ಗದಗ

ಗದಗ: ಹೊಸ ಮತಗಟ್ಟೆಗಳ ಸ್ಥಾಪನೆ

Published On :

ಗದಗ: ಗದಗ ವಿಧಾನಸಭೆ ಕ್ಷೇತ್ರದಲ್ಲಿ ಚುನಾವಣಾ ಆಯೋಗದ ನಿರ್ದೇಶನದನ್ವಯ 5 ಹೆಚ್ಚುವರಿ ಹೊಸ ಮತಗಟ್ಟೆ ಸ್ಥಾಪಿಸಲಾಗಿದೆ.
ಬೆಟಗೇರಿಯ ಕಣವಿ ಪ್ಲಾಟ್‌ನಲ್ಲಿ ಕನ್ನಡ ಹೆಣ್ಣು ಮಕ್ಕಳ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕೊಠಡಿ ಸಂಖ್ಯೆ 3 ಹಾಗೂ 4 ರ ಪೈಕಿ ಮತಗಟ್ಟೆ ಸಂಖ್ಯೆ 24 ಸ್ಥಾಪಿಸಲಾಗಿದ್ದು ಬೆಟಗೇರಿ ಕಣವಿ ಪ್ಲಾಟ್, ಮಂಜುನಾಥ ನಗರ ಗುಡಿಸಲು ಸಾಲುಗಳು ವಾರ್ಡ್ 3ರ ಭಾಗ ಸಂಖ್ಯೆ 3 ಮನೆ ಸಂಖ್ಯೆ 221ರಿಂದ 318 ಇವು ಈ ಮತಗಟ್ಟೆಯ ವ್ಯಾಪ್ತಿಯಲ್ಲಿವೆ. ಗದಗ ಗಂಗಿಮಡಿಯ ಕನ್ನಡ ಗಂಡು ಮಕ್ಕಳ ಸರ್ಕಾರಿ ಶಾಲೆಯಲ್ಲಿ 71 ಸಂಖ್ಯೆ ಮತಗಟ್ಟೆ ಹೊಸದಾಗಿದ್ದು ಇದರಲ್ಲಿ ವಾರ್ಡ್ ಸಂಖ್ಯೆ 22ರ ಭಾಗ 4 ಇವರ ರಿ.ಸ.ನಂ. 299ನ ಎ ದಿಂದ ಡಿ ಹಾಗೂ 400, ಗಂಗಿಮಡಿ ಆಶ್ರಯ ಕಾಲನಿ, ಅಮರೇಶ್ವರ ನಗರ, ಮಾನ್ವಿನಾಲಾ ಬಲಭಾಗಗಳು ಸೇರಿವೆ. ಬೆಟಗೇರಿಯ ರಾಜೀವಗಾಂಧಿ ನಗರದ ಗಂಡು ಮಕ್ಕಳ ಕಿರಿಯ ಸರ್ಕಾರಿ ಪ್ರಾಥಮಿಕ ಶಾಲೆಯ ಕೊಠಡಿ ಸಂಖ್ಯೆ 3 ಹಾಗೂ 8ರಲ್ಲಿ ಸ್ಥಾಪಿತ 97 ಸಂಖ್ಯೆಯ ಮತಗಟ್ಟೆ ವ್ಯಾಪ್ತಿಯಲ್ಲಿ ವಾರ್ಡ್ ಸಂಖ್ಯೆ 29ರ ಭಾಗ 5 ಇದರ ಮನೆ ಸಂಖ್ಯೆ 402 ರಿಂದ 412 ರಾಜೀವಗಾಂಧಿ ನಗರದ ಪಶ್ಚಿಮ ಭಾಗದ ಮನೆ ಸಂಖ್ಯೆ 412-696ದಿಂದ ಎ ಪ್ರದೇಶಗಳು ಸೇರಿವೆ.
ಬೆಟಗೇರಿಯ ಪಿ ಆಂಡ್ ಟಿ ಕ್ವಾರ್ಟರ್ಸ್, ಕನ್ನಡ ಗಂಡು ಮಕ್ಕಳ ಕಿರಿಯ ಪ್ರಾಥಮಿಕ ಶಾಲೆಯ ಕೊಠಡಿ ಸಂಖ್ಯೆ 16ರಲ್ಲಿ ಸ್ಥಾಪಿತ 101 ಸಂಖ್ಯೆಯ ಮತಗಟ್ಟೆ ವ್ಯಾಪ್ತಿಯಲ್ಲಿ ಬೆಟಗೇರಿಯ ವಿವೇಕಾನಂದ ನಗರದ ವಾರ್ಡ್ ಸಂಖ್ಯೆ 11ರ ಭಾಗ 4 ಇದರ ಮನೆ ಸಂಖ್ಯೆ 246,  426 ರಿಂದ 729 ಪ್ರದೇಶಗಳು ಸೇರಿವೆ. ನಗರದ ಮುಳಗುಂದ ರೋಡಿನ ಸರ್ಕಾರಿ ಪಪೂ ಕಾಲೇಜಿನಲ್ಲಿ 112 ಸಂಖ್ಯೆಯ ಮತಗಟ್ಟೆ ವ್ಯಾಪ್ತಿಯಲ್ಲಿ ರಾಧಾಕೃಷ್ಣ ನಗರದ ವಾರ್ಡ್ ಸಂಖ್ಯೆ 32ರ ಭಾಗ ಸಂಖ್ಯೆ 5 ಮನೆ ಸಂಖ್ಯೆ 249 ಮತ್ತು 259 ಪ್ರದೇಶಗಳು ಸೇರಿವೆ ಎಂದು ಸಹಾಯಕ ಚುನಾವಣಾಧಿಕಾರಿ ಹಾಗೂ ಗದಗ ಉಪವಿಭಾಗಾಧಿಕಾರಿ ಐ.ಜಿ. ಗದ್ಯಾಳ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.