ಗದಗ

ಭಾರತವನ್ನು ಸೋಲಿಸುತ್ತಿರುವ ಸರ್ಕಾರಗಳು: ನಿತ್ಯಾನಂದಸ್ವಾಮಿ

Published On :

ಗದಗ: ಹಿಂದೆ ಇಂಡಿಯಾ ಇಂದಿರಾ ಎಂಬ ಘೋಷಣೆಗಳು ಕೇಳಿ ಬಂದವು. ಇಂದು ಕೆಲವು ದಿನಗಳಿಂದ ಭಾರತ ಗೆಲ್ಲಿಸಿ ಎಂಬ ದೊಡ್ಡ ಅಕ್ಷರದ ಬರಹಗಳು ಎಲ್ಲೆಂದರಲ್ಲಿ ಕಾಣುತ್ತಿವೆ. ಈ ಎರಡು ಘೋಷಣೆಗಳು ಭಾರತವನ್ನು ಎಂದೋ ಸೋಲಿಸಿವೆ. ಪ್ರಜಾಪ್ರಭುತ್ವಕ್ಕೆ ವಿರೋಧವಾಗಿ ಪ್ರಧಾನ ಮಂತ್ರಿ ಆಯ್ಕೆಯನ್ನು ಚುನಾವಣೆ ಮೊದಲೇ ನಿರ್ಧರಿಸಿ ಗೆಲ್ಲಿಸಿ ಎಂದು ಹೇಳುವುದು ಪ್ರಜಾಪ್ರಭುತ್ವಕ್ಕೆ ವಿರೋಧವಾದದ್ದು ಎಂದು ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘಟನೆಯ ಮುಖಂಡ ನಿತ್ಯಾನಂದಸ್ವಾಮಿ ಹೇಳಿದರು.
ಅವರು ಶುಕ್ರವಾರ ನಗರದ ತೋಂಟದಾರ್ಯ ಕಲ್ಯಾಣ ಕೇಂದ್ರದಲ್ಲಿ ನಡೆಯುತ್ತಿರುವ ಡಿವೈಎಫ್‌ಐ ರಾಜ್ಯ ಯುವ ಸಮ್ಮೇಳನದಲ್ಲಿ ಮಾತನಾಡಿದರು. ಅಭಿವೃದ್ಧಿ ಎಂದರೆ ಏನು? ಕೇವಲ ಖಾಸಗೀಕರಣದ ಮೂಲಕ ಎಲ್ಲ ಉತ್ಪಾದನಾ ವಲಯವನ್ನು ಬಂಡವಾಳಶಾಹಿಗಳ ಕೈಗೆ ನೀಡಿ ಅವರಿಂದ ತಮ್ಮ ಲಾಭ ಹೆಚ್ಚಿಸಿಕೊಳ್ಳುತ್ತೀರುವುದು ಅಭಿವೃದ್ಧಿನಾ? ಇಂದೊಂದು ವಂಚನೆಯ ಜಾಲವಾಗಿ ಹೋಗಿದೆ. ಸರ್ಕಾರದ ನಿರ್ವಹಣೆಯಲ್ಲಿ ಕೈಗಾರಿಕೆಗಳು ಇದ್ದರೆ ಅದು ದೇಶಕ್ಕೂ ಮತ್ತು ದೇಶದ ಜನತೆಗೂ ಲಾಭ. ಆದರೆ, ಇಂದು ಅಭಿವೃದ್ಧಿಯೆಂದು ಹೇಳುತ್ತಿರುವುದು ಅಭಿವೃದ್ಧಿ ಅಲ್ಲ ಎಂದರು. ಜನವಾದಿ ಮಹಿಳಾ ಸಂಘಟನೆಯ ಪ್ರಧಾನ ಕಾರ್ಯದರ್ಶಿ ಕೆ.ಎಸ್. ಲಕ್ಷ್ಮಿ, ದೇಶದಲ್ಲಿ ಇಂದು ಯುವ ಜನರಿಗೆ ಉದ್ಯೋಗ ಇಲ್ಲದೇ ನಿರುದ್ಯೋಗಿಗಳಾಗಿದ್ದಾರೆ. ಯುವ ಜನರು ಎಚ್ಚರಗೊಂಡು ಸರ್ಕಾರದ ಈ ನೀತಿಗಳ ವಿರೋಧ ಹೋರಾಟ ಮಾಡಬೇಕು. ಯುವತಿಯರ ಸಮಸ್ಯೆಗಳತ್ತ ಗಮನ ಹರಿಸಬೇಕು. ಮಾಧ್ಯಮಗಳ ಪಾತ್ರ ಇದರಲ್ಲಿ ಮಹತ್ವವಿದ್ದು ಆರೋಗ್ಯಕರ ಸಮಾಜದ ನಿರ್ಮಾಣಕ್ಕೆ ತೊಡಗಬೇಕೆಂದು ಹೇಳಿದರು. ನಂತರ ಹಲವಾರು ಪ್ರಮುಖ ವಿಷಯ ನಿರ್ಧಾರಗಳನ್ನು ಸಮ್ಮೇಳನದಲ್ಲಿ ತೆಗೆದುಕೊಳ್ಳಲಾಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.