ಸದಸ್ಯೆ ಮನೆ ಮುಂದೆ 'ಕೈ' ಕಾರ್ಯಕರ್ತರು ಧರಣಿ
ನರಗುಂದ: ಪಟ್ಟಣದ 21ನೇ ವಾರ್ಡ್‌ನ ಹಾಲಭಾವಿ ಕೆರೆಯ ನಿವಾಸಿಗಳು ತಮ್ಮ ಪುರಸಭೆ ವಾರ್ಡ್‌ನ ಸದಸ್ಯೆ ಜ್ಯೋತಿ ಪತ್ರಿವನ ಮನೆ ಮುಂದೆ ತಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಸುವರೆಗೆ ಚುನಾವಣೆಯಲ್ಲಿ ಮತದಾನ ಮಾಡಬಾರದೆಂದು ಕಾಂಗ್ರೆಸ್ ಕಾರ್ಯರ್ತರು ಗುರುವಾರ ರಾತ್ರಿ ಧರಣಿ ಮಾಡಿದರು.
ಅವರು ಪಟ್ಟಣದ ವಿನಾಯಕ ನಗರದ ಪುರಸಭೆ ಸದಸ್ಯ ಜ್ಯೋತಿ ಪತ್ರಿವನ ಮನೆ ಮುಂದೆ ಗುರುವಾರ 21 ವಾರ್ಡಿನ ಹಾಲಭಾವಿ ನಿವಾಸಿಗಳು ಸೇರಿ ಸದಸ್ಯ ಮನೆಯ ಮುಂದೆ ಜಮಾಯಿಸಿ ನಮ್ಮ ಹಾಲಭಾವಿ ಕೆರೆಯಲ್ಲಿ 30 ವರ್ಷಗಳಿಂದ ಇಲ್ಲಿ ವಾಸವಾಗಿದ್ದು, ಇಲ್ಲಿವರೆಗೂ ನಮಗೆ ಹಕ್ಕುಪತ್ರ ನೀಡಿಲ್ಲ. ಅದಕ್ಕೆ ಮಾ. 7ರ ಜರುಗುವ ಪುರಸಭೆಯ ಚುನಾವಣೆಯಲ್ಲಿ ಭಾಗವಹಿಸಿ ಮತದಾನ ಮಾಡಬಾರದು, ನೀವು ನಾವು ಸೇರಿಕೊಂಡು ಶಾಸಕ ಬಿ.ಆರ್. ಯಾವಗಲ್ಲವರಿಗೆ ಮನವಿ ಪತ್ರಿ ನೀಡಿ ಶಾಸಕರು ನಮ್ಮ ಬೇಡಿಕೆಗಳಿಗೆ ಭರವಸೆ ನೀಡಿದರೆ ಮಾತ್ರ ನೀವು ಚುನಾವಣೆಯಲ್ಲಿ ಭಾಗವಹಿಸಿ ಮತದಾನ ಮಾಡಬೇಕೆಂದು ಸದಸ್ಯ ಮನೆ ಮುಂದೆ ಧರಣಿ ಕುಳಿತಿರುವುದಾಗಿ ತಿಳಿಸಿದರು. ಆದರೆ, ಈ ಧರಣಿ ಪ್ರಾರಂಭ ಆದ ಸಂದರ್ಭದಲ್ಲಿ ಸದಸ್ಯ ಜ್ಯೋತಿ ಪತ್ರಿ ಮನೆಯಲ್ಲಿ ಇಲ್ಲದ್ದರಿಂದ 21 ವಾರ್ಡ್‌ನ ನಿವಾಸಿಗಳು ಸದಸ್ಯರು ಬರುವವರೆಗೂ ಧರಣಿ ಮುಂದುವರಿಸುತ್ತೇವೆಂದು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

