ಗದಗ

ಭಾರತಿ ಹಕ್ಕಿ ಆಯ್ಕೆ: ಕಾರ್ಯಕರ್ತರ ವಿಜಯೋತ್ಸವ

Published On :

ಮುಂಡರಗಿ: ಅದೃಷ್ಟ ಕೂಡಿ ಬಂದರೆ ಯಾರು ಯಾವ ಹುದ್ದೆಯನ್ನಾದರೂ ಏರಬಹುದು ಎನ್ನುವುದಕ್ಕೆ ಶುಕ್ರವಾರ ಜರುಗಿದ ಮುಂಡರಗಿ ಪುರಸಭೆ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಚುನಾವಣೆಯೇ ಸಾಕ್ಷಿಯಾಗಿದೆ.
ಮೂಲತಃ ಮುಂಡರಗಿ ತಾಲೂಕಿನ ಬೂದಿಹಾಳ ಗ್ರಾಮದವರಾದ ಭಾರತಿ ಈರಪ್ಪ ಹಕ್ಕಿ ತಮ್ಮ ತಂದೆ, ತಾಯಿಯವರು ಹೋಟೆಲ್ ಉದ್ಯೋಗ ಮಾಡುವ ಮೂಲಕ ಮುಂಡರಗಿಯಲ್ಲಿ ನೆಲೆಗೊಂಡು ಇಲ್ಲಿನ ಪ್ರಜೆಯಾಗಿ ರಾಜಕೀಯ ಪ್ರವೇಶ ಮಾಡಿದ್ದರು. ಅದೃಷ್ಟವಶಾತ್ ಇವರು ಸ್ಪರ್ಧಿಸಿದ 20 ವಾರ್ಡ್ನ ಸದಸ್ಯರಾಗಿ ಆಯ್ಕೆಯಾದರು. ನಂತರ ಸರ್ಕಾರ ಅಧ್ಯಕ್ಷ, ಉಪಾಧ್ಯಕ್ಷ ಹುದ್ದೆಗೆ ಮೀಸಲಾತಿ ಪ್ರಕಟಿಸಿದಾಗ ಕೇವಲ ಒಂದೇ ಒಂದು ಮಹಿಳಾ ಸದಸ್ಯೆಯನ್ನು ಹೊಂದಿದ ಎಸ್ಟಿ ಮಹಿಳೆ ಸ್ಥಾನಕ್ಕೆ ಅಧ್ಯಕ್ಷ ಸ್ಥಾನ ಒಲಿದು ಬಂದಿತು. ಇದರಿಂದಾಗಿ ಪ್ರಥಮ ಬಾರಿಗೆ ಸದಸ್ಯೆಯಾದ ಭಾರತಿ ಹಕ್ಕಿ ಪುರಸಭೆ ಅಧ್ಯಕ್ಷರಾಗಿಯೂ ಅಧಿಕಾರಿ ವಹಿಸಿಕೊಂಡರು. ಈ ಹಿಂದೆ ಯಾವತ್ತೂ ರಾಜಕೀಯ ಮಾಡದ ಇವರು ಇವರ ಪತಿಯ ಮಾರ್ಗದರ್ಶನದಲ್ಲಿ ಮತದಾರರ ಆಶೀರ್ವಾದದಿಂದ ಆಯ್ಕೆಯಾಗಿದ್ದಾರೆ. ಪುರಸಭೆ 12ನೇ ವಾರ್ಡ್ನ ಸದಸ್ಯ ಸೋಮನಗೌಡ ಮಲ್ಲನಗೌಡ ಗೌಡ್ರ ಮೂಲತಃ ಪುರಸಭೆ ವ್ಯಾಪ್ತಿಯ ಶಿರೋಳ ಗ್ರಾಮದವರು. ರೈತ ಕುಟುಂಬದಲ್ಲಿ ಜನಿಸಿದ ಇವರು ಸ್ವತಃ ರೈತರಾಗಿ ಉತ್ತಿ, ಬಿತ್ತುವ ಮೂಲಕ ಪ್ರಥಮ ಬಾರಿಗೆ ರಾಜಕೀಯ ಪ್ರವೇಶ ಮಾಡಿದ್ದಾರೆ. ಇವರಿಗೆ ಪ್ರಥಮದಲ್ಲಿಯೇ ಉಪಾಧ್ಯಕ್ಷ ಸ್ಥಾನ ಒಲಿದು ಬಂದಿದೆ. ನೂತನ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಹೊರಬೀಳುತ್ತಿದ್ದಂತೆ ಕಾರ್ಯಕರ್ತರು, ಅಭಿಮಾನಿಗಳು ಪಟಾಕಿ ಸಿಡಿಸಿ, ಗುಲಾಲು ಎರಚಿ, ಹೂಮಾಲೆ ಹಾಕಿ ಪಟ್ಟಣದಾದ್ಯಂತ ಮೆರವಣಿಗೆ ಮಾಡಲಾಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.