್ಯ ತರಬೇತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ವಿದ್ಯಾರ್ಥಿಗಳ ಬೌದ್ಧಿಕ ಹಾಗೂ ಮಾನಸಿಕವಾಗಿ ಸಬಲಗೊಳಿಸಲು ಶ್ರಮಿಸುತ್ತಿದೆ. ಅದೇ ರೀತಿ ಈ ಬಾರಿ ಬೌದ್ಧಿಕ ಶಿಕ್ಷಣ ಕೊಡುವುದರೊಂದಿಗೆ ವಿದ್ಯಾರ್ಥಿಗಳಿಗೆ ಸಹಕಾರಿಯಾಗಲಿ ಎಂಬ ಉದ್ದೇಶದಿಂದ ಕಾಲೇಜಿನಲ್ಲಿ ಈ ಜಿಲ್ಲಾ ಮಟ್ಟದ ಬೃಹತ್ ಉದ್ಯೋಗಮೇಳ ಹಮ್ಮಿಕೊಳ್ಳಲಾಗಿದೆ. ಈ ಮೇಳದಲ್ಲಿ ದೇಶದ ಸುಮಾರು 25 ಪ್ರತಿಷ್ಠಿತ ವಾಣಿಜ್ಯೋದ್ಯಮ ಮತ್ತು ಕೈಗಾರಿಕಾ ಸಂಸ್ಥೆಗಳು ಭಾಗವಹಿಸಲಿದ್ದು, ಅವುಗಳಲ್ಲಿ ಟೆಕ್ ಮಹೀಂದ್ರ, ಮುತ್ತೂಟ್, ಟಾಟಾ ಮಾರ್ಕೋಪೊಲೋ, ಬಿರ್ಲಾಗ್ರೂಪ್, ಸೋನಾಲಿಕಾ ಇಂಟರ ನ್ಯಾಶನಲ್, ಒನಿಡಾ, ಐಸಿಐಸಿಐ ಬ್ಯಾಂಕ್, ಎಸ್ಬಿಐ, ಐ-ಪ್ರಿಮಿಡ್ ಸೃಷ್ಟಿ, ಇನ್ಫೋರ್ಮ್ಯಟಿಕ್ಸ್, ಸು-ವಿಜಯಸ, ಅಗ್ರೊವೆಂಚರ್, ಫಸ್ಟ್ ಸೋರ್ಸ್, ಟ್ರಿಯಾ ಸಲೂಷನ್ಸ್, ಗ್ರೀಟ್, ಅಫೆಕ್ಸ್, ಪ್ರೋ ಮೋಸ್ ಇಂಡಿಯಾ ಲಿಮಿಟೆಡ್, ವೈಟಹಾರ್ಸ್, ಶ್ರೀರಾಮ ಕಾರ್ಪೊರೇಶನ್ ಮತ್ತು ಫೈನಾನ್ಸ್ ಮುಂತಾದ ದೇಶದ ಮುಂಚೂಣಿ ಕಂಪನಿಗಳು ಭಾಗವಹಿಸಲಿದ್ದು, ಗದಗ ಜಿಲ್ಲೆಯ ಬಿಎ, ಬಿಬಿಎ, ಬಿಕಾಂ, ಬಿಎಸ್ಸಿ, ಬಿಸಿಎ, ಬಿಬಿಎ, ಐಟಿಐ, ಡಿಪ್ಲೋಮಾ, ಫಾರ್ಮಸಿ, ಸ್ನಾತಕೋತ್ತರ ಪದವಿಯ ಅಂತಿಮ ವರ್ಷದಲ್ಲಿ ಅಭ್ಯಾಸ ಮಾಡುತ್ತಿರುವ ಹಾಗೂ ಮೇಲ್ಕಾಣಿಸಿದ ಪದವಿ ಪೂರ್ಣಗೊಳಿಸಿದ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಈ ಮೇಳದಲ್ಲಿ ಭಾಗವಹಿಸಿ ಇದರ ಸದುಪಯೋಗ ಪಡೆದುಕೊಳ್ಳಬಹುದಾಗಿದೆ. ಜಿಲ್ಲೆಯಲ್ಲಿರುವ ಎಲ್ಲ ಕಾಲೇಜುಗಳಿಗೆ ಈ ಕುರಿತು ಲಿಖಿತ ಹಾಗೂ ಮೌಖಿಕವಾಗಿ ಮೇಳದಲ್ಲಿ ಪಾಲ್ಗೊಳ್ಳುವಂತೆ ಸೂಚಿಸಿಲಾಗಿದ್ದು, ಜಿಲ್ಲೆಯಾದ್ಯಂತ 5 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ಈ ಮೇಳದಲ್ಲಿ ಪಾಲ್ಗೊಳ್ಳಲಿದ್ದಾರೆ. ಅಲ್ಲದೇ ಭಾಗವಹಿಸುವ ವಿದ್ಯಾರ್ಥಿಗಳು ಹೆಚ್ಚಿನ ಮಾಹಿತಿಗಾಗಿ ಉದ್ಯೋಗ ಮಾಹಿತಿ ಅಧಿಕಾರಿ ಎಸ್.ಎಫ್. ಹಾಸಿಲ್ಕರ್ (9535026879) ಇಲ್ಲಿಗೆ ಸಂಪರ್ಕಿಸುವಂತೆ ತಿಳಿಸಿದರು. ಮಾ. 5ರಂದು ಬೆಳಗ್ಗೆ 9.30ಕ್ಕೆ ಜರಗುವ ಮೇಳದ ಉದ್ಘಾಟನೆಯನ್ನು ಹುಬ್ಬಳ್ಳಿಯ ಉದ್ಯೋಗ ವಿನಿಮಯ ಕೇಂದ್ರದ ಸಹಾಯಕ ನಿರ್ದೇಶಕ ಶ್ರೀಕಾಂತ ಮಾಲಗಿತ್ತಿ ನೆರವೇರಿಸುವರು. ಸ್ಥಾನಿಕ ಆಡಳಿತ ಮಂಡಳಿಯ ಕಾರ್ಯಾಧ್ಯಕ್ಷ ಡಾ. ವಿ.ಆರ್. ಕುರಗೋಡ ಅಧ್ಯಕ್ಷತೆ ವಹಿಸುವರು. ಅತಿಥಿಗಳಾಗಿ ಧಾರವಾಡದ ಸಿಡಾಕ್ ಸಂಸ್ಥೆಯ ಉಪನಿರ್ದೇಶಕ ಸಿ.ಎಚ್. ಅಂಗಡಿ ಪಾಲ್ಗೊಳ್ಳಲಿದ್ದಾರೆ ಎಂದರು. ಪಪೂ ಕಾಲೇಜಿನ ಪ್ರಾಚಾರ್ಯ ಎಂ.ಎಂ. ನರಗುಂದ, ಬಿಬಿಎ ಪ್ರಾಚಾರ್ಯ ಎಂ.ಬಿ. ಚನ್ನಪ್ಪಗೌಡ್ರ, ಬಿಸಿಎ ಸಂಯೋಜಕ ಸುಭಾಸ ಗುರುಬಸನಗೌಡರ, ಎಂ.ಎಂ. ಹೊಳ್ಳಿಯವರ, ಎಸ್.ಜೆ. ಹಿರೇಮಠ ಸುದ್ದಿಗೋಷ್ಠಿಯಲ್ಲಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

