ಗದಗ

ಜ್ಯೋತಿ, ಕಿರಣ ಪುರಸಭೆಗೆ ಅಧ್ಯಕ್ಷ, ಉಪಾಧ್ಯಕ್ಷ

Published On :

ನರಗುಂದ: ಜಿಲ್ಲೆಯಲ್ಲಿ ಹೆಚ್ಚಿನ ಕುತೂಹಲ ಕೆರಳಿಸಿದ್ದ ನರಗುಂದ ಪುರಸಭೆ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ ಕಡೆಗೆ ಕಾಂಗ್ರೆಸ್ ಬಂಡಾಯ ಅಭ್ಯರ್ಥಿ ಜ್ಯೋತಿ ಪತ್ರಿ ಬಿಜೆಪಿ ಸದಸ್ಯರ ಬೆಂಬಲದ ಮೂಲಕ ಅವಿರೋಧವಾಗಿ ಆಯ್ಕೆ ಇನ್ನು ಉಪಾಧ್ಯಕ್ಷ ಸ್ಥಾನಕ್ಕೆ ಹೆಚ್ಚು ಸ್ಫರ್ಧೆ ಇಲ್ಲದ್ದರಿಂದ ಬಿಜೆಪಿಯ ಕಿರಣ ಮುಧೋಳ ಅವರು ಅವಿರೋಧವಾಗಿ ಆಯ್ಕೆವಾಗುವ ಮೂಲಕ ಆಡಳಿತ ಪಕ್ಷದ ಶಾಸಕರಿಗೆ ಭಾರಿ ಮುಖಭಂಗವಾಯಿತು.
ಪಟ್ಟಣದ ಪುರಸಭೆ ಆವರಣದಲ್ಲಿ ಶುಕ್ರವಾರ ಜರುಗಿದ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಕ್ಕೆ ಪ್ರತಿಷ್ಠೆಯ ಪ್ರಶ್ನೆ ಆಗಿತ್ತು. ಹೇಗಾದರೂ ಮಾಡಿ ಹಾಲಿ-ಮಾಜಿ ನಾಯಕರು ಅಧಿಕಾರ ಪಡೆದುಕೊಳ್ಳುವುದು ಭಾರಿ ಸವಾಲು ಆಗಿತ್ತು. ಏಕೆಂದರೆ ಬಿಜೆಪಿ ಅಭ್ಯರ್ಥಿ ಶಾಂತವ್ವ ಬಜೆಂತ್ರಿ ಕಾಂಗ್ರೆಸ್ ಪಕ್ಷಕ್ಕೆ ಪಲಾಯನ ಆಗಿದ್ದರಿಂದ ಪುರಸಭೆ ಚುನಾವಣೆಯಲ್ಲಿ 23 ವಾರ್ಡ್ಗಳಲ್ಲಿ 12 ಸ್ಥಾನ ಗಳಿಸಿ ಬಿಜೆಪಿ ಸರಳವಾಗಿ ಅಧಿಕಾರದ ಗದ್ದುಗೆ ಏರಬಹುದಿತ್ತು.
ಆದರೆ, ಶಾಂತವ್ವ ಪಲಾಯನ ನೀತಿ ಅನುಸರಿಸಿದ್ದರಿಂದ 7-8 ತಿಂಗಳಿಂದ ಪುರಸಭೆ ಆಡಳಿತ ಗದ್ದುಗೆ ಏರಲು ಎರಡು ಪಕ್ಷಗಳು ಭಾರಿ ಪೈಪೋಟಿ ನಡೆಸಿದ್ದವು, ಕೋರ್ಟ್ನಲ್ಲಿ ಮೀಸಲಾತಿ ಸರಿಪಡಿಸಿ ಆಯ್ಕೆ ಸಮಯ ನಿಗದಿ ಆದ ತಕ್ಷಣವೇ ಎರಡು ಪಕ್ಷದ ನಾಯಕರು ಜಾಗೃತರಾಗಿ ತಮ್ಮ ಪಕ್ಷಗಳನ್ನು ಅಧಿಕಾರಕ್ಕೆ ತರಲು ಯೋಜನೆ ರೂಪಿಸಿಕೊಂಡಾಗ ಅಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲಾಗಿದ್ದನ್ನು ಹಿಂದುಳಿದ ವರ್ಗದ ಮಹಿಳೆ ಶಾಂತವ್ವ ಬಜೆಂತ್ರಿಯನ್ನು ಕಾಂಗ್ರೆಸ್ನವರು ಅಧ್ಯಕ್ಷೆಯನ್ನಾಗಿ ಮಾಡಲು ಹೊರಟರು.
ಕಾಂಗ್ರೆಸ್ನ ಜ್ಯೋತಿ ಪತ್ರಿ ನಮಗೆ ಸರ್ಕಾರ ಮೀಸಲಾತಿ ನೀಡಿದೆ. ಅದು ಸಾಮಾನ್ಯರಲ್ಲದವರಿಗೆ ನೀಡುತ್ತಿರುವುದರಿಂದ ತೀವ್ರ ಆಕ್ರೋಶಗೊಂಡು ಬಂಡಾಯ ಕಾಂಗ್ರೆಸ್ ಅಭ್ಯರ್ಥಿಯಾಗಿ ಬಿಜೆಪಿ ಸದಸ್ಯರ ಬೆಂಬಲದೊಂದಿಗೆ ನಾಮಪತ್ರ ಸಲ್ಲಿಸಿದರು. ನಂತರ ಬಿಜೆಪಿ ಸದಸ್ಯ ಕಿರಣ ಮುಧೋಳೆ ಉಪಾಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದಾಗ ಕಾಂಗ್ರೆಸ್ಸಿನವರು ಕೂಡಾ ನಾಮಪತ್ರ ಸಲ್ಲಿಸಿದರು. ಆದರೆ, ಕೊನೆ ಕ್ಷಣದಲ್ಲಿ ಕಾಂಗ್ರೆಸ್ಸಿನ ಸದಸ್ಯರು ಬಿಜೆಪಿ ಕಡೆ ವಾಲಿದ್ದು ಕಂಡು ಕಾಂಗ್ರೆಸ್ ನಾಯಕರು ತಮಗೆ ಹಿನ್ನಡೆ ಆಗುವುದು ಮನಗಂಡು ತಮ್ಮ ಪಕ್ಷದಿಂದ ನಾಮಪತ್ರ ಸಲ್ಲಿಸಿದವರಿಂದ ನಾಮಪತ್ರ ಹಿಂದೆ ಪಡೆದರು. ಇದರಿಂದ ಬಂಡಾಯ ಅಭ್ಯರ್ಥಿ ಜ್ಯೋತಿ ಪತ್ರಿ ಅಧ್ಯಕ್ಷೆಯಾಗಿ, ಉಪಾಧ್ಯಕ್ಷರಾಗಿ ಕಿರಣ ಮುಧೋಳ ಅವರು ಅವಿರೋಧ ಆಯ್ಕೆಯಾದರು.
ಆಡಳಿತ ಪಕ್ಷಕ್ಕೆ ಹಿನ್ನೆಡೆ: 30 ವರ್ಷ ರಾಜಕೀಯ ಅನುಭವಿರುವ ಶಾಸಕ ಬಿ.ಆರ್. ಯಾವಗಲ್ಲರು ರಾಜ್ಯದಲ್ಲಿ ನಮ್ಮದೇ ಪಕ್ಷ ಅಧಿಕಾರದಲ್ಲಿದೆ, ಹೇಗಾದರೂ ಮಾಡಿ ಪುರಸಭೆ ಅಧಿಕಾರ ಹಿಡಿಯಬೇಕು ಎಂದು ಮಾಡಿದ್ದ ಎಲ್ಲ ಪ್ರಯತ್ನಗಳು ವಿಫಲವಾಗಿ ಆಡಳಿತ ಪಕ್ಷಕ್ಕೆ ತೀವ್ರ ಹಿನ್ನಡೆಯಾಯಿತು.
ಪ್ರಜೆಗಳ ನಿರ್ಧಾರವೇ ಅಂತಿಮ: ಅವಿರೋಧವಾಗಿ ಆಯ್ಕೆಯಾದ ಅಧ್ಯಕ್ಷ-ಉಪಾಧ್ಯಕ್ಷರನ್ನು ಮಾಜಿ ಸಚಿವ ಸಿ.ಸಿ. ಪಾಟೀಲ ಅಭಿನಂದಿಸಿ ಸುದ್ದಿಗಾರರೊಂದಿಗೆ ಮಾತನಾಡಿ, ಪಟ್ಟಣದ ಜನತೆ ಬಿಜೆಪಿಗೆ ಬಹುಮತ ನೀಡಿದರೂ ಕೂಡ ಅದನ್ನು ಕಸಿದು ಶಾಸಕ ಬಿ.ಆರ್. ಯಾವಗಲ್ಲ ಪುರಸಭೆಯನ್ನು ತಮ್ಮ ವಾಮಮಾರ್ಗದ ಮೂಲಕ ಅಧಿಕಾರ ಪಡೆಯುವ ಕುತಂತ್ರ ಮಾಡಿದ್ದರು. ಇದು ಅವರಂಥ ಹಿರಿಯ ರಾಜಕಾರಣಿಗಳಿಗೆ ಶೋಭೆ ತರುವಂತಹದ್ದಲ್ಲ. ಆದರೂ ಅವರು ಈ ರೀತಿ ನಡೆದುಕೊಂಡಿದ್ದಕ್ಕೆ ಜನತೆಯೇ ಅವರಿಗೆ ಸೂಕ್ತ ತೀರ್ಮಾನ ನೀಡಿದ್ದಾರೆ ಎಂದರು.
ಮುಗಿಲು ಮುಟ್ಟಿದ ಹರ್ಷ: ಯಾವ ಪಕ್ಷ ಅಧಿಕಾರಕ್ಕೆ ಬರುತ್ತದೆ ಎನ್ನುವ ಕುತೂಹಲ ಎಲ್ಲರಲ್ಲಿ ಮನೆ ಮಾಡಿತ್ತು. ಆದರೆ, ಗೆಲವು ಬಿಜೆಪಿಯದ್ದು ಎಂದು ಗೊತ್ತಾಗುತ್ತಿದ್ದಂತೆ ಕಾರ್ಯಕರ್ತರು ಜೋರಾಗಿಯೇ ವಿಜಯೋತ್ಸವ ಆಚರಿಸಿದರು. ವಿಜಯೋತ್ಸವದಲ್ಲಿ ಸಂಸದ ಪಿ.ಸಿ. ಗದ್ದಗೌಡರ, ಪುರಸಭೆ ಸದಸ್ಯ ಶಿವಾನಂದ ಮುತ್ತವಾಡ, ವಾಸು ಜೋಗಣ್ಣವರ, ಪ್ರಕಾಶ ಪಟ್ಟಣಶಟ್ಟಿ, ಚಂದ್ರಶೇಖರ ಕೋಟಿ, ಚಂದ್ರು ಪವಾರ, ಉಮೇಶ ಕುಡನ್ನವರ, ಸಿ.ಬಿ.ಪಾಟೀಲ, ಎಸ್.ಆರ್. ಪಾಟೀಲ, ನಾಗಪ್ಪ ನವಲಗುಂದ, ಮಹೇಶ ಬಡಿಗೇರ, ಸುರೇಶ ಸವದತ್ತಿ, ರಫೀಕ್ ಧಾರವಾಡ, ಸಾವತ್ರಿ ಹಟ್ಟಿ, ರೇಣುಕಾ ಕೋರಿ, ನೇತ್ರಾವತಿ ಪೂಜಾರ, ಬಸಣ್ಣವ್ವ ಪಿಡ್ಡನಾಯ್ಕರ, ದೇವರಡ್ಡಿ ವಂಕರಡ್ಡಿಯವರ, ಮುತ್ತು ಜ್ಞಾನೋಪಂತ, ಕಾಶೀದ ಸಂಭಾಜಿ, ಪುರಸಭೆ ಅಧಿಕಾರಿ ಎಸ್. ರಾಜಶೇಖರ್, ಸಿ.ಎಲ್. ನಾಯಕ ಇತರರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.