ಗದಗ

ಮಾರನಬಸರಿ: ಅಸ್ವಸ್ಥ ಶಾಲಾ ಮಕ್ಕಳು ಗುಣಮುಖ

Published On :

ಕನ್ನಡಪ್ರಭ ವಾರ್ತೆ, ರೋಣ, ಮಾ. 5
ಬಿಸಿಯೂಟ ಸೇವಿಸಿ ತಾಲೂಕಿನ ಮಾರನಬಸರಿ ಸರ್ಕಾರಿ ಪ್ರಾಥಮಿಕ ಶಾಲೆಯ ಮಕ್ಕಳು ಸೋಮವಾರ ಅಸ್ವಸ್ಥಗೊಂಡು 3 ದಿನಗಳಿಂದ ಪಟ್ಟಣದ ಡಾ. ಭೀಮಸೇನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 50 ಮಕ್ಕಳಲ್ಲಿ 35ಕ್ಕೂ ಹೆಚ್ಚು ಮಕ್ಕಳು ಸಂಪೂರ್ಣ ಗುಣಮುಖರಾಗಿದ್ದು ಬುಧವಾರ ಸಾಯಂಕಾಲ ಗ್ರಾಮಕ್ಕೆ ಕಳುಹಿಸಲಾಯಿತು.
ಇನ್ನುಳಿದ 12 ಮಕ್ಕಳಲ್ಲಿ ಸ್ವಲ್ಪ ಪ್ರಮಾಣದಲ್ಲಿ ತಲೆ ನೋವು ಇರುವುದರಿಂದ ಆಸ್ಪತ್ರೆಯಲ್ಲಿಯೇ ಇನ್ನೂ 2 ದಿನಗಳವರೆಗೆ ಉಳಿಸಿಕೊಂಡು ಅಗತ್ಯ ಚಿಕಿತ್ಸೆ, ಔಷಧೋಪಚಾರ ಮಾಡಲಾಗುವುದು. ಮಕ್ಕಳ ಆರೋಗ್ಯದಲ್ಲಿ ಯಾವುದೇ ರೀತಿಯ ತೊಂದರೆ ಕಾಣದೇ ಯಥಾಸ್ಥಿಗೆ ಮರಳಿದೆ. ಅಸ್ವಸ್ಥಗೊಂಡಿದ್ದ ಎಲ್ಲ ಮಕ್ಕಳಿಗೆ ಆಸ್ಪತ್ರೆಯಲ್ಲಿ ದಾಖಲಿಸಿಕೊಂಡು ಈಗಾಗಲೇ ಅಗತ್ಯವಿರುವ ಔಷಧೋಪಚಾರ ಮಾಡಲಾಗಿದ್ದು ಮಂಗಳವಾರ ದಾಖಲಾದ 50 ಮಕ್ಕಳಲ್ಲಿ 38 ಮಕ್ಕಳನ್ನು ಇಂದು (ಬುಧವಾರ) ಅವರ ಶಿಕ್ಷಕ ಮತ್ತು ಪಾಲಕರೊಂದಿಗೆ ಮನೆಗೆ ಕಳುಹಿಸಲಾಗುವುದು ಎಂದು ಆಸ್ಪತ್ರೆ ವೈದ್ಯ ಡಾ. ಎಂ.ಬಿ. ಪೊಲೀಸ್‌ಪಾಟೀಲ 'ಕನ್ನಡಪ್ರಭ'ಕ್ಕೆ ತಿಳಿಸಿದರು.
ಮಕ್ಕಳ ಆರೋಗ್ಯ ವಿಚಾರಣೆ: ಆಸ್ಪತ್ರೆಯಲ್ಲಿ ದಾಖಲಾಗಿದ್ದ ಮಾರನಬಸರಿ ಶಾಲೆಯ ಮಕ್ಕಳ ಆರೋಗ್ಯ ಕುರಿತು ವಿಚಾರಿಸಲು ತಾಪಂ ಅಧ್ಯಕ್ಷ ತಿಪ್ಪವ್ವ ದೊಡಮನಿ, ಉಪಾಧ್ಯಕ್ಷೆ ಶೈಲಜಾ ಯರಗೇರಿ, ಸದಸ್ಯ ಬಸನಗೌಡ ಶಿರಗುಂಪಿ, ಅಂದಪ್ಪ ಬಿಚ್ಚೂರ, ಧರ್ಮಣ್ಣ ಭೂಸಗೌಡ್ರ, ಸುಮಂಗಲಾ ಹಿರೇಮಠ, ಮಾಲಾನಬೀ ಗಡಾದ, ಮುಖಂಡ ಈರಣ್ಣ ಯರಗೇರಿ, ಶಂಕ್ರಯ್ಯ ಹಿರೇಮಠ, ತಾಲೂಕು ಪ್ರಾಥಮಿಕ ಶಿಕ್ಷಕ ಸಂಘದ ಅಧ್ಯಕ್ಷ ವೈ.ಡಿ. ಗಾಣಿಗೇರ, ಬಿಇಒ ಡಿ.ಐ. ಅಸುಂಡಿ, ತಾಲೂಕು ಅಕ್ಷರ ದಾಸೋಹ ಅಧಿಕಾರಿ ಪಿ.ಬಿ. ಪಾಟೀಲ, ಪ್ರೌಢ ಶಾಲಾ ಶಿಕ್ಷಣ ಸಂಯೋಜಕ ಪಿ.ಎಚ್. ಕಡಿವಾಲ, ಪಿ.ಎಚ್. ವಾಲ್ಮೀಕಿ, ಜಕ್ಕರಸಾನಿ ಸೇರಿದಂತೆ ಅನೇಕರು ಆಸ್ಪತ್ರೆಗೆ ಭೇಟಿ ನೀಡಿ ಕೆಲ ಹೊತ್ತು ಆಸ್ಪತ್ರೆಯಲ್ಲಿದ್ದು ಮಕ್ಕಳ ಆರೋಗ್ಯ ವಿಚಾರಿಸಿದರು. ಮಾರನಬಸರಿ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಪಿ.ಬಿ. ಪಾಟೀಲ ಮತ್ತು ಕೆಲ ಸಹ ಶಿಕ್ಷಕರು ಕಳೆದ 2 ದಿನಗಳಿಂದ ಆಸ್ಪತ್ರೆಯಲ್ಲಿಯೇ ಉಳಿದು ಮಕ್ಕಳ ಆರೋಗ್ಯ ರಕ್ಷಣೆಯಲ್ಲಿ ವಿಶೇಷ ಕಾಳಜಿ ವಹಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.