ಗದಗ

10ರಂದು ಮುಕ್ತ ರಸಪ್ರಶ್ನೆ ಕಾರ್ಯಕ್ರಮ

Published On :

ಹೊಳೆಆಲೂರು: ಸಮೀಪದ ಹೊಳೆಮಣ್ಣೂರು ಗ್ರಾಮದ ವಿದ್ಯಾರ್ಥಿ ಯುವಕ ಸಂಘದ ಆಶ್ರಯದಲ್ಲಿ ಶಿವರಾತ್ರಿ ಪ್ರಯುಕ್ತ ಮಾ. 10ರಂದು ರಾಜ್ಯಮಟ್ಟದ ಮುಕ್ತ ರಸಪ್ರಶ್ನೆ ಕಾರ್ಯಕ್ರಮ ನಡೆಯಲಿದೆ. ಗ್ರಾಮದ ದುರ್ಗಾದೇವಿ ದೇವಸ್ಥಾನ ಆವರಣದಲ್ಲಿ ಅಂದು ಬೆಳಗ್ಗೆ 10.30ಕ್ಕೆ ಸಂತೋಷ ಯಾವಗಲ್ಲ ಉದ್ಘಾಟನೆ ನೆರವೇರಿಸುವರು. ರಾಮನಗೌಡ ಹಟ್ಟಿ ಅಧ್ಯಕ್ಷತೆ ವಹಿಸುವರು. ಪ್ರವೀಣ ಶೆಲ್ಲಿಕೇರಿ, ಶಂಕರಗೌಡ ಪಾಟೀಲ, ಮಲ್ಲಪ್ಪ ಹುಬ್ಬಳ್ಳಿ, ಎಚ್.ಎಲ್. ದಾಸರ, ಜಿ.ಕೆ. ಮಡಿವಾಳರ, ಎಂ.ವಿ. ಅಂಗಡಿ, ರವಿ ಹೂಗಾರ, ಜಿ.ಐ. ಅಂಗಡಿ, ದೇವೇಂದ್ರಪ್ಪ ತಳವಾರ, ಸುರೇಶ ಹುಡೇದ ಅತಿಥಿಗಳಾಗಿ ಆಗಮಿಸುವರು ಎಂದು ಪ್ರಕಟಣೆ ತಿಳಿಸಿದೆ.
ಇಂದು ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭ
ಲಕ್ಷ್ಮೇಶ್ವರ: ಪಟ್ಟಣದ ತಾಯಿ ಪಾರ್ವತಿ ಮಕ್ಕಳ ಬಳಗದ ಬಾಲಕಿಯರ ಪ್ರೌಢಶಾಲೆಯ 10ನೇ ತರಗತಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭ ಮಾ. 8ರಂದು ಬೆಳಗ್ಗೆ 10ಕ್ಕೆ ಪಿಎಸ್ಬಿಡಿ ಸಭಾ ಭವನದಲ್ಲಿ ನೆರವೇರಲಿದೆ. ಸಮಾರಂಭದ ಅಧ್ಯಕ್ಷತೆ ಮುಖ್ಯೋಪಾಧ್ಯಾಯ ರಮೇಶ ನವಲೆ ವಹಿಸಿಕೊಳ್ಳಲಿದ್ದಾರೆ. ಮುಖ್ಯ ಅತಿಥಿಗಳಾಗಿ ಮೇವುಂಡಿ ಸರ್ಕಾರಿ ಪ್ರೌಢಶಾಲೆಯ ಮುಖ್ಯಾಧ್ಯಾಪಕ ಶರಣು ಗೋಗೇರಿ, ಶಾಲಾ ಸುಧಾರಣಾ ಸಮಿತಿ ಅಧ್ಯಕ್ಷರು ಜಯಲಕ್ಷ್ಮೀ ಗಡ್ಡದೇವರಮಠ, ಉಪಾಧ್ಯಕ್ಷೆ ರೋಹಿಣಿಬಾಯಿ ಬಹದ್ದೂರದೇಸಾಯಿ. ಕೋಶಾಧ್ಯಕ್ಷೆ ಜಯಲಕ್ಷ್ಮೀ ಮಹಾಂತಶೆಟ್ಟರ್ ಅವರು ಆಗಮಿಸಲಿದ್ದಾರೆ ಎಂದು ಸಂಸ್ಥೆ ಆಡಳಿತ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ.
ಮುಸ್ಲಿಂ ಜಾಗ್ರತ ವೇದಿಕೆಗೆಪದಾಧಿಕಾರಿಗಳ ನೇಮಕ
ಮುಳಗುಂದ: ಕರ್ನಾಟಕ ರಾಜ್ಯ ಮುಸ್ಲಿಂ ಜಾಗ್ರತ ವೇದಿಕೆ(ರಿ) ಮುಳಗುಂದ ಪಟ್ಟಣದಲ್ಲಿ ನೂತನವಾಗಿ ಅಸ್ಥಿತ್ವಕ್ಕೆ ಬಂದಿದ್ದು, ವೇದಿಕೆ ರಾಜ್ಯಾಧ್ಯಕ್ಷ ಫರೀದಹ್ಮದ್ ಸುಂಕದ ಅವರ ಆದೇಶದ ಮೇರೆಗೆ ಘಟಕದ ಅಧ್ಯಕ್ಷರಾಗಿ ಮೌಲಾಸಾಬ ಸದರಭಾವಿ, ಉಪಾಧ್ಯಕ್ಷರಾಗಿ ನಜೀರಹ್ಮದ್ ದಲೀಲ ಹಾಗೂ ಲಾಲಶ್ಯಾಪೀರ ಮಕಾಂದರ, ಕಾರ್ಯದರ್ಶಿಯಾಗಿ ಖಾಜಾಅಮೀರ್ ಶೇಖ್, ಜಂಟಿಕಾರ್ಯದರ್ಶಿಯಾಗಿ ದಾವಲಸಾಬ ಲಕ್ಷ್ಮೇಶ್ವರ, ಖಜಾಂಚಿಯಾಗಿ ನೂರಹ್ಮದ್ ಮುಜಾವರ ಅವರನ್ನು ನೇಮಕ ಮಾಡಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಜಾವೇದ ಸುಂಕದ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.