ಗದಗ

ಇಂದು ಮಹಿಳಾ ಸಮಾವೇಶ

Published On :

ನರಗುಂದ: ಪಟ್ಟಣ ಪತ್ರಿವನ ಮಠದಲ್ಲಿ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ರೋಣ, ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಮತ್ತು ಹೇಮಾವತಿ ಹೆಗ್ಗಡೆಯವರು ಕೃಪಾಶೀರ್ವಾದದೊಂದಿಗೆ ನರಗುಂದ ವಲಯ ಮಟ್ಟದ ಪ್ರಗತಿ ಬಂಧು ಸ್ವ-ಸ್ವಹಾಯ ಸಂಘಗಳ ಒಕ್ಕೂಟಗಳ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ಮತ್ತು ಜ್ಞಾನವಿಕಾಸ ಮಹಿಳಾ ಸಮಾವೇಶ ಮಾ. 8ರಂದು ಬೆಳಗ್ಗೆ 11ಕ್ಕೆ ಜರುಗಲಿದೆ. ಪತ್ರಿವನಮಠದ ಗುರು ಸಿದ್ದವೀರ ಶಿವಯೋಗಿ ಶ್ರೀಗಳು, ಶಾಸಕ ಬಿ.ಆರ್. ಯಾವಗಲ್, ಈರಮ್ಮ ಹಿರೇಮಠ, ಮಾಜಿ ಸಚಿವ ಸಿ.ಸಿ.ಪಾಟೀಲ, ಜಯಂತಿ ಪೂಜಾರ, ಸಿಪಿಐ ಎಸ್.ಆರ್. ಪಾಟೀಲ, ರೋಣ-ನರಗುಂದ ಯೋಜನಾಧಿಕಾರಿ ಕೃಷ್ಣ ಟಿ, ಪುರಸಭೆ ಸದಸ್ಯ ಪ್ರಕಾಶ ಪಟ್ಟಣಶಟ್ಟಿ, ಸಿ.ಬಿ. ಪಾಟೀಲ, ಬಸವರಾಜ ಸಾಬಳೆ, ಈಶ್ವರಿ ವಿವಿಯ ಸಂಚಾಲಕಿ ಬ್ರಹ್ಮಕುಮಾರಿ ಪ್ರಭಾ, ನಿಶಾಂತ ಘರೀಫ್, ಜ್ಯೋತಿ ಉಪ್ಪಾರ, ಈಶ್ವರ ವಿ. ಪದ್ಮಾವತಿ ಗೌಡ ಹಾಗೂ ಸಂಸ್ಥೆ ಸದಸ್ಯರು ಭಾಗವಹಿಸರು ಎಂದು ಪ್ರಕಟಣೆ ತಿಳಿಸಿದೆ.
ಇಂದು ವಿಶ್ವ ಮಹಿಳಾ ದಿನಾಚರಣೆ
ಬೆಟಗೇರಿ: ಇಲ್ಲಿಯ ಮಹಾರಾಣಾ ಪ್ರತಾಪಸಿಂಹ ಶಿಕ್ಷಣ ಸಂಸ್ಥೆಯ ಸಂಯುಕ್ತ ಪದವಿಪೂರ್ವ ಮಹಾವಿದ್ಯಾಲಯದಲ್ಲಿ ಮಾ. 8ರಂದು ಬೆಳಗ್ಗೆ 9ಕ್ಕೆ ವಿಶ್ವ ಮಹಿಳಾ ದಿನಾಚರಣೆ ಅಂಗವಾಗಿ ಸಾಲುಮರದ ತಿಮ್ಮಕ್ಕ ವಿಶೇಷ ವೇದಿಕೆಯಲ್ಲಿ ಬೆಟಗೇರಿಯ ಸ್ವಾತಂತ್ರ್ಯ ಹೋರಾಟಗಾರ ದಿ. ಶಿವಶಮಕ್ರಪ್ಪ ಜೂಜಗಾರ ಅವರ ಧರ್ಮ ಪತ್ನಿ ಭಾಗಿರಥಿಬಾಯಿ (ಗೌರಮ್ಮ) ಜೂಜಗಾರ ಹಾಗೂ ಬಡ ಕುಟುಂಬದಲ್ಲಿ ಸಾಧನೆಗೈದ ಗಾಯತ್ರಿ ಅಮ್ರದ ಅವರನ್ನು ಸನ್ಮಾನಿಸುವ ಮೂಲಕ ವಿಶ್ವ ಮಹಿಳಾ ದಿನ ಆಚರಿಸಲಾಗುವುದು. ಪ್ರಾಚಾರ್ಯ ವೈ.ಆರ್. ಹಿರೇಗೌಡರ ಅಧ್ಯಕ್ಷತೆ ವಹಿಸುವರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.