ಗದಗ

ಸುದ್ದಿ ಸಂಕ್ಷೇಪ

Published On :

ನೀರು ಪೂರೈಕೆ ಮಾಹಿತಿ
ಗದಗ: ಕುಂಬಾರ ಓಣಿ, ಜಂತ್ಲಿ ಓಣಿ, ಗೆಳೆಯರ ಬಳಗ, ದ್ಯಾಮವ್ವನಗುಡಿ ಲೈನ್, ಪಿಂಜಾರ ಓಣಿ, ಪಡಗದ ಲೈನ್, ಗಂಜಿಬಸವೇಶ್ವರ ಸರ್ಕಲ್ ಲೈನ್, ಶರೀಫ ಅಜ್ಜನ ಗದ್ದುಗೆ, ಜನತಾ ಕಾಲೋನಿ, ಖಾನ್ ತೋಟ, ಹೊಂಬಳ ರೋಡ್, ಅಂಬೇಡ್ಕರ್ ನಗರ, ಹನುಮಂತ ದೇವರ ಗುಡಿ ಲೈನ್, ಮಸೂತಿ ಲೈನ್ ಹಿಂಭಾಗ, ಮುಂಭಾಗ, ಮಣ್ಣನವರ ಲೈನ್, ಸುಲಭ ಶೌಚಾಲಯ ಲೈನ್, ಡೋರ್ ಗಲ್ಲಿ ಈ ಭಾಗಗಳಲ್ಲಿ ಮಾ. 7ರಂದು ನೀರು ಪೂರೈಕೆ ಮಾಡಲಾಗುವುದು ಎಂದು ಪ್ರಕಟಣೆ ತಿಳಿಸಿದೆ.
ಅರ್ಜಿ ಆಹ್ವಾನ
ಗದಗ: 2014ನೇ ಸಾಲಿಗೆ ಕೇಂದ್ರ ಸರ್ಕಾರದಿಂದ ಅರ್ಜುನ ಪ್ರಶಸ್ತಿ, ಧ್ಯಾನಚಂದ್ ಪ್ರಶಸ್ತಿ, ದ್ರೋಣಾಚಾರ್ಯ ಪ್ರಶಸ್ತಿ ಮತ್ತು ರಾಜೀವಗಾಂಧಿ ಖೇಲ್ ರತ್ನ ಪ್ರಶಸ್ತಿಗಳನ್ನು ನೀಡಲು ಅರ್ಜಿ ಆಹ್ವಾನಿಸಲಾಗಿದೆ. ರಾಷ್ಟ್ರೀಯ, ಅಂತರ್ ರಾಷ್ಟ್ರೀಯ, ಜೀವನ ಪರ್ಯಂತ ಸಾಧನೆ ಮಾಡಿದ ಹಾಗೂ ಅತ್ಯುತ್ತಮ ಸಾಧನೆ ಮಾಡಿರುವ ಕ್ರೀಡಾ ಪಟುಗಳಿಗೆ ಪ್ರಶಸ್ತಿಗಳನ್ನು ನೀಡುವ ಸಲುವಾಗಿ ಅಂತಹ ಕ್ರೀಡಾಪಟುಗಳು, ತರಬೇತುದಾರರು ಅರ್ಜಿಗಳನ್ನು ಸಲ್ಲಿಸಬಹುದಾಗಿದೆ. ನಿಗದಿತ ಅರ್ಜಿ ನಮೂನೆಯನ್ನು ಢಿಢಿಢಿ.ಣಛಡ.ಟ್ಝ್ಛಿ.್ಝಟಿ ನಲ್ಲಿ ಪಡೆಯಬಹುದು. ಭರ್ತಿ ಮಾಡಿದ ಅರ್ಜಿಗಳನ್ನು ಸೂಕ್ತ ದೃಢೀಕೃತ ದಾಖಲೆಗಳೊಂದಿಗೆ ಏಪ್ರಿಲ್ 8 ರೊಳಗಾಗಿ ಈ ಕಾರ್ಯಾಲಯಕ್ಕೆ ಸಲ್ಲಿಸಬೇಕು ಎಂದು ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ.
9ರಂದು ಸಿಇಟಿ ಉಚಿತ ಕಾರ್ಯಾಗಾರ
ಗದಗ: ನಗರದ ಮಹೇಂದ್ರಕರ ವತ್ತದ ಕರ್ನಾಟಕ ಬ್ಯಾಂಕ್ ಹತ್ತಿರವಿರುವ ಎಂ.ಎಸ್. ಹುಲ್ಲೂರ ಫೌಂಡೇಶನ ಟ್ರಸ್ಟ್‌ನ ಆಶ್ರಯದಲ್ಲಿನ ನ್ಯೂ ಎಕ್ಸಲೆಂಟ್ ಸಿಇಟಿ ಕೋಚಿಂಗ್ ಸೆಂಟರ್‌ನಲ್ಲಿ ಮಾ. 9ರಂದು ಬೆಳಗ್ಗೆ 9.30ರಿಂದ ಸಂಜೆ 4ರ ವರೆಗೆ ಪೊಲೀಸ್ ನೇಮಕಾತಿಗೆ ಸಂಬಂಧಿಸದಿಂತೆ 1 ದಿನದ ವಿಶೇಷ ಸಿಇಟಿ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ. ಪ್ರಸ್ತುತ ನೇಮಕಾತಿ ಹಂತದಲ್ಲಿರುವ ಪೊಲೀಸ್ ಕಾನಸ್ಟೇಬಲ್ ಹುದ್ದೆಗೆ ಅರ್ಜಿ ಹಾಕಲು ಪ್ರಾರಂಭವಾಗಿದ್ದು, ಇದರ ನೇಮಕಾತಿಯ ಪ್ರಕ್ರಿಯೆಗೆ ಸಂಬಂಧಿಸಿದಂತೆ ಇಇಟಿ ಅರ್ಹತಾ ಪರೀಕ್ಷೆಗೆ ಸಂಬಂಧಿಸಿದಂತೆ ಪಠ್ಯಕ್ರಮಕ್ಕನುಗುಣವಾಗಿ ವಿಷಯ ಪರಿಣತರಿಂದ ಸಾಮಾನ್ಯ ಜ್ಞಾನ, ಮೆಂಟಲ್ ಎಬಲಿಟಿ, ಸಾಮಾನ್ಯ ವಿಜ್ಞಾನ, ಸಾಮಾನ್ಯ ಗಣಿತ, ಇತಿಹಾಸ, ಭೂಗೋಳ, ಪ್ರಚಲಿತ ಘಟನೆಗಳಿಗೆ ಸಂಬಂಧಿಸಿದಂತೆ ವಿಶೇಷವಾಗಿ 1 ದಿನದ ಪೊಲೀಸ್ ಸಿಇಟಿ ಉಚಿತ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ. ಮಾ. 10ರಿಂದ ಹೊಸ ಸಿಇಟಿ ಪೊಲೀಸ್ ಬ್ಯಾಚ್‌ಗಳು ಪ್ರಾರಂಭವಾಗುತ್ತಿದ್ದು, ಇದರ ಸದುಪಯೋಗವನ್ನು ಎಲ್ಲ ಸ್ಪರ್ಧಾರ್ಥಿಗಳು ಪಡೆದುಕೊಳ್ಳಬೇಕೆಂದು ಸಂಸ್ಥಾಪಕ ಅಧ್ಯಕ್ಷ ಎಂ.ಎಸ್. ಹುಲ್ಲೂರ ತಿಳಿಸಿದ್ದಾರೆ.
ಶಿಕ್ಷಣದಿಂದ ಮಕ್ಕಳನ್ನು ವಂಚಿತರನ್ನಾಗಿಸಬಾರದು: ಬುರುಡಿ
ಲಕ್ಷ್ಮೇಶ್ವರ: ವಿದ್ಯಾರ್ಥಿಗಳಿಗೆ ಉನ್ನತ ವಿಚಾರಗಳನ್ನು ತಿಳಿಸಿಕೊಡುವ ಮೂಲಕ ಅವರನ್ನು ಈ ದೇಶದ ಸತ್ಪ್ರಜೆಯನ್ನಾಗಿ ರೂಪಿಸುವ ಗುರುತರ ಜವಾಬ್ದಾರಿ ಶಿಕ್ಷಕರ ಮೇಲಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ಎಸ್. ಬುರುಡಿ ಹೇಳಿದರು.
ಸಮೀಪದ ಒಡೆಯರ ಮಲ್ಲಾಪುರದಲ್ಲಿರುವ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಈಚೆಗೆ ಜರುಗಿದ ವಾರ್ಷಿಕೋತ್ಸವದಲ್ಲಿ ಮಾತನಾಡಿದರು. ಮಕ್ಕಳಿಗೆ ವೈಜ್ಞಾನಿಕವಾದ ರೀತಿಯಲ್ಲಿ ಶಿಕ್ಷಣದ ಬೋಧನೆ ನಡೆಯಬೇಕಾಗಿದೆ. ಜಗತ್ತು ಸಾಕಷ್ಟು ವೇಗವಾಗಿ ಆಧುನಿಕತೆಯತ್ತ ಹೆಜ್ಜೆ ಹಾಕುತ್ತಿರುವ ಸಂದರ್ಭದಲ್ಲಿ ಮೂಢನಂಬಿಕೆ ರಹಿತವಾದ ಶಿಕ್ಷಣ ನೀಡಬೇಕಾಗಿದೆ. ಮಕ್ಕಳಲ್ಲಿ ಸಂಕುಚಿತ ಮನೋಭಾವ ಬೆಳೆಸದೆ ರಾಷ್ಟ್ರಪ್ರೇಮ, ಜಾತ್ಯತೀತ ಗುಣ ಬೆಳೆಸಬೇಕು ಎಂದರು.
ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ಖಾಜಾಹುಸೇನ ಮುಧೋಳ ಮಾತನಾಡಿ, ಸರ್ಕಾರವು ಹಲವಾರು ಯೋಜನೆಗಳನ್ನು ಹಾಕಿಕೊಳ್ಳುವ ಮೂಲಕ ಮಕ್ಕಳಲ್ಲಿ ಎಲ್ಲ ರೀತಿಯ ಬೆಳವಣಿಗೆಗೆ ಪೂರಕವಾಗಿ ಸ್ಪಂದಿಸುತ್ತಿದೆ ಎಂದರು.
ಜಿಪಂ ಅಧ್ಯಕ್ಷೆ ಕಮಲವ್ವ ಸಜ್ಜನರ ಕಾರ್ಯಕ್ರಮ ಉದ್ಘಾಟಿಸಿದರು. ತಾಪಂ ಅಧ್ಯಕ್ಷೆ ಸುನಂದಮ್ಮ ಬಿದರಳ್ಳಿ, ತಾಪಂ ಉಪಾಧ್ಯಕ್ಷೆ ಶಾರದಾ ಕವಲೂರ, ಶಿಗ್ಲಿ ಗ್ರಾಪಂ ಅಧ್ಯಕ್ಷ ಡಿ.ವೈ. ಹುನಗುಂದ, ಗ್ರಾಪಂ ಸದಸ್ಯ ಪದ್ಮರಾಜ ಪಾಟೀಲ, ನೀಲಪ್ಪ ಪಶುಪತಿಹಾಳ, ಕೃಷ್ಣಾ ಬಿದರಳ್ಳಿ, ನಿಲೇಶ ಕಾಳೆ, ನರಗುಂದ ತಾಪಂ ಅಧ್ಯಕ್ಷ ಜಿ.ಎಸ್. ಆಡೆಪ್ಪನವರ, ಮಲ್ಲೇಶಪ್ಪ ಸಜ್ಜನರ, ಗದಗ-ಬೆಟಗೇರಿ ಮೊರಾರ್ಜಿ ದೇಸಾಯಿ ವಸತಿ ಶಾಲೆ ಪ್ರಾಚಾರ್ಯ ಡಿ.ಬಿ. ಅಡವಿ, ಸಿಆರ್‌ಪಿ ಎ.ಎಂ. ಮಠದ ಇದ್ದರು. ಎಂ.ಎಫ್. ತಳಗಡೆ ಶಾಲಾ ವರದಿ ವಾಚಿಸಿದರು. ಸುನೀಲ ತಳ್ಳಳ್ಳಿ ಸ್ವಾಗತಿಸಿದರು. ಎನ್.ಕೆ. ಹತ್ತಿಕಾಳ ನಿರೂಪಿಸಿದರು. ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿದವು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.