ವಸ್ತು ಖರೀದಿಸುವ ಮುನ್ನ ಜಾಗೃತಿ ಅವಶ್ಯ: ಅರಹುಣಸಿ
ಗದಗ: ಇಂದಿನ ಸ್ಪರ್ಧಾತ್ಮಕ ಮಾರುಕಟ್ಟೆಯಲ್ಲಿ ಗ್ರಾಹಕರು ವಸ್ತುವಿನ ಸಮಗ್ರ ಜ್ಞಾನ ಹೊಂದಿದಲ್ಲಿ ಮಾರುಕಟ್ಟೆ ವ್ಯವಹಾರದಲ್ಲಿ ಮೋಸಕ್ಕೆ ಬಲಿಯಾಗುವುದಿಲ್ಲ. ಗ್ರಾಹಕರು ವಸ್ತುವನ್ನು ಖರೀದಿಸುವಾಗ ಅದರ ಗುಣಮಟ್ಟ, ಪ್ರಮಾಣ, ದರ ಹಾಗೂ ಬಾಳಿಕೆಯ ಅವಧಿಯ ಬಗ್ಗೆ ಪರಿಪೂರ್ಣ ಮಾಹಿತಿ ತಿಳಿಸಿದಲ್ಲಿ ಗ್ರಾಹಕರಿಗಾಗುವ ಮೋಸ ತಪ್ಪಿಸಬಹುದಾಗಿದೆ ಎಂದು ಹುಲಕೋಟಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಾಣಿಜ್ಯಶಾಸ್ತ್ರದ ಉಪನ್ಯಾಸಕ ಡಾ. ಉಮೇಶ ಅರಹುಣಸಿ ಹೇಳಿದರು.
ಅವರು ಈಚೆಗೆ ಸ್ಥಳೀಯ ಬಸವೇಶ್ವರ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಸಮಾಜ ವಿಜ್ಞಾನ ಸಂಘದ ಆಶ್ರಯದಲ್ಲಿ ಏರ್ಪಡಿಸಿದ್ದ ಗ್ರಾಹಕರ ಜಾಗೃತಿ ಕುರಿತು ಹಮ್ಮಿಕೊಳ್ಳಲಾಗಿದ್ದ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು. ಪ್ರತಿ ಗ್ರಾಹಕರು ಖರೀದಿಸುವ ಪ್ರತಿ ವಸ್ತುವಿನ ನ್ಯಾಯ ಸಮ್ಮತವಾದ ಬಳಕೆಗೆ ತಮ್ಮದೇ ಆದ ಹಕ್ಕನ್ನು ಹೊಂದಿರುತ್ತಾರೆ. ಖರೀದಿಸಿದ ವಸ್ತು ಸರಿಯಾದ ಉಪಯೋಗವಾಗದೆ ಗ್ರಾಹಕನ ಹಕ್ಕಿಗೆ ಚ್ಯುತಿ ಬಂದಾಗ ಇಂಟರ್ನೆಟ್ ಮೂಲಕವೂ ಕಂಪನಿಗೆ ದೂರು ದಾಖಲಿಸಿ ನ್ಯಾಯ ಪಡೆಯಬಹುದು. ಅದು ಸಾಧ್ಯವಾಗದೆ ಇದ್ದಾಗ ಗ್ರಾಹಕರ ವೇದಿಕೆಗೆ ದೂರು ಸಲ್ಲಿಸಿ ನ್ಯಾಯ ಪಡೆಯಬಹುದು. ಅಧುನಿಕ ಮಾರುಕಟ್ಟೆಯಲ್ಲಿ ಗ್ರಾಹಕರನ್ನು ಆಕರ್ಪಿಸಲು ವಿವಿಧ ರೀತಿಯ ಮಾರ್ಗ ಅನುಸರಿಸುತ್ತಾರೆ. ಚಲನಚಿತ್ರ ತಾರೆಯರನ್ನು ಬಳಸಿಕೊಂಡು ಜಾಹೀರಾತು ತಯಾರಿಸುವ ಮತ್ತು ಪ್ರಸಾರ ಮಾಡುವ ಹಾಗೂ ರಿಯಾಯಿತಿ ದರದ ನೀತಿ ಅನುಸರಿಸುವುದನ್ನು ವ್ಯಾಪಾರದ ಚಾಕಚಕ್ಯತೆಯನ್ನಾಗಿ ಮಾಡಿಕೊಂಡಿರುತ್ತಾರೆ. ಇಂತಹ ವಿಷಯಗಳಲ್ಲಿ ಗ್ರಾಹಕರು ಜಾಗೃತಿ ವಹಿಸಿದಾಗ ಗುಣಮಟ್ಟದ ವಸ್ತು ಖರೀದಿಸಲು ಸಾಧ್ಯ ಎಂದರು. ಪ್ರಾ. ಬಿ.ಬಿ. ಗೌಡರ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಶ್ರುತಿ ಪಾಟೀಲ ಹಾಗೂ ಸಂಗಡಿಗರು ಪ್ರಾರ್ಥಿಸಿದರು. ಜಾಫರಅಲಿ ಬೇಗ ಸ್ವಾಗತಿಸಿದರು. ಸಾವಿತ್ರಿ ಕುಂಬಾರ ನಿರೂಪಿಸಿದರು. ಮೇಘಾ ಗಾಡಗೊಳ್ಳಿ ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

