ಗದಗ

ಶಾಂತಿ, ಸಹಬಾಳ್ವೆ ಸಾರುವ ಜೈನಧರ್ಮ: ಎ.ಜಿ. ಪಂಡಿತ

Published On :

ರೋಣ: ತಾತ್ವಿಕ ನೆಲೆಗಟ್ಟಿನ ಮೇಲೆ ಗಟ್ಟಿಗೊಂಡಿರುವ ಜೈನ ಧರ್ಮವು ಅಹಿಂಸಾ ಪರೋಧರ್ಮ, ಸತ್ಯ ಸಂಶೋಧನೆ, ಉಧಾತ್ ವಿಚಾರಧಾರೆ, ಸರಳ ಜೀವನ ತತ್ವ ಸಂದೇಶಗಳನ್ನು ಸಾರಿದ್ದು, ಶಾಂತಿ, ಸಹಬಾಳ್ವೆಯ ಪ್ರತೀಕವಾಗಿದೆ ಎಂದು ತಹಸೀಲ್ದಾರ್ ಎ.ಜಿ. ಪಂಡಿತ ಹೇಳಿದರು.
ಅವರು ಈಚೆಗೆ ಪಟ್ಟಣದ ಗುಲಗಂಜಿ ಮಠದ ಸಭಾ ಮಂಟಪದಲ್ಲಿ ಏರ್ಪಡಿಸಲಾದ ಭಗವಾನ್ ಶ್ರೀ 1008 ಪಾರ್ಶ್ವನಾಥ ತೀರ್ಥಂಕರರು ಮತ್ತು 24 ತೀರ್ಥಂಕರರ 12ನೇ ವಾರ್ಷಿಕ ಪೂಜಾ ಮಹೋತ್ಸವವನ್ನು ಉದ್ಘಾಟಿಸಿ ಮಾತನಾಡಿದರು. ಪುರಾತನ ಇತಿಹಾಸ ಹೊಂದಿರುವ ಜೈನಧರ್ಮ ಇದಾಗಿದ್ದು, ಹಿಂದೆ ರಾಜ ಮಹಾರಾಜರು ಜೈನ ಧರ್ಮದ ತತ್ತ್ವ, ಸಿದ್ಧಾಂತ, ಸಂದೇಶಗಳಿಗೆ ಮಾರು ಹೋಗಿ ಜೈನ ಧರ್ಮವನ್ನು ಆರಾಧಿಸಿ ಅಪ್ಪಿಕೊಂಡಿದ್ದರು. ಅದರ ಪ್ರತಿಫಲವಾಗಿ ದೇಶ, ನಾಡಿನಾದ್ಯಂತ ಜೈನ ಬಸದಿಗಳು ನಿರ್ಮಾಣಗೊಂಡಿದ್ದು, ಅವುಗಳು ಇಂದಿಗೂ ಇತಿಹಾಸ ಸಾರುತ್ತಿವೆ. ಜೈನ ಧರ್ಮ ಭಗವಾನ್ ಶ್ರೀ 1008 ಪಾರ್ಶನಾಥ ತೀರ್ಥಂಕರರು ಸ್ಮರಣೀಯ ಕೊಡುಗೆ ನೀಡಿದ್ದಾರೆ ಎಂದರು. ಅಧ್ಯಕ್ಷತೆ ವಹಿಸಿದ್ದ ಯುವ ಮುಖಂಡ ಮಿಥುನ ಪಾಟೀಲ ಮಾತನಾಡಿ, ಭೌಗೋಳಿಕ ವಿಸ್ತೀರ್ಣ, ಜನಸಂಖ್ಯೆಯಲ್ಲಿ ಸಿಂಹಪಾಲ ಹೊಂದಿರುವ ಭಾರತವು ಅನೇಕ ಧರ್ಮಗಳ ತವರೂರಾಗಿದೆ. ಇಲ್ಲಿ ನೂರಾರು ಭಾಷಿಕರು, ಸಾವಿರಾರು ಪಂಗಡಗಳಿದ್ದರೂ ವಿವಿಧತೆಯಲ್ಲಿ ಏಕತೆ ಮೈಗೂಡಿಸಿಕೊಂಡಿದ್ದು, ಇತರ ದೇಶಕ್ಕೆ ಮಾದರಿಯಾಗಿದೆ. ಪರೋಧರ್ಮ ಸಂಹಿಷ್ಣತೆ ಹೊಂದಿದ ಜೈನ ಧರ್ಮವು ನೀಡಿದ ಕೊಡುಗೆ ಶ್ಲಾಘನೀಯವಾಗಿದೆ. ಈ ಧರ್ಮ ಸಮಾಜ ಮುಖ್ಯವಾಹಿನಿಗೆ ಬರುವಲ್ಲಿ ಜನತೆ ಸಹಕಾರ ಮುಖ್ಯವಾಗಿದೆ ಎಂದರು. ಜಿಲ್ಲಾ ದಿಗಂಬರ ಜೈನ ಸಂಘದ ಅಧ್ಯಕ್ಷ ಬೋಜರಾಜ ನಾವಳ್ಳಿ ಮಾತನಾಡಿ, ಕಡಿಮೆ ಜನಸಂಖ್ಯೆ ಹೊಂದಿದ ಜೈನ ಸಮುದಾಯವು ಸಂಘಟಿತರಾಗಬೇಕು. ಅಂದಾಗ ಸರ್ಕಾರದಿಂದ ದೊರೆಯುವ ಸೌಲಭ್ಯ ಪಡೆದುಕೊಳ್ಳಲು ಸಾಧ್ಯವಾಗುತ್ತದೆ. ಪುರಾತನ ಇತಿಹಾಸ ಹೊಂದಿದ ಅನೇಕ ಜೀನ ಬಸಿದಿಗಳಿಂದ ಸರಿಯಾದ ಪಾಲನೆ, ಪೋಷಣೆ ಇಲ್ಲದ್ದರಿಂದ ಕಾಲಗರ್ಭ ಸೇರುತ್ತಿವೆ. ಅವುಗಳ ರಕ್ಷಣೆ ಮತ್ತು ಜೀರ್ಣೋದ್ಧಾರಕ್ಕೆ ಸರ್ಕಾರ ಮುಂದಾಗಬೇಕು ಎಂದು ಆಗ್ರಹಿಸಿದರು. ಗುಲಗಂಜಿ ಮಠದ ಗುರಪಾದ ಸ್ವಾಮೀಜಿ, ಅಭಿನವ ದೇವೇಂದ್ರ ಕೀರ್ತಿ ಭಟ್ಟಾರಕ ಪಟ್ಟಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಪುರಸಭೆ ಅಧ್ಯಕ್ಷ ಮುತ್ತಣ್ಣ ಸಂಗಳದ, ಉಪಾಧ್ಯಕ್ಷೆ ಲಕ್ಷ್ಮಿ ಗಡಗಿ, ದುಂಡಪ್ಪ ಜೂಜಿನ, ತಾಲೂಕು ವಾಣಿಜ್ಯೋದ್ಯಮ ಸಂಸ್ಥೆ ಅಧ್ಯಕ್ಷ ಶಿವಣ್ಣ ಪಲ್ಲೇದ, ಹುಚ್ಚಪ್ಪ ನವಲಗುಂದ, ಸಿ.ಕೆ. ಸುಂಕದ, ದುಡಮ್ಮ ಬಳಿಗೇರ, ದೇವೇಂದ್ರಪ್ಪ ಜಾವೂರ, ಬಾಬು ಮುತ್ತಿನ ಮುಂತಾದವರು ಹಾಜರಿದ್ದರು. ಎಂ.ಡಿ. ಮುತ್ತಿನ ನಿರೂಪಿಸಿ, ಸ್ವಾಗತಿಸಿದರು. ನೇಮಿನಾಥ ಮುತ್ತಿನ ವಂದಿಸಿದರು.
--

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.