ಬಿಜೆಪಿ ಬೆಂಬಲಿತ ಅಭ್ಯರ್ಥಿ ಗೆಲವು: ಸಂತಸ
ಗದಗ: ತಾಲೂಕಿನ ಸೊರಟೂರು ಗ್ರಾಮ ಪಂಚಾಯಿತಿ 1ನೇ ವಾರ್ಡ್ನ ಉಪ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿ ಮಹಾದೇವಪ್ಪ ಅಡರಕಟ್ಟಿ ಆಯ್ಕೆಯಾಗಿದ್ದು, ಪಕ್ಷದ ಪ್ರಮುಖರು ಹಾಗೂ ಬೆಂಬಲಿಗರು ಗಾಂಧಿ ಸರ್ಕಲ್ನಲ್ಲಿ ಪಟಾಕಿ ಸಿಡಿಸಿ ಸಂತಸ ವ್ಯಕ್ತಪಡಿಸಿದರು.
ನಂತರ ಪಕ್ಷದ ಕಚೇರಿಯಲ್ಲಿ ಪಕ್ಷದ ಜಿಲ್ಲಾ ಉಸ್ತುವಾರಿ ಎಂ.ಎಸ್. ಕರಿಗೌಡರ ಮಾತನಾಡಿ, ಲೋಕಸಭೆ ಚುನಾವಣೆ ಘೋಷಣೆಯಾದ ಈ ದಿನ ಗ್ರಾಮ ಪಂಚಾಯಿತಿಗೆ ಪಕ್ಷ ಬೆಂಬಲಿತ ಅಭ್ಯರ್ಥಿ ಆಯ್ಕೆಯಾಗಿರುವುದು ಬರುವ ಲೋಕಸಭಾ ಚುನಾವಣೆಯಲ್ಲಿ ಪಕ್ಷ ಬಹುಮತ ಗಳಿಸುವುದರ ಮುನ್ಸೂಚನೆ ಆಗಿದೆ ಎಂದರು.
ಈ ಸಂದರ್ಭದಲ್ಲಿ ಎಸ್.ಎಂ. ಪಾಟೀಲ, ಎಂ.ಎಂ. ಹಿರೇಮಠ, ಬಸನಗೌಡ ಚಿಂಚಲಿ, ಶ್ರೀನಿವಾಸ ಹುಬ್ಬಳ್ಳಿ, ಬಸವರಾಜ ಸೀರ, ಆರ್.ಎಸ್. ಕಮ್ಮಾರ, ಐ.ಪಿ. ಕರ್ನಾಚಿ, ಬಿ.ಎಚ್. ಪಾಟೀಲ, ಶಿವಯ್ಯ ಹಿರೇಮಠ, ಎ.ಜಿ. ಗುಡಿ, ಎಂ.ಎನ್. ಹಳ್ಳಿ, ವೈ.ಪಿ. ಅಡ್ನೂರ, ಎಂ.ವಿ. ನಡುವಿನಮನಿ, ನಿಂಗಪ್ಪ ಮಲ್ಲಾರಿ, ಹಸನಸಾಬ ಕೂಸನ್ನವರ, ಪಿ.ಎಲ್. ಮುಳಗುಂದ, ಮಾರುತಿ ಹುಲಿಕಟ್ಟಿ, ಫಕ್ಕೀರಪ್ಪ ತೊಪ್ಪಿನ, ಡಿ.ಡಿ. ಮಾದನ್ನವರ, ಎಂ.ಐ. ಕರ್ನಾಚಿ, ಮುರಗೇಶ ಕಸಲಾಪುರ, ಎಂ.ಎಸ್. ಪಾಟೀಲ, ಡಿ.ಪಿ. ಕಿತ್ತಲಿ, ಬಸವರಾಜ ರೋಣದ, ಶೇಖರಗೌಡ ಪಾಟೀಲ, ಐ.ಪಿ. ಪಟ್ಟಣಶೆಟ್ಟಿ, ಈರಣ್ಣ ಗದಗಿನ, ಬಸವರಾಜ ಹೂಗಾರ, ಮಹಾಂತೇಶ ಹುಬ್ಬಳ್ಳಿ ಮುಂತಾದವರು ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

