ಜೈನ್ ಧರ್ಮ ನಾಡಿನ ಇತಿಹಾಸದೊಂದಿಗೆ ಹಾಸುಹೊಕ್ಕಾಗಿದೆ
ಗದಗ: ಜೈನ ಧರ್ಮ ಪ್ರಾಚೀನ ಕಾಲದಿಂದಲೂ ಕನ್ನಡನಾಡಿನ ಇತಿಹಾಸ ಮತ್ತು ಸಂಸ್ಕೃತಿಯೊಂದಿಗೆ ಹಾಸುಹೊಕ್ಕಾಗಿದೆ ಎಂದು ಗದುಗಿನ ಸರ್ಕಾರಿ ಪದವಿ ಕಾಲೇಜಿನ ಇತಿಹಾಸ ಪ್ರಾಧ್ಯಾಪಕ ಡಾ. ಅಪ್ಪಣ್ಣ ಹಂಜೆ ಹೇಳಿದರು.
ಜಿಲ್ಲಾ ಕಸಾಪ ವತಿಯಿಂದ ನಗರದ ತಾಪಂ ಆವರಣದಲ್ಲಿ ಈಚೆಗೆ ಹಮ್ಮಿಕೊಂಡಿದ್ದ ಶನಿವಾರ ಸಾಹಿತ್ಯ ಸಂಜೆ ಕಾರ್ಯಕ್ರಮದಲ್ಲಿ ಜೈನ ವಾಸ್ತು, ಶಿಲ್ಪಕಲೆ ಕುರಿತು ಉಪನ್ಯಾಸ ನೀಡಿದರು. ಜೈನ ಧರ್ಮದ ತತ್ವ-ದರ್ಶನ, ಪುರಾತತ್ವ, ಆಚಾರ-ವಿಚಾರ, ನಂಬಿಕೆ-ಸಂಪ್ರದಾಯ, ವಾಸ್ತು-ಶಿಲ್ಪ, ಶಾಸನ-ಸಾಹಿತ್ಯ ತನ್ನದೆಯಾದ ವಿಶಿಷ್ಟತೆ ಮತ್ತು ವೈಶಿಷ್ಟತೆ ಮೆರೆದಿದೆ. ಆದ್ದರಿಂದ ಭಾರತದ ಇತಿಹಾಸದ ಪರಂಪರೆಯಲ್ಲಿ ವಾಸ್ತುಶಿಲ್ಪ, ಕಲೆಗೆ ಜೈನ ಧರ್ಮದ ಕೊಡುಗೆ ಅಪಾರವಾಗಿದೆ. ಭಾರತದಲ್ಲಿ ಹಲವಾರು ಧರ್ಮಗಳು ತನ್ನದೆಯಾದ ವಾಸ್ತುಶಿಲ್ಪಕಲೆ ಹೊಂದಿವೆ. ಅದರಲ್ಲಿ ಜೈನ ವಾಸ್ತು ಶಿಲ್ಪ ಕ್ರಿ.ಶ.ಪೂ. 4ನೇ ಶತಮಾನದ ಇತಿಹಾದ ಶಾಸನಗಳ ಆಧಾರದ ಮೇಲೆ ಕರ್ನಾಟಕದಲ್ಲಿ 8 ಸಾವಿರ ಜೈನ ಬಸದಿಗಳಿವೆ. ಬ್ರಹ್ಮಜಿನಾಲಯ, ಶಂಖಬಸದಿ, ಸಮ್ಯಕರ್ಣಿ, ಜ್ಞಾನ ಚಾರಿತ್ರ್ಯ, ಬಸದಿಗಳು ನಿರ್ಮಾಣವಾಗಿದ್ದವು. ಪ್ರಾಚೀನ ಜೈನ ಬಸದಿ ಬಸವಕಲ್ಯಾಣದಲ್ಲಿ ಸ್ಥಾಪಿತವಾಗಿದೆ. ಗದಗ, ಲಕ್ಷ್ಮೇಶ್ವರ, ಲಕ್ಕುಂಡಿ, ಡಂಬಳ, ಪೇಠಾಲೂರ, ರೋಣ, ಸವಡಿ, ಸೂಡಿ, ರಾಜೂರ ಮುಂತಾದ ಸ್ಥಳಗಳಲ್ಲಿ ಜೈನ ವಾಸ್ತು, ಶಿಲ್ಪಕಲೆಯನ್ನು ಹೇರಳವಾಗಿ ಕಾಣಬಹುದಾಗಿದೆ ಎಂದರು. ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕಸಾಪ ಗೌರವ ಕೋಶಾಧ್ಯಕ್ಷ ಮಲ್ಲೇಶ ಡಿ.ಎಚ್. ಮಾತನಾಡಿದರು. ಕವಿ ಗುಲಾಬಸಿಂಗ್ ಧಡೇಕರ್ ಅವರು ಸ್ವರಚಿತ ಕವನ ವಾಚಿಸಿದರು. ತಾಲೂಕು ಕಸಾಪ ಅಧ್ಯಕ್ಷ ಕಿಶೋರಬಾಬು ನಾಗರಕಟ್ಟಿ, ಗೌರವ ಕಾರ್ಯದರ್ಶಿ ಶಶಿಕಾಂತ ಕೊರ್ಲಹಳ್ಳಿ, ಡಾ. ರಾಜೇಂದ್ರ ಗಡಾದ, ಎಸ್.ಎಸ್. ತಳ್ಳಿಹಾಳ, ಭೋಜರಾಜ ನಾವಳ್ಳಿ, ಸೋಮಶೇಖರ ದೊಡಮನಿ, ಸಂಜೀವಸ್ವಾಮಿ, ಅ.ದ. ಕಟ್ಟಿಮನಿ, ಸುಚಿತಕುಮಾರ ಹರಿವಾಣ, ಪ್ರಕಾಶ ಬಂಡಿ, ಐಶ್ವರ್ಯ ಬಂಡಿ, ಸಂತೋಷ ನಿಂಗಾಪುರ, ವಿ.ಬಿ. ಪಠಾಣಿ, ರಾಘವೇಂದ್ರ, ಸಿ.ಕೆ. ಕೇಸರಿ, ರಾಜಶೇಖರ ಕಾಲವಾಡಮಠ, ಶರಣಪ್ಪ ಬಾಲಣ್ಣವರ, ರಾಜಶೇಖರ ಕರಡಿ, ಜಿ.ಎಸ್. ಯತ್ನಟ್ಟಿ, ಡಾ. ಅಶೋಕ ಮತ್ತಿಕಟ್ಟಿ, ಮೀನಾಕ್ಷಿ ಮತ್ತಿಕಟ್ಟಿ, ರಾಜೇಖಾನ, ಶಂಕರಗೌಡ ಪಾಟೀಲ, ಎಸ್.ಬಿ. ದೊಡ್ಡಣ್ಣವರ, ವಾಸು ಟಿಕಾನದಾರ, ಸುನೀತಾ ಎಂ.ಎಚ್., ಶೀತಲ ವರಾಲು, ರಾಧಿಕಾ ಹರಿವಾಣ, ದೀಪಿಕಾ ಹರಿವಾಣ, ಶೋಭಾ ಶಲವಡಿ, ವೀರೇಶ ಭೂತಾನವರ ಮುಂತಾದವರು ಪಾಲ್ಗೊಂಡಿದ್ದರು. ಬಿ.ಬಿ. ಘಳಗಿ ಪ್ರಾರ್ಥಿಸಿದರು. ಎಸ್.ಎಸ್. ತಳ್ಳಿಹಾಳ ಸ್ವಾಗತಿಸಿದರು. ಶಿಕ್ಷಕರ ಸಂಘದ ಅಧ್ಯಕ್ಷ ಡಿ.ಎಸ್. ತಳವಾರ ನಿರೂಪಿಸಿದರು. ಶಂಕರ ಗಾಣಿಗೇರ ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

