ಗದಗ

ಕಾಲ್ಪನಿಕ ವೇತನ ಸಮಸ್ಯೆ ಬಗೆಹರಿಸಲು ವಿಪ ಸಭಾಪತಿ ಮಧ್ಯಸ್ಥಿಕೆ ವಹಿಸಲಿ

Published On :

ಕನ್ನಡಪ್ರಭ ವಾರ್ತೆ, ಗದಗ, ಮಾ. 10
ಬಾಕಿ ವೇತನ ನೀಡದೆ ನೇಮಕಾತಿ ದಿನಾಂಕದಿಂದ ಸೇವೆಯನ್ನು ಪರಿಗಣಿಸಿ, ವೇತನ ಮರುನಿಗದಿ ಹಾಗೂ ನಿವೃತ್ತಿ ವೇತನಕ್ಕೆ ಆದೇಶ ನೀಡುವ ಬಗ್ಗೆ ವಿಪ ಸಭಾಪತಿ ಡಿ.ಎಚ್. ಶಂಕರಮೂರ್ತಿ ಅವರಿಗೆ ಮಾಜಿ ಶಿಕ್ಷಣ ಸಚಿವ, ವಿಪ ಸದಸ್ಯ ಬಸವರಾಜ ಹೊರಟ್ಟಿ ಅವರು ಪತ್ರ ಬರೆದು ಸರ್ಕಾರದ ಭರವಸೆಯನ್ನು ಜಾರಿಗೊಳಿಸುವಲ್ಲಿ ಸಭಾಪತಿಯವರು ವಿಶೇಷ ಆಸಕ್ತಿ ವಹಿಸಲು ಮುಂದಾಗಬೇಕೆಂದು ಮನವಿ ಮಾಡಿದ್ದಾರೆ.
ಕರ್ನಾಟಕದ ಉಚ್ಚ ನ್ಯಾಯಾಲಯದ ಆದೇಶವನ್ನು ಪಾಲಿಸುವ ವಿಚಾರದಲ್ಲಿ 28-01-2014 ಹಾಗೂ 29-01-2014ರಂದು ಸದರಿ ಬಿಲ್ಲಿನ ಬಗ್ಗೆ ಸರ್ಕಾರವು ಸದನಲ್ಲಿ ಮಂಡಿಸಿದಾಗ ಇದನ್ನು ನಾನು ಮತ್ತು ಕೆಲ ಸದಸ್ಯರು ಕೂಡಿ ವಿರೋಧ ವ್ಯಕ್ತಪಡಿಸಿದ್ದೆವು. ಹಾಗೂ ಈ ಬಿಲ್ಲನ್ನು ಸದನದಲ್ಲಿ ವಿರೋಧ ಪಕ್ಷದ ಶಾಸಕರ ಸಂಖ್ಯೆ ಹೆಚ್ಚು ಇದ್ದದ್ದರಿಂದ ತಿರಸ್ಕರಿಸಲು ಒತ್ತಾಯ ಮಾಡಿದ್ದು ತಮಗೆ ಗೊತ್ತಿರುವ ಸಂಗತಿ. ಆದರೆ, ತಮ್ಮ ಅಧ್ಯಕ್ಷತೆಯಲ್ಲಿ ಸಭೆಯನ್ನು ಕರೆದು ಸಾಧಕ ಬಾಧಕಗಳ ಬಗ್ಗೆ ಚರ್ಚೆ ಮಾಡಿದ್ದು ಉಂಟು. ಈ ದಿಶೆಯಲ್ಲಿ ತಮಗೆ ಮತ್ತು ಎಂ.ಸಿ. ನಾಣ್ಯಯನವರಿಗೆ, ನಾವು ಶಿಕ್ಷಕರಿಗೆ ಆಗುವಂತಹ ಕೆಲವು ಲಾಭಗಳನ್ನು ಗಮನಿಸಿ ಈ ವಿಷಯದಲ್ಲಿ ಸರ್ಕಾರ ಕೋರ್ಟ್ ಆದೇಶ ಪಾಲಿಸಬೇಕೆಂದು ಒತ್ತಾಯಿಸಿದ್ದೇವು. ಆದ್ದರಿಂದ ಸರ್ಕಾರಕ್ಕೆ ಸುಮಾರು ರು. 4500 ಕೋಟಿ ಹೊರೆ ಬೀಳುವುದಾಗಿ ಸರ್ಕಾರ ಹೇಳಿರುವ ಹಿನ್ನೆಲೆಯಲ್ಲಿ ಈ ಮಸೂದೆಯನ್ನು ತಿರಿಸ್ಕರಿಸುವ ಬದಲು ಒಂದು ಸೂತ್ರವನ್ನು ಹುಡುಕಲು ಸರ್ಕಾರ ಹೇಳಿದ್ದರಿಂದ ಮತ್ತು ಸರ್ಕಾರದ ಇಬ್ಬರೂ ಶಿಕ್ಷಣ ಮಂತ್ರಿಗಳು ತಾವು, ಅಧಿಕಾರಿಗಳು ಮತ್ತು ನಾವೆಲ್ಲರೂ ಸೇರಿ ಚರ್ಚೆ ಮಾಡಿ ಒಂದು ದಾರಿಯನ್ನು ಹುಡುಕಲು ಶಿಕ್ಷಕರ ಅನೇಕ ಸಂಘಟನೆಗಳು, ಸುಮಾರು ರು. 235 ಕೋಟಿ ಬಿಡುಗಡೆ ಮಾಡಿದರೆ ಸಾಕೆಂಬ ತೀರ್ಮಾನಕ್ಕೆ ಬಂದು ನಮ್ಮ ಮುಂದೆ ಆ ಪ್ರಸ್ತಾವನೆಯನ್ನು ಇಟ್ಟಿದ್ದರು. ಅದರಂತೆ ಚರ್ಚೆ ಮಾಡಲು ಸದನದಲ್ಲಿ ನಾವು ರು. 285 ಕೋಟಿ ಎಂದು ಪಟ್ಟು ಹಿಡಿದಾಗ ಸರ್ಕಾರ ಅದಕ್ಕೆ ಒಪ್ಪಿಗೆ ಕೂಟ್ಟಿತ್ತು. ಸದನದಲ್ಲಿ ಸಿಎಂ ಸಮ್ಮುಖದಲ್ಲಿ ಉನ್ನತ ಶಿಕ್ಷಣ ಸಚಿವ ಆರ್.ವಿ. ದೇಶಪಾಂಡೆ ಒಂದು ಹೇಳಿಕೆಯನ್ನು ನೀಡಿ. ಅದಕ್ಕೆ ಒಪ್ಪಿ ಸದರಿ ಮಸೂದೆಯನ್ನು 30-1-2014ರಂದು ಪಾಸು ಮಾಡಿ ಕೊಟ್ಟೆವು ಅವರ ಹೇಳಿಕೆ ಕಾಲ್ಪನಿಕ ಬಡ್ತಿ ಕುರಿತಂತೆ ಶಿಕ್ಷಣ ಸಂಘಟನೆಗಳು ಲಿಖಿತವಾಗಿ ತಿಳಿಸಿರುವ 285 ಕೋಟಿಯವರೆಗೆ ಆರ್ಥಿಕ ಹೊಣೆಯನ್ನು ನಿರ್ವಹಿಸುವದಾಗಿ  ಭರವಸೆ ನೀಡಿದ್ದರು. ಅಲ್ಲದೇ ಆಡಳಿತಾತ್ಮಕ ಅನುಮೋದನೆಯನ್ನು ಸಹ ಸರ್ಕಾರ ದೊರಕಿಸುವುದೆಂದು ಸದನದಲ್ಲಿ ಹೇಳಿದ್ದರು.
ಆದರೆ, 12-02-2014ರಂದು ಸರ್ಕಾರ ಹೊರಡಿಸಿದ ಗೆಜೆಟ್ ನೋಟಿಪೀಕೆಷನ್‌ನಲ್ಲಿ ಈ ಯಾವ ಅಂಶವು ಇಲ್ಲ. ಆದ್ದರಿಂದ ನನಗೆ ಸರ್ಕಾರದ ಬಗ್ಗೆ ಅನುಮಾನ ಬಂದಿದೆ. ಆದ್ದರಿಂದ ತಾವು ಸಭಾಪತಿಗಳಾಗಿದ್ದು, ತಮ್ಮ ನೇತೃತ್ವದಲ್ಲಿ ನಾವೆಲ್ಲರೂ ಒಪ್ಪಿಗೆಯನ್ನು ಕೊಟ್ಟಿದ್ದು, ಈ ಹಿನ್ನೆಲೆಯಲ್ಲಿ ನಾನು ಈ ಬಿಲ್ಲನ್ನು ತಿರಸ್ಕರಿಸಲು ಒತ್ತಾಯ ಮಾಡಿದ್ದೇಕೆಂದರೆ ಆಗಲೇ ರಾಜ್ಯ ಹೈಕೋರ್ಟ್, ಸರ್ವೋಚ್ಛ ನ್ಯಾಯಾಲಯ, ರಾಜ್ಯಪಾಲರು ಎಲ್ಲರೂ ಇದನ್ನು ಸೂಕ್ಷ್ಮವಾಗಿ ಪರಿಶೀಲಿಸಿ ಶಿಕ್ಷಕರಿಗೆ ಈ ಸೌಲಭ್ಯ ಕೊಡಲು ಸಹಮತ ನೀಡಿರುವುದಾಗಿ ಭಾವಿಸುತ್ತೇನೆ. ಆದರೆ, ಸರ್ಕಾರ ಈ ರೀತಿ ಮಾಡಿದ್ದರಿಂದ ಶಿಕ್ಷಕರು ಅನೇಕ ಗೊಂದಲದಲ್ಲಿದ್ದಾರೆ. ಈ ಹಿನ್ನೆಲೆಯಲ್ಲಿ ತಾವು ಮುಖ್ಯಂತ್ರಿಗಳಿಗೆ ಮತ್ತು ಶಿಕ್ಷಣ ಸಚಿವರಿಗೆ ಒತ್ತಾಯ ಮಾಡಿ, ಸದನದಲ್ಲಿ ಕೊಟ್ಟ ಮಾತಿನಂತೆ ನಡೆಯಲು ವಿನಂತಿಸುತ್ತೇನೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.