ಬಂಜಾರ ಸಮುದಾಯ ಸಂಘಟಿತರಾಗಲಿ
ಗಜೇಂದ್ರಗಡ: ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕವಾಗಿ ಅತ್ಯಂತ ಹಿಂದುಳಿದ ಬಂಜಾರ ಸಮುದಾಯ ಸಂಘಟಿತರಾದಾಗ ಮಾತ್ರ ಸಮಾಜದ ಮುಖ್ಯವಾಹಿನಿಗೆ ಬರಲು ಸಾಧ್ಯ ಎಂದು ಸಾಹಿತಿ, ಮಾಜಿ ಸಚಿವೆ ಬಿ.ಟಿ. ಲಲಿತಾನಾಯಕ ಹೇಳಿದರು.
ಅವರು ಮಂಗಳವಾರ ಪಟ್ಟಣದ ಸೇವಾಲಾಲ ದೇಗುಲ ಆವರಣದಲ್ಲಿ ನಡೆದ ರೋಣ ತಾಲೂಕು ಸೇವಾಲಾಲ ಸೇವಾ ಸಮಿತಿ ವತಿಯಿಂದ ಸಂತ ಸೇವಾಲಾಲ ಮಹಾರಾಜರ 275ನೇ ಜಯಂತ್ಯುತ್ಸವ ಸಮಾರಂಭಕ್ಕೆ ಚಾಲನೆ ನೀಡಿ ಮಾತನಾಡಿದರು. ಸಾಂಪ್ರದಾಯಿಕ ಉಡುಗೆ ತೊಟ್ಟ ಮಹಿಳೆಯನ್ನು ಸಮಾಜದ ರಾಜಕೀಯ ಮುಖಂಡರು, ಉನ್ನತ ಹುದ್ದೆಯಲ್ಲಿ ಸೇವೆ ಸಲ್ಲಿಸುವವರು ಮಾತನಾಡಿಸಲು ಹಿಂಜರಿಯುತ್ತಾರೆ. ತಮ್ಮ ಮನೆಯ ಹೆಣ್ಣು ಮಕ್ಕಳಿಗೆ ಸೀರೆ ಉಡಲು ಕಟ್ಟಪ್ಪಣೆ ಹಾಕುತ್ತಾರೆ. ಇದು ನಿಲ್ಲಬೇಕು. ಸಾಂಪ್ರದಾಯಿಕ ಉಡುಗೆ ತೊಟ್ಟವರನ್ನು ತಾಯಿಯಂತೆ ಕಂಡು ಉಡುಗೆ ತೊಡಲು ಪ್ರೋತ್ಸಾಹ ನೀಡಬೇಕು ಎಂದರು. ಶಾಸಕ ಜಿ.ಎಸ್. ಪಾಟೀಲ ಮಾತನಾಡಿ, ಸಂತ ಸೇವಾಲಾಲರ ತತ್ವಾದರ್ಶಗಳು ಸರ್ವಕಾಲಿಕ ಸಮುದಾಯದ ಕಲ್ಯಾಣಕ್ಕಾಗಿ ಶ್ರಮಿಸಿದ ಮಹಾತ್ಮರ ಸೇವೆಯನ್ನು ಸದಾ ನಮ್ಮ ಬದುಕಿನಲ್ಲಿ ಅಳವಡಿಸಿಕೊಂಡು ಬಾಳಿದಾಗ ಆಚರಣೆ ಸಾರ್ಥಕ ಎಂದರು. ಮೈಸೂರು ಸಂಸ್ಥಾನ ಮಠದ ವಿಜಯ ಮಹಾಂತ ಸ್ವಾಮೀಜಿ, ಲಿಂಗಸ್ಗೂರಿನ ವಿಜಯಮಹಾಂತ ಶಾಖಾಮಠದ ಸಿದ್ಧಲಿಂಗಶ್ರೀಗಳು, ಶಿರೂರ ಬಂಜಾರ ಶಕ್ತಿ ಪೀಠದ ಕುಮಾರ ಮಹಾರಾಜರು, ಹೇಮಗಿರಿ ಗೋಸಾವಿ ಬಾವಾನವರು, ಸಾನ್ನಿಧ್ಯ ವಹಿಸಿ ಆಶೀರ್ವದಿಸಿದರು. ಅರ್ಚಕರಾದ ಕೃಷ್ಣಾ ಭಗತ್, ದೇವಾ ಭಗತ್, ಪುರಸಭೆ ವಿಪಕ್ಷ ನಾಯಕ ಶಿವರಾಜ ಘೋರ್ಪಡೆ, ಅಶೋಕ ಬಾಗಮಾರ, ವೀರಣ್ಣ ಸೊನ್ನದ, ಸಿದ್ದಾ ನಾಯಕ, ನಾಗೇಶ ಲಕ್ಕಲಕಟ್ಟಿ, ಪುರಸಭೆ ಸದಸ್ಯೆ ಶಾರದಾ ರಾಠೋಡ, ಮುಕ್ತುಂಬಿ ಹಣಗಿ, ಸುಜಾತಾ ಚುಂಚಾ, ಶಾರಮ್ಮ ತಳವಾರ, ಲಚಮಪ್ಪ ರಾಠೋಡ, ಗೋಪಾಲಪ್ಪ ಮಾಳೋತ್ತರ, ಭಿಕ್ಕೆಪ್ಪ ರಾಠೋಡ, ಗಣೇಶ ಮಾಳೋತ್ತರ, ಸಕ್ರಪ್ಪ ಅಜಮೀರ, ಪ್ರಶಾಂತ ರಾಠೋಡ, ಪರಶುರಾಮ ಮಾಳೋತ್ತರ, ಉಮೇಶ ರಾಠೋಡ, ಮಾರುತಿ ಮಾಳೋತ್ತರ, ತುಳಸಿರಾಮ ಮಾಳೋತ್ತರ, ಶಂಕ್ರಪ್ಪ ಮಾಳೋತ್ತರ ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

