ಗದಗ

ಸ್ತ್ರೀಯರಲ್ಲಿ ದೇವತೆ ಗುಣ: ಶಿವಲಿಂಗ ಶಾಸ್ತ್ರಿ

Published On :

ಮುಂಡರಗಿ: ಸಹನೆ, ತಾಳ್ಮೆ, ಕ್ಷಮಾಗುಣ ಮೊದಲಾದ ಗುಣಗಳು ಮಹಿಳೆಯರಲ್ಲಿ ಮನೆ ಮಾಡಿದ್ದರಿಂದ ಮಹಿಳೆಯರನ್ನು ನಾವೆಲ್ಲ ದೇವತೆಗಳಿಗೆ ಹೋಲಿಸುತ್ತೇವೆ. ಜಗತ್ತಿನ ಯಾವುದೇ ದೇಶ ಮಹಿಳೆಯರಿಗೆ ನೀಡದೆ ಇರುವ ಪವಿತ್ರ ಸ್ಥಾನವನ್ನು ಭಾರತೀಯರು ಮಹಿಳೆಯರಿಗೆ ನೀಡಿದ್ದಾರೆ ಎಂದು ಶಿವಲಿಂಗಯ್ಯ ಶಾಸ್ತ್ರಿಗಳು ಹೇಳಿದರು.
ಅವರು ಈಚೆಗೆ ತಾಲೂಕಿನ ಮಲ್ಲಿಕಾರ್ಜುನಪುರ ಗ್ರಾಮದ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ಏರ್ಪಡಿಸಿದ್ದ ಪುರಾಣ ಮಹಾಮಂಗಲ ಹಾಗೂ 1008 ಮಹಿಳೆಯರಿಗೆ ಉಡಿ ತುಂಬುವ ಸಮಾರಂಭದಲ್ಲಿ ಮಾತನಾಡಿದರು.
ಒಂದು ಜೀವಕ್ಕೆ ತನ್ನ ಉದರದಲ್ಲಿ ಪ್ರಾಣ ದೀಕ್ಷೆ ನೀಡುವ ಮೂಲಕ ಮಹಿಳೆ ಬ್ರಹ್ಮನಿಗೆ ಸಮಾನಳಾಗುತ್ತಾಳೆ. ಆ ಕಾರಣದಿಂದ ಅನಾದಿಕಾಲದಿಂದಲೂ ನಮ್ಮ ಪೂರ್ವಜರು ವಿವಿಧ ಶುಭ ಸಮಾರಂಭಗಳಲ್ಲಿ ಪವಿತ್ರ ವಸ್ತುಗಳಿಂದ ಮಹಿಳೆಯರ ಉಡಿ ತುಂಬಿ ಅವಳ ಬಯಕೆ ಈಡೇರಿಸುತ್ತಿದ್ದರು. ಉಡಿ ತುಂಬುವ ಕಾರ್ಯಕ್ಕೆ  ಭಾವನಾತ್ಮಕ ಸಂಬಂಧವಿದ್ದು, ಎಲ್ಲವನ್ನೂ ವೈಚಾರಿಕತೆ ದೃಷ್ಟಿಯಿಂದ ನೋಡಬಾರದು ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.