ಔಷಧಿ ಸಸ್ಯಗಳು ಕಪ್ಪತ್ತಗುಡ್ಡದ ನಿರ್ದಿಷ್ಟ ಸ್ಥಳದಲ್ಲಿ ಸಿಗುವಂತಾಗಲಿ
ಮುಂಡರಗಿ: ಎಲ್ಲ ಔಷಧಿಯ ಸಸ್ಯಗಳು ಕಪ್ಪತ್ತಗುಡ್ಡದ ಒಂದು ನಿರ್ದಿಷ್ಟವಾದ ಸ್ಥಳದಲ್ಲಿ ಸಿಗುವಂತೆ ಸರ್ಕಾರ ಕ್ರಮ ತೆಗೆದುಕೊಳ್ಳಬೇಕು. ಔಷಧಿಯ ಸಸ್ಯಗಳ ಸಂಗ್ರಹ ಮತ್ತು ಬೆಳೆಸಲು ಬೇಕಾಗುವ ನಿರ್ದಿಷ್ಟ ಸ್ಥಳವನ್ನು ನಂದಿವೇರಿಮಠದಿಂದ ನೀಡುವುದಾಗಿ ಕಪ್ಪತ್ತಗುಡ್ಡದ ನಂದಿವೇರಿ ಮಠದ ಶಿವಕುಮಾರ ಸ್ವಾಮಿಗಳು ಹೇಳಿದರು.
ಅವರು ಈಚೆಗೆ ಇಲ್ಲಿಯ ಕ.ರಾ. ಬೆಲ್ಲದ ಮಹಾವಿದ್ಯಾಲಯ, ಕಪ್ಪತಹಿಲ್ಸ್, ಅರಣ್ಯ ಇಲಾಖೆ ಮತ್ತು ಕಪ್ಪತ್ತಗುಡ್ಡ ಪರಿಸರ ಸಂರಕ್ಷಣಾ ವೇದಿಕೆಯ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿರುವ ಕಪ್ಪತ್ತಗುಡ್ಡದ ಅರಿವು ಕಾರ್ಯಕ್ರಮದಲ್ಲಿ ಕಪ್ಪತ್ತಗುಡ್ಡದಲ್ಲಿ ದೊರೆಯುವಂತಹ ಔಷಧಿಯ ಸಸ್ಯಗಳು ಕುರಿತು ಉಪನ್ಯಾಸ ನೀಡಿದರು. ಕಪ್ಪತ್ತಗುಡ್ಡದಲ್ಲಿ ಸಿಗುವಂತಹ 300ಕ್ಕೂ ಹೆಚ್ಚು ಔಷಧಿಯ ಸಸ್ಯಗಳ ಸಂವರ್ಧನೆಯಾಗಬೇಕು, ಸಂಶೋಧನೆಯಾಗಬೇಕು ಮತ್ತು ಸಂರಕ್ಷಣೆಯಾಗಬೇಕು. ಕಪ್ಪತ್ತಗುಡ್ಡದಲ್ಲಿ ಔಷಧಿಯ ಸಸ್ಯಗಳು ಗಿಡ, ಬಳ್ಳಿ, ಕಂಟಿ ಮುಂತಾದ ರೂಪದಲ್ಲಿ ದೊರೆಯುತ್ತವೆ. ಈ ಪ್ರದೇಶದಲ್ಲಿ ಆಯುರ್ವೇದ ವಿಶ್ವವಿದ್ಯಾಲಯ ಮತ್ತು ಸಂಶೋಧನಾ ಕೇಂದ್ರ ಸ್ಥಾಪನೆಗೊಂಡರೆ ತಜ್ಞರ ಸಂಶೋಧನಕ್ಕೆ ಮತ್ತಷ್ಟು ಅನುಕೂಲವಾಗುತ್ತದೆ ಎಂದರು.
ಪರಿಸರವಾದಿ ಪ್ರೊ. ಸಿ.ಎಸ್. ಅರಸನಾಳ ಕಪ್ಪತ್ತಗುಡ್ಡದ ಇತಿಹಾಸ, ಗುಡಿಗುಂಡಾರಗಳು ಮತ್ತು ಕೆರೆಕಟ್ಟೆಗಳ ಕುರಿತು ಮಾತನಾಡಿ, ಕಪ್ಪತ್ತಗುಡ್ಡದ ಸುತ್ತಲೂ ಇರುವ ಅನೇಕ ಹಿರಿಯರು ಕಪ್ಪತ್ತಗುಡ್ಡದ ಬಗ್ಗೆ ಅನೇಕ ಕಥೆಗಳನ್ನು ಹೇಳುತ್ತಾರೆ. ಕಪ್ಪತ್ತಗುಡ್ಡದ ಹೊಟ್ಟೆಯೊಳಗೆ 20ಕ್ಕಿಂತಲೂ ಹೆಚ್ಚು ಗುಡಿಗುಂಡಾರಗಳು, 30ಕಿಂತಲೂ ಹೆಚ್ಚು ಕೆರೆಕಟ್ಟೆಗಳು ಇವೆ. ಎಲ್ಲ ಕೆರೆಕಟ್ಟೆಗಳಿಗೆ ಒಂದೊಂದು ಹೆಸರು ಇದ್ದು, ಒಂದೊಂದು ಕಥೆಯನ್ನು ಹೇಳುತ್ತವೆ. ಈ ಎಲ್ಲ ಕೆರೆಕಟ್ಟೆಗಳನ್ನು ಹೂಳೆತ್ತಿದರೆ, ಈ ಅರಣ್ಯದಲ್ಲಿರುವ ಪ್ರಾಣಿ-ಪಕ್ಷಿಗಳಿಗೆ ಕುಡಿಯಲು ನೀರನ್ನು ಒದಗಿಸಿದಂತಾಗುತ್ತದೆ. ಇದರಿಂದ ಪ್ರಾಣಿಗಳು ನಾಡಿಗೆ ಬರುವುದು ಕಡಿಮೆಯಾಗುತ್ತದೆ ಎಂದರು.
ಗದಗ ವಿಭಾಗದ ಉಪಅರಣ್ಯ ಸಂರಕ್ಷಣಾಧಿಕಾರಿ ಎನ್.ಡಿ. ಅಘೋರೆ ಕಪ್ಪತ್ತಗುಡ್ಡದಲ್ಲಿಯ ಖನಿಜ, ಪ್ರಾಣಿ ಮತ್ತು ಅರಣ್ಯ ಸಂಪತ್ತು ಕುರಿತು, ಡಾ. ಎಂ.ಬಿ. ಬೆಳವಟಗಿಮಠ, ಡಾ. ವಿ.ಕೆ. ಕೋಳೂರಮಠ, ಡಾ. ಬಿ.ಜಿ. ಜವಳಿ, ಪ್ರೊ. ಬಿ.ಎಫ್. ಈಟಿ, ಪ್ರೊ. ಡಿ.ಸಿ. ಮಠದ, ಪ್ರೊ. ಎಂ.ಜಿ. ಗಚ್ಚಣ್ಣವರ, ಪ್ರೊ. ಜಿ.ಆರ್. ಕಲಬುರ್ಗಿ, ಪ್ರೊ. ಎಸ್.ಆರ್. ಬಸಾಪುರ, ಪ್ರೊ. ಕಲ್ಯಾಣಿ ಸೇರಿದಂತೆ ಮುಂತಾದವರಿದ್ದರು. ಪ್ರೊ. ಎ.ವೈ. ನವಲಗುಂದ ನಿರೂಪಿಸಿ, ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

