ಗದಗ

ರಕ್ತದಾನ ಶ್ರೇಷ್ಠದಾನ: ಶಿರೋಳ

Published On :

ಗಜೇಂದ್ರಗಡ: ದಾನಗಳಲ್ಲಿ ರಕ್ತದಾನ ಶ್ರೇಷ್ಠವಾಗಿದೆ. ಮತ್ತೊಂದು ಜೀವನ ಬದುಕಿಸುವ ಮಾನವೀಯ ಕಾರ್ಯವಾದ    ರಕ್ತದಾನಕ್ಕೆ ಎಲ್ಲರೂ ಮುಂದಾ ಗಬೇಕು ಎಂದು ಪ್ರಾಚಾರ್ಯ ಉಮೇಶ ಶಿರೋಳ ಹೇಳಿದರು.
ಸ್ಥಳೀಯ ಎಸ್.ಎಂ. ಭೂಮರಡ್ಡಿ ಪದವಿ ಮಹಾವಿದ್ಯಾಲಯದಲ್ಲಿ ಯುವ ರೆಡ್‌ಕ್ರಾಸ್ ಘಟಕ, ಸರ್ಕಾರಿ ಆಸ್ಪತ್ರೆ ವತಿಯಿಂದ ವಿದ್ಯಾರ್ಥಿಗಳಿಗೆ ಉಚಿತ ರಕ್ತ ತಪಾಸಣಾ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು. ಒಂದು ಯೂನಿಟ್ ರಕ್ತ ಮೂರು ಜೀವಗಳನ್ನು ಉಳಿಸಬಲ್ಲದು. ಆದುದರಿಂದ ರಕ್ತದಾನಕ್ಕೆ ಜೀವದಾನ ಶಕ್ತಿ ಇದೆ. ಜತೆಗೆ ರಕ್ತದಾನದಿಂದ ದೇಹ ಆರೋಗ್ಯವಾಗಿರುತ್ತದೆ. ದೇಶದಲ್ಲಿ ಅದೆಷ್ಟೋ ಮಂದಿಗೆ ರಕ್ತದ ಅವಶ್ಯಕತೆ ಇದೆ. ಅಪಘಾತ, ಅವಘಡ ಸಂಭವಿಸಿದವರು, ಕಾಯಿಲೆಯಿಂದ ಬಳಲುತ್ತಿರುವರು ಯೂನಿಟ್ ರಕ್ತಕ್ಕಾಗಿ ಒದ್ದಾಡುತ್ತಿದ್ದಾರೆ. ಇಂಥವರಿಗೆ ರಕ್ತದಾನ ಮಾಡಬೇಕಾಗಿದೆ ಎಂದರು. ಯುವ ರೆಡ್‌ಕ್ರಾಸ್ ಘಟಕ ಅಧಿಕಾರಿ ಬಿ.ವಿ. ಮುನವಳ್ಳಿ ಮಾತನಾಡಿ, ವಿಶ್ವದ ಅರ್ಧದಷ್ಟು ರಾಷ್ಟ್ರದಲ್ಲಿ ರಕ್ತದ ಕೊರತೆ ಇದೆ. ಇದನ್ನು ಮನಗಂಡು ರಕ್ತದಾನ ಮಾಡಲು ಮುಂದಾಗಬೇಕು ಎಂದರು.
ಇದೇ ಸಂದರ್ಭದಲ್ಲಿ ರೇಖಾ ಅವರು ರಕ್ತದ ಗುಂಪುಗಳ ಮಹತ್ವ ತಿಳಿಸಿದರು. ಸರ್ಕಾರಿ ಆಸ್ಪತ್ರೆ ಕ್ಷಕಿರಣ ತಜ್ಞ ಆನಂದ ಹುರಕಡ್ಲಿ, ಹಿರಿಯ ಪ್ರಯೋಗಶೀಲ ತಜ್ಞ ಶಂಕರಗೌಡ ಪಾಟೀಲ, ಶರಣಬಸವ ವಾಲಿ, ಶಶಿಕಾಂತ ಮಠದ ಮಾತನಾಡಿದರು. ಲಿಂಗಪ್ಪ ವದ್ನಾಳ, ಉಪನ್ಯಾಸಕ ಎಸ್.ಎಸ್. ಚುಂಚಾ, ಶಿವರಾಜ ಬಂಡಿಹಾಳ, ನೇತ್ರಾವತಿ ಅಂಗಡಿ, ರಾಜೇಶ್ವರಿ ರಾಮದುರ್ಗ, ಎಸ್.ಎಚ್. ಪವಾರ, ಆರ್.ಕೆ. ಚವ್ಹಾಣ, ಟಿ.ಟಿ. ಗೊಂಧಳೆ, ಎಲ್.ಕೆ. ಹಿರೇಮಠ, ವೈ.ಎಫ್. ಗೌಡರ, ಉಮೇಶ ಶೀಲವಂತರ, ಎನ್.ಕೆ.ಅಂಗಡಿ, ಎಸ್.ಎಸ್. ಕಿನ್ನಾಳ, ಆರ್.ಎನ್. ರಾಮದುರ್ಗ, ಬಸವರಾಜ, ಪ್ರದೀಪ ಕರ್ಣಿ, ಪಿ.ಎಚ್. ಪಲ್ಲೇದ ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.