ಸಾಧನೆಯ ಹಾದಿಯಲ್ಲಿ ಮಹಿಳೆ
ಕನ್ನಡಪ್ರಭ ವಾರ್ತೆ, ಗದಗ, ಮಾ. 9
ಮಹಿಳೆಯ ಸಾಧನೆಯ ಹಾದಿಯಲ್ಲಿ ಸಾಗಿದ್ದರೂ ಸಹಿತ ಅವಳಿಗೆ ರಕ್ಷಣೆ ಎಂಬುದು ಇಲ್ಲದಂತಾಗಿರುವುದು ವಿಷಾದದ ಸಂಗತಿ ಎಂದು ಗದಗ ಕೆವಿಎಸ್ಆರ್ ಕಾಲೇಜಿನ ಉಪನ್ಯಾಸಕಿ ಕವಿತಾ ಕಾಶಪ್ಪನವರ ಹೇಳಿದರು. ಅವರು ಶನಿವಾರ ನಗರದ ರೂರಲ್ ಹೆಲ್ತ್ಕೇರ್ ಸೆಂಟರ್ನ ದಿಶಾ ವೃತ್ತಿ ತರಬೇತಿ ಕೇಂದ್ರದಲ್ಲಿ ನಡೆದ ವಿಶ್ವ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಮಹಿಳೆಗೆ ಸಾಧನೆಯ ಬದುಕಿಗೆ ಸೂಕ್ತ ಪ್ರತಿಭೆಗೆ ಇನ್ನಷ್ಟು ಪ್ರೋತ್ಸಾಹಕ್ಕೆ ವೇದಿಕೆಗಳು ಅವಶ್ಯವಾಗಿವೆ. ಮಹಿಳೆ ಇಂದು ಪ್ರಗತಿಪಥದಲ್ಲಿ ಸಾಗಿಸುತ್ತಿದ್ದಾಗಲೂ ನಿತ್ಯ ನಿರಂತರ ಅವಳ ಮೇಲೆ ನಾನಾ ಕಾರಣಗಳಿಂದ ದೌರ್ಜನ್ಯಗಳು ಜರುಗುತ್ತಿರುವುದು ವಿಷಾದನೀಯ ಎಂದರು. ಗದುಗಿನ ಜೆ.ಸಿ. ಸ್ಕೂಲ್ನ ಮುಖ್ಯೋಪಾಧ್ಯಾಯನಿ ಗಿರಿಜಾ ಬೇವಿನಕಟ್ಟಿ, ಕವಿತಾ ರಡ್ಡಿ ಮಾತನಾಡಿ, ನಾವೆಲ್ಲರೂ ಇಂದು ಮಹಿಳಾ ಸಬಲೀಕರಣ ಹಾಗೂ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಮೇರಿ ಸಕ್ರಿ ಅವರು ಇಂದಿನ ದಿನಮಾನಗಳಲ್ಲಿ ಮಹಿಳೆಯ ಸ್ಥಾನ ಮಾನಗಳ ಕುರಿತು ಮಾತನಾಡಿದರು. ರೇಷ್ಮಾ ನದಾಫ್, ರುಕ್ಷಾನಾ ಮುಲ್ಲಾ, ಕಾಂಚನಾ ಸಿದ್ಲಿಂಗ್ ಮುಂತಾದವರು ಇದ್ದರು. ಸಾವಿತ್ರಿ ಚಿಕ್ಕಾಡಿ ಸ್ವಾಗತಿಸಿದರು. ಲಕ್ಷ್ಮಿ ಬೇವಿನಕಟ್ಟಿ ಸ್ವಾಗತಿಸಿದರು. ಜಯಶ್ರೀ ಮಾಳಗಿ ನಿರೂಪಿಸಿದರು. ನೇತ್ರಾ ಕಬಾಡಿ ವಂದಿಸಿದರು.
--
ಶಿಕ್ಷಕ ವೃತ್ತಿ ಪವಿತ್ರವಾದದ್ದು: ಡಿ.ಕೆ. ಶೇಠ
ಹೊಳೆಆಲೂರು: ಶಿಕ್ಷಕ ವೃತ್ತಿ ಪವಿತ್ರವಾದದ್ದು, ಅದಕ್ಕೆ ನ್ಯಾಯ ಸಮ್ಮತವಾಗಿ ಕಾರ್ಯನಿರ್ವಹಿಸಿದಲ್ಲಿ ಉತ್ತಮ ನಡೆ, ನುಡಿ, ಸಂಸ್ಕೃತಿಯ ಹೊಂದಿದ ವಿದ್ಯಾರ್ಥಿಗಳನ್ನು ಸಮಾಜಕ್ಕೆ ಕೊಡಲು ಸಾಧ್ಯ ಎಂದು ನಿವೃತ್ತ ಪ್ರಾಧ್ಯಾಪಕ ಡಿ.ಕೆ. ಶೇಠ ಹೇಳಿದರು. ಈಚೆಗೆ ಸ್ಥಳೀಯ ಯಚ್ಚರೇಶ್ವರ ಪ್ರೌಢಶಾಲೆಯ ಸಭಾಭವನದಲ್ಲಿ ಎಸ್ಎಸ್ಎಲ್ಸಿ ವಿದ್ಯಾರ್ಥಿಗಳ ಬೀಳ್ಕೊಡುವ ಸಮಾರಂಭ, ದೀಪದಾನ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಸಮಯಪ್ರಜ್ಞೆ, ಶಿಸ್ತು, ವೃತ್ತಿಗೌರವವನ್ನು ಶಿಕ್ಷಕರು ಅಳವಡಿಸಿಕೊಳ್ಳಬೇಕು. ವಿದ್ಯಾರ್ಥಿಗಳು ಶಿಕ್ಷಕರ ಪ್ರತಿ ಚಲನವಲನವನ್ನೂ ಗಮನಿಸುತ್ತಾರೆ. ಅವರ ಮೇಲೆ ನಮ್ಮ ಒಳ್ಳೆಯ ವ್ಯಕ್ತಿತ್ವ ಪ್ರಭಾವ ಬೀರಬೇಕು ಎಂದರು. ಇದೇ ಸಂದರ್ಭದಲ್ಲಿ ಸ್ಥಳೀಯ ಕಲ್ಮೇಶ್ವರ ಪಿಯು ಕಾಲೇಜಿನಲ್ಲಿ ರಸಾಯನಶಾಸ್ತ್ರ ಪ್ರಾಧ್ಯಾಪಕರಾಗಿ ಕಳೆದ ತಿಂಗಳು ನಿವೃತ್ತರಾದ ಪ್ರೊ. ಡಿ.ಕೆ. ಶೇಠ ಹಾಗೂ ರತಿದೇವಿ ಎಚ್.ಪಿ. ಅವರನ್ನು ಮತ್ತು 2013ನೇ ಸಾಲಿನಲ್ಲಿ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಕೇಂದ್ರಕ್ಕೆ ಪ್ರಥಮ ಸ್ಥಾನ ಪಡೆದ ಸುನೀಲಕುಮಾರ ಧರೆಣ್ಣವರ, ದ್ವಿತೀಯ ಸ್ಥಾನ ಪಡೆದ ವೇದಾ ಗೌಡರಿಗೆ ಸಂಸ್ಥೆಯ ವತಿಯಿಂದ ಸನ್ಮಾನಿಸಲಾಯಿತು. ಸಂಸ್ಥೆಯ ಅಧ್ಯಕ್ಷ ಎ.ಎನ್. ಬಡಿಗೇರ ಅಧ್ಯಕ್ಷತೆ ವಹಿಸಿದ್ದರು. ನಿವೃತ್ತ ಪ್ರಾಧ್ಯಾಪಕ ಡಿ.ಕೆ. ಶೇಠ, ರತಿದೇವಿ ಎಚ್.ಪಿ., ಪಾಂಡುರಂಗ ಪತ್ತಾರ, ಎಂ.ಎಸ್. ಪಾಯಪ್ಪಗೌಡರ, ಪಿ.ವಿ. ಪತ್ತಾರ, ವಿ.ಎ. ಬಡಿಗೇರ, ಎಸ್.ಎಲ್. ಬದಾಮಿ, ಎಸ್.ಎಸ್. ಗೌಡರ, ಎಸ್.ಪಿ. ನದಾಫ, ಎಂ.ಎಸ್. ಪಾಯಪ್ಪಗೌಡರ ಆಗಮಿಸಿದ್ದರು. ಬಿ.ಎಫ್. ಬಾಲನಗೌಡರ ವಾರ್ಷಿಕ ವರದಿ ವಾಚಸಿದರು. ಪಿ.ಎಲ್. ಪಂಚಾಳ ಸ್ವಾಗತಿಸಿದರು. ಎಸ್.ಕೆ. ಆಡಿನ ನಿರೂಪಿಸಿದರು. ಎ.ಎಂ. ಸಿಂದಗಿ ವಂದಿಸಿದರು.
--
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

