ಗದಗ

ಕೇಂದ್ರ ಸ್ಥಾನದಲ್ಲಿರಲು ಅಧಿಕಾರಿಗಳಿಗೆ ಸೂಚನೆ

Published On :

ಗದಗ: ಜಿಲ್ಲೆಯ ಲೋಕಸಭೆ ಚುನಾವಣೆಗೆ ಸಂಬಂಧಿತ ವಿವಿಧ ಇಲಾಖೆ ಜಿಲ್ಲಾ ಮುಖ್ಯಸ್ಥರು ಸಹಾಯ ಚುನಾವಣಾಧಿಕಾರಿಗಳು ವಿವಿಧ ಪರಿಶೀಲನಾ ತಂಡಗಳ ಅಧಿಕಾರಿ ಸಿಬ್ಬಂದಿ ಸೆಕ್ಷನ್ ನೋಡಲ್ ಅಧಿಕಾರಿಗಳು ತಮ್ಮ ಲಿಖಿತ ಪರವಾನಗಿ ಇಲ್ಲದೇ ಕೇಂದ್ರ ಸ್ಥಾನ ಬಿಡದಿರಲು ಜಿಲ್ಲಾಧಿಕಾರಿ ಎನ್.ಎಸ್. ಪ್ರಸನ್ನಕುಮಾರ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಲೋಕಸಭಾ ಚುನಾವಣೆ ಕುರಿತಂತೆ ಜಿಲ್ಲಾಡಳಿತ ಕೈಕೊಳ್ಳಬೇಕಾದ ಕ್ರಮಗಳ ಚುನಾವಣಾ ವಿಷಯಗಳ ಸಂಬಂಧಿತ ವಿವಿಧ ವೆಚ್ಚಗಳ ಸದ್ಯದ ದರ ಪರಿಷ್ಕರಿಸುವ ಪೂರ್ವಭಾವಿ ಸಿದ್ಧತಾ ವಿಷಯಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಜಿಲ್ಲೆಯ ರಾಜಕೀಯ ಪಕ್ಷಗಳ ಸಭೆ ಸಮಾರಂಭಗಳಿಗೆ ಸಾರ್ವಜನಿಕ ಸ್ಥಳ ಬಾಡಿಗೆಗೆ ನೀಡುವಾಗ ಜಿಲ್ಲಾಧಿಕಾರಿಗಳ ಮುಖಾಂತರವೇ ಪರವಾನಗಿ ಕೊಡಿಸಬೇಕು. ವಾಹನಗಳ ವೆಚ್ಚ ಕುರಿತಂತೆ ವಾಕರಸಾ ಸಂಸ್ಥೆ, ಪ್ರಾದೇಶಿಕ ಅಧಿಕಾರಿ ಆಹಾರ ಇಲಾಖೆ ಉಪನಿರ್ದೇಶಕರ ಉಪ ಸಮಿತಿ ಸಭೆ ಸೇರಿ ವಿವಿಧ ವೆಚ್ಚಗಳ ನಿಷ್ಕರ್ಷ ಮಾಡಿ ಅದರ ಪಟ್ಟಿ ಸಲ್ಲಿಸಲು ರೀತಿ ಶ್ಯಾಮಿಯಾನ, ಧ್ವನಿವರ್ಧಕ ವೇದಿಕೆ, 21 ಚೆಕ್ಪೋಸ್ಟ್ ವೆಚ್ಚಗಳ ದರ ನಿಗದಿ ಕುರಿತಂತೆ ಅಪರ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಉಪಸಮಿತಿ ರಚಿಸಿ ತಕ್ಷಣ ದರಪಟ್ಟಿ ನಿಗದಿಪಡಿಸಿ ನೀಡಲು ಸೂಚಿಸಿದರು.
ಪ್ರತಿಯೊಬ್ಬ ವಿಧಾನಸಭಾ ಕ್ಷೇತ್ರದ ಸಹಾಯಕ ಚುನಾವಣಾಧಿಕಾರಿಗಳು ತಮ್ಮ ಕಚೇರಿಯಲ್ಲಿ ಸಹಾಯವಾಣಿ ಸ್ಥಾಪಿಸಿ ಮತದಾರರಿಂದ ಬರುವ ದೂರು, ಸಮಸ್ಯೆಗಳ ಕುರಿತು ತಕ್ಷಣ ನಿರಂತರವಾಗಿ ಸ್ಪಂದಿಸಬೇಕು. ಭಾನುವಾರ ಬಿಟ್ಟುಹೋದ ಮತದಾರರ ಸೇರ್ಪಡೆ ತಿದ್ದುಪಡಿ ವರ್ಗಾವಣೆ ಹಾಗೂ ತೆಗೆದು ಹಾಕುವಿಕೆಗೆ ವಿಶೇಷ ಕಾರ್ಯಕ್ರಮ ಜರುಗಿಸಲಾಗುತ್ತಿದೆ. ಬೂತ್ ಲೆವೆಲ್ ಅಧಿಕಾರಿಗಳು ಅಂದು ಬೆಳಗ್ಗೆ 9ರಿಂದ ಕಾರ್ಯ ಪ್ರಾರಂಭಿಸಬೇಕು. ಈ ಕುರಿತು ಅಂದು ಸ್ವೀಕರಿಸಿದ ಅರ್ಜಿಗಳ ವಿವರಗಳ ವರದಿಯನ್ನು ಜಿಲ್ಲಾಧಿಕಾರಿ ಕಾರ್ಯಾಲಯಕ್ಕೆ ಸಲ್ಲಿಸಬೇಕು. ನಂತರವೂ ಮಾ. 16ರ ವರೆಗೆ ಮತದಾರ ಸೇರ್ಪಡೆ, ತಿದ್ದುಪಡಿ ಮುಂದುವರಿಯಲಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.
ತಮ್ಮ ವ್ಯಾಪ್ತಿಯಲ್ಲಿ ಚುನಾವಣೆ ನೀತಿ ಉಲ್ಲಂಘಿಸುವ ಎಲ್ಲ ಬ್ಯಾನರ್ಸ್, ಪೋಸ್ಟರ್ಸ್ ತಕ್ಷಣದಿಂದಲೇ ತೆಗೆಸಬೇಕು. ಸಹಾಯಕ ಚುನಾವಣಾಧಿಕಾರಿಗಳು ತಮ್ಮ ವ್ಯಾಪ್ತಿಯ ಮತಗಟ್ಟೆಗಳನ್ನು ಸಮಗ್ರವಾಗಿ ಪರಿಶೀಲಿಸಿ ಮತದಾನದ ದಿನ ನೀರು, ನೆರಳಿನ ವ್ಯವಸ್ಥೆ ಇರುವಂತೆ ನೋಡಿಕೊಳ್ಳಬೇಕು ಎಂದರು. ಅಪರ ಜಿಲ್ಲಾಧಿಕಾರಿ ನಾಗರಾಜ ವಿವಿಧ ವಿಷಯಗಳ ಕುರಿತು ಮಾಹಿತಿ ನೀಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.