ಸುದ್ದಿ ಸಂಕ್ಷೇಪ
ಸೌಜನ್ಯದ ಸೇವೆ ಮೂಲಕ ಜನಸ್ನೇಹಿ ಕಾರ್ಯ ಮಾಡಿ
ಗದಗ: ಪ್ರಾಮಾಣಿಕ ಹಾಗೂ ಸೌಜನ್ಯದ ಸೇವೆಯ ಮೂಲಕ ಇಲಾಖೆಯ ಕಾರ್ಯದಲ್ಲಿ ಜನಸ್ನೇಹಿ ವ್ಯಕ್ತಿತ್ವ ರೂಪಿಸಲು ಅಧಿಕಾರಿಗಳು ಪ್ರಾಮುಖ್ಯ ನೀಡಲಿ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಎಸ್.ಡಿ. ಶರಣಪ್ಪ ಹೇಳಿದರು.
ಅವರು ಈಚೆಗೆ ನಗರದ ಕೆ.ಎಚ್. ಪಾಟೀಲ ಸಭಾಭವನದಲ್ಲಿ ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ಆಯೋಜಿಸಲಾಗಿದ್ದ ಬೀಳ್ಕೊಡುವ ಸಮಾರಂಭದಲ್ಲಿ ಮಾತನಾಡಿದರು.
ಜನಸಾಮಾನ್ಯರಲ್ಲಿ ಇಲಾಖೆ ಕುರಿತು ಅಭಿಪ್ರಾಯ ಭಿನ್ನತೆ ಇದ್ದು, ಅದನ್ನು ಹೋಗಲಾಡಿಸಿ, ಇಲಾಖೆ ಸಾಮಾನ್ಯರ ಪರ ಕಳಕಳಿ ಹೊಂದಿರುವುದನ್ನು ಸಾಬೀತುಪಡಿಸುವ ಕಾರ್ಯ ಸಿಬ್ಬಂದಿಯಿಂದ ನಡೆಯಬೇಕಿದೆ. ಇಲಾಖೆ ಕಾರ್ಯದಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ಕಿರಿಯ ಅಧಿಕಾರಿಗಳ ಶ್ರಮ ಹಾಗೂ ಸಹಕಾರದಿಂದಾಗಿ ನನ್ನ ಅಧಿಕಾರ ಅವಧಿಯಲ್ಲಿ ತಂಬಾಕು ನಿಷೇಧ ಕಾರ್ಯಕ್ಕೆ ರಾಷ್ಟ್ರ ಮಟ್ಟದ ಹಾಗೂ ಜಿಲ್ಲೆಯ 3 ಪೊಲೀಸ್ ಠಾಣೆಗಳಿಗೆ ಅಂತರಾಷ್ಟ್ರೀಯ ಮಾನದಂಡದ ಪ್ರಶಸ್ತಿ ದೊರೆತಿದ್ದು ಸಂತೃಪ್ತಿಗೆ ಕಾರಣವಾಗಿದೆ ಎಂದರು.
ಡಿವೈಎಸ್ಪಿ ವಿಜಯ ಡಂಬಳ, ಸಿಪಿಐ ಆರ್.ಎಸ್. ಬೆಂತೂರ, ಆರ್ಪಿಐ ಟಿ.ಫೈಜುದ್ದೀನ್, ಪಿಎಸ್ಐ ಡಿ.ಬಿ. ಪಾಟೀಲ, ಪತ್ರಕರ್ತ ಶಿವಕುಮಾರ ಕುಷ್ಟಗಿ ಮುಂತಾದವರು ಮಾತನಾಡಿದರು. ಇಲಾಖೆ ಹಾಗೂ ನಗರ ಸೇರಿದಂತೆ ವಿವಿಧ ಪಟ್ಟಣಗಳಿಂದ ಆಗಮಿಸಿದ ಸಂಘ-ಸಂಸ್ಥೆಗಳ ಪ್ರತಿನಿಧಿಗಳಿಂದ ಎಸ್ಪಿ ದಂಪತಿಗಳನ್ನು ಸನ್ಮಾನಿಸಿ ಬೀಳ್ಕೊಡಲಾಯಿತು. ಯಾಳನಿ ಶರಣಪ್ಪ, ವಿನುತ ಡಂಬಳ ಉಪಸ್ಥಿತರಿದ್ದರು. ಜಿಲ್ಲೆಯ ಇಲಾಖೆ ಅಧಿಕಾರಿಗಳು ಹಾಗೂ ಪೊಲೀಸ್ ಸಿಬ್ಬಂದಿ ಪಾಲ್ಗೊಂಡಿದ್ದರು. ವಿಜಯ ಡಂಬಳ ಸ್ವಾಗತಿಸಿದರು. ದತ್ತಪ್ರಸನ್ನ ಪಾಟೀಲ ನಿರೂಪಿಸಿದರು. ಪ್ರೊಬೇಷನರಿ ಡಿವೈಎಸ್ಪಿ ಬಿ.ಎಸ್. ನೇಮಗೌಡ ವಂದಿಸಿದರು.
ಗ್ರಾಮೀಣಾಭಿವೃದ್ಧಿಗೆ ಆದ್ಯತೆ
ಲಕ್ಷ್ಮೇಶ್ವರ: ಗ್ರಾಮಾಂತರ ಪ್ರದೇಶಗಳ ರಸ್ತೆಗಳ ಸುಧಾರಣೆಗೆ ನಮ್ಮ ಸರ್ಕಾರ ಹೆಚ್ಚಿನ ಮಹತ್ವ ನೀಡಿದ್ದು, ಗ್ರಾಮಗಳು ಅಭಿವೃದ್ಧಿಯಾದರೆ ದೇಶದ ಅಭಿವೃದ್ಧಿಯಾದಂತೆ ಎಂಬುದು ಗಾಂಧೀಜಿಯವರ ಅಭಿಪ್ರಾಯವಾಗಿತ್ತು ಎಂದು ಶಾಸಕ ರಾಮಕೃಷ್ಣ ದೊಡ್ಡಮನಿ ಹೇಳಿದರು.
ಸಮೀಪದ ಅಂಕಲಿ ಗ್ರಾಮದಲ್ಲಿ ಸೋಮವಾರ ಏರ್ಪಡಿಸಿದ್ದ ಅಂಕಲಿ ಹಾಗೂ ಸೂರಣಗಿ ಗ್ರಾಮದ ರಸ್ತೆ ಕಾಮಗಾರಿಗೆ ಪೂಜೆ ನೆರವೇರಿಸಿ ಅವರು ಮಾತನಾಡಿದರು. ಸರ್ಕಾರ ರೈತರಿಗಾಗಿ ಅನೇಕ ಉಪಯುಕ್ತ ಯೋಜನೆಗಳನ್ನು ಅನುಷ್ಠಾನಗೊಳಿಸಿದ್ದು, ಆ ಯೋಜನೆಗಳ ಪ್ರಯೋ ಜನ ಪಡೆದುಕೊಂಡು ತಮ್ಮ ಕೃಷಿ ಚಟುವಟಿಕೆ ಹಾಗೂ ಉತ್ಪನ್ನಗಳನ್ನು ಹೆಚ್ಚಿಕೊಳ್ಳಬಹುದಾಗಿದೆ. ರಸ್ತೆಗಳನ್ನು ಹಾಗೂ ಇತರೆ ಕಾಮಗಾರಿಗಳನ್ನು ಮಾಡುವಾಗ ಗ್ರಾಮಸ್ಥರ ಸಲಹೆ ಪಡೆದು ಗುತ್ತಿಗೆದಾರರು ಕೆಲಸ ಮಾಡಬೇಕು ಎಂದು ಹೇಳಿದರು. ಬಾಬಣ್ಣ ಮುಂಡವಾಡ, ಗ್ರಾಪಂ ಸದಸ್ಯ ಸಹದೇವಪ್ಪ ಹರಿಜನ, ಪ್ರಕಾಶ ಚೌಡಾಳ, ಮುದಕಪ್ಪ ಓಲೇಕಾರ, ಪ್ರಶಾಂತಗೌಡ ಪಾಟೀಲ, ದೇವೇಂದ್ರಪ್ಪ, ಎಸ್.ಎಸ್. ಸುಗ್ನಳ್ಳಿ, ಮಹೇಶ ಕೋಡಬಾಳ, ಸಬ್ನೀಸ್, ತಿಮ್ಮನಗೌಡ ಪಾಟೀಲ, ಮುತ್ತಣ್ಣ ಕಬ್ಬೇರಹಳ್ಳಿ, ಯಲ್ಲಪ್ಪ ಕಮ್ಮಾರ, ದ್ಯಾಮಪ್ಪ ಕಟ್ಟಿ, ಚನ್ನಬಸಪ್ಪ ಸೊನ್ನದ, ಮುತ್ತಣ್ಣ ಪಾಟೀಲ, ವಿಭಾಗೀಯ ಎಂಜಿನಿಯರ್ ಎಲ್.ಎ. ಬಾಳಿ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

